Advertisment

ತಾಯಿ ವಿರುದ್ಧ ಹೇಳಿಕೆ ಕೊಟ್ಟ ಮಗಳು.. ಕಮಲಾಕರ್ ಭಟ್ ಕೆಸ್​​ಗೆ ಮತ್ತೊಂದು ಟ್ವಿಸ್ಟ್..!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಆರೋಪಿ ಸುಚಿತ್ರಾಳ ಹಿರಿಯ ಮಗಳು ಪೊಲೀಸರ ವಿಚಾರಣೆಗೆ ಒಳಗಾಗಿದ್ದು, ತಾಯಿ ವಿರುದ್ಧ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ.

author-image
Ganesh Kerekuli
kamalakara bhat case
Advertisment

ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಆರೋಪಿ ಸುಚಿತ್ರಾಳ ಹಿರಿಯ ಮಗಳು ಪೊಲೀಸರ ವಿಚಾರಣೆಗೆ ಒಳಗಾಗಿದ್ದು, ತಾಯಿ ವಿರುದ್ಧ ಸ್ಫೋಟಕ ಮಾಹಿತಿ ಬಾಯಿಬಿಟ್ಟಿದ್ದಾಳೆ ಎನ್ನಲಾಗಿದೆ. 

Advertisment

ಮಕ್ಕಳ ರಕ್ಷಣಾ ಘಟಕದಲ್ಲಿ ತನಿಖೆ

ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿದ್ದಾಪುರ ಪೊಲೀಸರು, ಇಂದು ಶಿರಸಿಯ ಮಕ್ಕಳ ರಕ್ಷಣಾ ಘಟಕಕ್ಕೆ ಭೇಟಿ ನೀಡಿ ಮೃತರ ಹಿರಿಯ ಮಗಳನ್ನು ವಿಚಾರಣೆ ನಡೆಸಿದರು. ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಬಾಲಕಿಯಿಂದ ಹೇಳಿಕೆ ಪಡೆಯಲಾಗಿದೆ. 

ಇದನ್ನೂ ಓದಿ: T20 world cup: ಭಾರತದ ಮುಂದಿನ ಪಂದ್ಯ ಯಾವಾಗ? ಕಂಪ್ಲೀಟ್ ಡಿಟೇಲ್ಸ್

ವಸಂತ ನಾಯ್ಕ ಪ್ರಕರಣಕ್ಕೂ ಮುನ್ನ ತಾಯಿ ಸುಚಿತ್ರ ವಿರುದ್ಧ ದೂರು ನೀಡಿದ್ದಳು. ಅಮ್ಮನ ನಡೆ ಮೇಲೆ ಬೇಸತ್ತು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಳು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಆಕೆ ಅಪ್ರಾಪ್ತ ಬಾಲಕಿಯಾಗಿದ್ದರಿಂದ, ನಿಯಮದ ಪ್ರಕಾರ ಪೊಲೀಸರು ಆಕೆಯನ್ನು ಶಿರಸಿಯ ಮಕ್ಕಳ ರಕ್ಷಣಾ ಘಟಕಕ್ಕೆ ಹೋಗಿ ದೂರು ನೀಡುವಂತೆ ಸೂಚಿಸಿ ಕಳುಹಿಸಿದ್ದರು ಎಂದು ತಿಳಿದುಬಂದಿದೆ.

ಇಂದು ನಡೆದ ತನಿಖೆಯ ವೇಳೆ ಬಾಲಕಿ, ತನ್ನ ತಾಯಿ ಸುಚಿತ್ರಾ ಅವರಿಂದ ತನಗೆ ಆಗುತ್ತಿದ್ದ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಮಾಹಿತಿ ನೀಡಿದ್ದಾಳೆ. ಈ ಕುರಿತು ತನ್ನ ಹಸ್ತಾಕ್ಷರದಲ್ಲಿಯೇ ಹೇಳಿಕೆಯನ್ನು ದಾಖಲಿಸಿ ಅಧಿಕಾರಿಗಳಿಗೆ ನೀಡಿದ್ದಾಳೆ. ತಾಯಿ ಮತ್ತು ತಂದೆಯ ನಡುವಿನ ಜಗಳದಲ್ಲಿ ಮಗಳು ಸಂಪೂರ್ಣವಾಗಿ ತಂದೆಯ ಪರ ವಾಲಿದ್ದಾಳೆ. ವಿಚಾರಣೆ ವೇಳೆ ‘ನಾನು ತಂದೆಯ ಜೊತೆ ಇರುತ್ತೇನೆ’ (ತಂದೆಯ ಮನೆಯವರೊಂದಿಗೆ) ಎಂದು ಹೇಳಿಕೆ ನೀಡುವ ಮೂಲಕ, ತಾಯಿಯ ಕೃತ್ಯದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾಳೆ.
ಒಟ್ಟಿನಲ್ಲಿ ಫೆಬ್ರವರಿ 2 ರಂದು ಸುಚಿತ್ರಾ ನೀಡಿದ್ದ ದೂರಿನ ಜಾಡು ಹಿಡಿದು ಹೊರಟ ಪೊಲೀಸರಿಗೆ, ಈಗ ಮಗಳ ಹೇಳಿಕೆ ಪ್ರಮುಖ ಅಸ್ತ್ರವಾಗಿ ಸಿಕ್ಕಂತಾಗಿದೆ. ಸಿದ್ದಾಪುರ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

Advertisment

ಇದನ್ನೂ ಓದಿ: ತಮಿಳುನಾಡಿನ ದೀಪ ಬೆಳಗುವ ವಿವಾದ : ಬೆಟ್ಟದ ದರ್ಗಾದಲ್ಲಿ ನಿತ್ಯ ನಮಾಜ್‌ ನಿರ್ಬಂಧ ಎತ್ತಿ ಹಿಡಿದ ಸುಪ್ರೀಂಕೋರ್ಟ್‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

astrologer Kamalakar bhat
Advertisment
Advertisment
Advertisment