/newsfirstlive-kannada/media/media_files/2025/09/08/lunar_eclipse_next_1-2025-09-08-07-25-18.jpg)
ಬೆಂಗಳೂರು: ಆಕಾಶದಲ್ಲಿ ನಡೆದಂತಹ ವಿಸ್ಮಯವನ್ನು ಜನರೆಲ್ಲರೂ ಕಣ್ತುಂಬಿಕೊಂಡರು. ಸೂರ್ಯ ಹಾಗೂ ಚಂದ್ರನ ನಡುವೆ ಭೂಮಿ ಮೆಲ್ಲನೆ ಬಂದಾಗ ಚಂದ್ರಗ್ರಹಣ ಸಂಭವಿಸಿತು. ಇಂತಹ ಮಹಾ ಅದ್ಭುತವನ್ನು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರ್ವಜನಿಕರು ನೋಡಿ ಖುಷಿ ಪಟ್ಟರು. ಸದ್ಯ ಪೂರ್ಣ ಚಂದ್ರಗ್ರಹಣ ಮುಗಿದಿದ್ದು ಮುಂದಿನ ಚಂದ್ರ ಗ್ರಹಣಗಳು ಯಾವಾಗ?.
ಈ ವರ್ಷದ ಕೊನೆಯ ಚಂದ್ರಗ್ರಹಣ ಮುಗಿದು ಹೋಗಿದೆ. ಹಾಗಾದ್ರೆ ಮುಂದಿನ ಚಂದ್ರ ಗ್ರಹಣಗಳು ಎಷ್ಟು, ಯಾವಾಗ ಸಂಭವಿಸುತ್ತವೆ ಎನ್ನುವ ಮಾಹಿತಿ ಇಲ್ಲಿದೆ. 2026 ರಲ್ಲಿ ಎರಡು ಚಂದ್ರ ಗ್ರಹಣಗಳು ಸಂಭವಿಸಲಿವೆ. ಮೊದಲನೆಯದು 2026ರ ಮಾರ್ಚ್ 3 ಎಂದು ನಡೆಯುತ್ತದೆ. ಇದು ಪೂರ್ಣ ಚಂದ್ರ ಗ್ರಹಣ ಆಗಿರುತ್ತದೆ. ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್, ಅಮೆರಿಕದಲ್ಲಿ ಇದನ್ನು ನೋಡಬಹುದು.
ಇದನ್ನೂ ಓದಿ:ರಾತ್ರಿ ಕ್ಷಣ ಕ್ಷಣಕ್ಕೂ ಶಶಿಯ ಬಣ್ಣ ಬದಲಾವಣೆ.. ಅಪರೂಪದ ಚಂದ್ರಗ್ರಹಣ ಚಂದವೋ ಚಂದ!
ಹಾಗೇ ಎರಡನೇಯ ಚಂದ್ರಗ್ರಹಣ 2026ರ ಆಗಸ್ಟ್ 28 ರಂದು ಸಂಭವಿಸುತ್ತದೆ. ಇದು ಭಾಗಶಃ ಚಂದ್ರ ಗ್ರಹಣವಾಗಿರಲಿದೆ. ಭಾರತದಲ್ಲಿ ಗೋಚರತೆ ಇರುವುದಿಲ್ಲ ಎನ್ನಲಾಗಿದೆ. ಇದು ಅಮೆರಿಕ, ಪೆಸಿಫಿಕ್, ಯುರೋಪ್, ಆಫ್ರಿಕಾ ಸೇರಿ ಇತರೆ ದೇಶಗಳಲ್ಲಿ ಗೋಚರವಾಗಲಿದೆ ಎಂದು ನಾಸಾ ಮಾಹಿತಿ ಹೇಳುತ್ತದೆ.
ಎರಡನೇ ಗ್ರಹಣ ಆಗಸ್ಟ್ 28 ರಂದು ಸಂಭವಿಸಲಿದ್ದು ಇದು ಅರ್ಧ ಗ್ರಹಣವಾಗಿದೆ. ಅಂದರೆ ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಿಂದ ಮುಚ್ಚಿಕೊಳ್ಳುತ್ತದೆ. ಈ ಗ್ರಹಣ 3 ಗಂಟೆ 18 ನಿಮಿಷಗಳ ಕಾಲ ಇರುತ್ತದೆ. ಅಮೆರಿಕ, ಪೆಸಿಫಿಕ್, ಆಫ್ರಿಕಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ಸಾರ್ವಜನಿಕರು ನೋಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ