/newsfirstlive-kannada/media/media_files/2025/09/01/udupi-case-2025-09-01-22-52-53.jpg)
ಉಡುಪಿ: ಬ್ರಹ್ಮಾವರದಲ್ಲಿ ತಾಯಿ, ಮಗು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ. ಮನೆಯ ಸಿಲಿಂಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಯಿ ಸುಷ್ಮೀತಾ (23), ಮಗು ಶ್ರೇಷ್ಠ (1ವರ್ಷ 6 ತಿಂಗಳು) ಮೃತ ದುರ್ದೈವಿಗಳು. ಪತಿ ಕೋರ್ಟ್ ಸಂಬಂಧಿತ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಂಜಾಳು ಹೆರಂಜೆ ಕ್ರಾಸ್ ಬಳಿ ಘಟನೆ ನಡೆದಿದೆ.
ಪತಿಯ ಹಳೆ ಕೇಸು ರಿಓಪನ್ ಮಾಡುವುದಾಗಿ ಪೊಲೀಸರು ಬೆದರಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಹೆದರಿದ ಪತ್ನಿ ಮಗುವಿಗೆ ಮೊದಲು ನೇಣು ಬಿಗಿದು ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.
ಇದನ್ನೂ ಓದಿ:ಸುದೀಪ್ ರಾಜಕೀಯಕ್ಕೆ.. ಕಿಚ್ಚ ಹೇಳಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ