/newsfirstlive-kannada/media/media_files/2025/09/24/subhadr-elephat-2025-09-24-09-19-30.jpg)
ಸುಭದ್ರಾ ಆನೆ Photograph: (ಸುಭದ್ರಾ ಆನೆ)
ದಾವಣಗೆರೆ:ಸುಭದ್ರಾ ಅನ್ನೋ ಆನೆಗಾಗಿ ಎರಡು ಮಠಗಳು ಜಿದ್ದಾಜಿದ್ದಿಗೆ ಬಿದಿದ್ದೆ. ಉಡುಪಿ ಶ್ರೀಕೃಷ್ಣ ಮಠವು ಸುಭದ್ರಾ ಅನ್ನೋ ಹಸರಿನ ಆನೆ ತಮಗೆ ಬೇಕೆಂದು ಕೋರ್ಟ್​ ಮೆಟ್ಟಿಲೇರಿದೆ. ಆದ್ರೆ ದಾವಣಗೆರೆಯ ಹೊನ್ನಾಳಿ ಹಿರೇಕಲ್ಮಠದ ಆಡಳಿತ ಮಂಡಳಿ ‘ಸರ್ಕಾರ ಬರಲಿ, ಯಾರೇ ಬಂದ್ರೂ ನಾವು ಮಾತ್ರ ಆನೆ ಕೊಡಲ್ಲ’ ಅಂತಾ ಪಟ್ಟು ಹಿಡಿದಿದೆ.
ಏನಿದು ಆನೆ ವಿವಾದ..?
ಉಡುಪಿ ಶ್ರೀಕೃಷ್ಣ ಮಠ ಹಾಗೂ ದಾವಣಗೆರೆಯ ಹೊನ್ನಾಳಿ ಹಿರೇಕಲ್ಮಠದ ಮಧ್ಯೆ ‘ಗಜ’ ಸಂಘರ್ಷ ಜೋರಾಗಿದೆ. ಉಡುಪಿ ಮಠದಲ್ಲಿದ್ದಾಗ ಸುಭದ್ರಾ ಅನಾರೋಗ್ಯಕ್ಕೆ ತುತ್ತಾಗಿತ್ತು. ಉಡುಪಿ ಶ್ರೀಕೃಷ್ಣ ಮಠವು ಆನೆ ಸುಭದ್ರಾಗೆ ಅನಾರೋಗ್ಯ ಹಿನ್ನೆಲೆ ಸಕ್ರೆಬೈಲು ಬಿಡಾರಕ್ಕೆ ಚಿಕಿತ್ಸೆಗಾಗಿ ಬಿಟ್ಟಿತ್ತು. ಈ ವೇಳೆ ಆನೆ ನಮಗೆ ಬೇಡ, ಇಲ್ಲಿನ ಆರೈಕೆ ಕೇಂದ್ರದಲ್ಲಿಯೇ ಇರಲಿ ಎಂದು ಶ್ರೀಕಷ್ಣ ಮಠದ ಆಡಳಿತ ಮಂಡಳಿ ಹೇಳಿತ್ತು ಎನ್ನಲಾಗಿದೆ.
ಬಳಿಕ ಹೊನ್ನಾಳಿ ಹಿರೇಕಲ್ಮಠ, ಆನೆಯ ಚಿಕಿತ್ಸೆಗೆ 13 ಲಕ್ಷ ರೂಪಾಯಿ ಖರ್ಚು ಮಾಡಿತ್ತು. ಅಲ್ಲದೇ ಸುಭದ್ರಾ ಆನೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ನಂತರ ಅಂದರೆ 2019ರಲ್ಲಿ ಬೆಂಗಳೂರಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಉಡುಪಿ ಶ್ರೀಕೃಷ್ಣ ಮಠ ದಾನದ ರೂಪದಲ್ಲಿ ಹಿರೇಕಲ್ಮಠಕ್ಕೆ ಸುಭದ್ರಾ ನೀಡಿದ್ದಾಗಿ ಪತ್ರ ಬರೆದಿದೆ. ಜೊತೆಗೆ ಅನಾರೋಗ್ಯಪಿಡೀತ ಆನೆಗೆ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಇಲ್ಲವೆಂದು ಸಹ ಪತ್ರ ಬರೆದಿತ್ತು. ಆದರೆ ಇದೀಗ ಉಡುಪಿ ಕೃಷ್ಣಮಠವು ಆನೆ ತಮಗೆ ಬೇಕು ಎಂದು ಕೋರ್ಟ್​ ಮೆಟ್ಟಿಲೇರಿದೆ. ಬರೋಬ್ಬರಿ 7 ವರ್ಷಗಳ ಬಳಿಕ ‘ನಮ್ಮ ಸುಭದ್ರೆ ಆನೆ ನಮಗೆ ಬೇಕು’ ಅಂತಕಾನೂನು ಹೋರಾಟ ನಡೆಸುತ್ತಿದೆ.
ಹಿರೆಕಲ್ಮಟ ಹೇಳೋದೇನು?
/filters:format(webp)/newsfirstlive-kannada/media/media_files/2025/09/24/dvg-elephant-fight-2025-09-24-09-24-37.jpg)
32 ವರ್ಷದ ಆನೆ ‘ಭದ್ರಾ’ ಸತತ 7 ವರ್ಷದಿಂದ ಹೊನ್ನಾಳಿ ಹಿರೆಕಲ್ಮಟದಲ್ಲಿ ಅಂದ್ರೆ ನಮ್ಮ ಮಠದಲ್ಲಿ ಚನ್ನಾಗಿದ್ದಾಳೆ. ಉಡುಪಿ ಮಠದ ಒಪ್ಪಿಗೆ ಪತ್ರದ ಮೂಲಕ ಆನೆ ಮಠಕ್ಕೆ ತಂದಿದ್ದೇವೆ. ಇದೀಗ ಆನೆ ನಮಗೆ ಬೇಕು ಅಂತ ಕೃಷ್ಣ ಮಠದವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸರ್ಕಾರದಿಂದ ಉಡುಪಿ ಮಠಕ್ಕೆ ನೀಡಬೇಕು ಅಂತ ಆದೇಶ ಮಾಡಿಸಿದ್ದಾರೆ. ಆದ್ರೆ ನಾವು ಎಂತಹ ಸಂಘರ್ಷ ಆಗಲಿ ಸರ್ಕಾರನೇ ಬರಲಿ ನಾವು ಮಾತ್ರ ಆನೆ ನೀಡಲ್ಲ ಎಂದು ಹಿರೆಕಲ್ಮಟದ ಭಕ್ತರು ಪಟ್ಟು ಹಿಡಿದಿದ್ದಾರೆ.