/newsfirstlive-kannada/media/media_files/2025/12/19/karwar-bird-4-2025-12-19-08-44-31.jpg)
ಕಾರವಾರದಲ್ಲಿ ಸಿಕ್ಕಿ ಬಿದ್ದಿರೋ ಪಕ್ಷಿಯ ಸುತ್ತ ಅನುಮಾನದ ಹುತ್ತವೇ ಬೆಳ್ಕೊಂಡಿದೆ. ಅದು ನೇರವಾಗಿ ಕೈ ಮಾಡಿ ತೋರಿಸ್ತಾ ಇರೋದು ಚೀನಾವನ್ನು. ಕಾರಣ, ಪಕ್ಷಿಗೆ ಅಳವಡಿಸಿದ್ದ ಜಿಪಿಎಸ್ ಟ್ರ್ಯಾಕರ್ ಚೀನಾದ್ದು. ಈ ಬಗ್ಗೆ ಪಕ್ಷಿ ಪ್ರೇಮಿಗಳನ್ನ ಕೇಳಿದ್ರೆ ಸಂಶೋಧನೆ ಅಸ್ತ್ರ ಹಾಕ್ತಾರೆ. ಹಾಗಾದ್ರೆ, ಸಂಶೋಧನೆ ನೆಪದಲ್ಲಿ ಬೇಹುಗಾರಿಕಾ ಆಟ ಶುರುವಾಯ್ತಾ? ಚೀನಾ ಯಾವ ಯಾವ ರೀತಿಯಲ್ಲಿ ಬೇಹುಗಾರಿಕೆ ಮಾಡುತ್ತೆ? ಚೀನಾ ಸ್ಪೈ ಭಾರತಕ್ಕೆ ಅದೆಷ್ಟು ಡೇಂಜರ್?
ಸೀಗಲ್ ಪಕ್ಷಿ... ಶ್ರೀಲಂಕಾ ಸಂಶೋಧನಾ ಸಂಸ್ಥೆ... ಚೀನಾ ಜಿಪಿಎಸ್... ಅನ್ನೋದು ಸದ್ಯಕ್ಕೆ ಗೊತ್ತಾಗಿರೋ ವಿಚಾರ. ಇನ್ನು ಸೀಗಲ್ ಪಕ್ಷಿಯ ಮೇಲೆ ಸಿಕ್ಕಿರೋ ಎಲೆಕ್ಟ್ರಾನಿಕ್ ಡಿವೈಸ್ ಅನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಅದ್ರಲ್ಲಿ ಏನಾದ್ರೂ ವರದಿ ಬರುತ್ತಾ ಅನ್ನೋದನ್ನ ಪೊಲೀಸ್ರು ಕಾಯ್ತಿದ್ದಾರೆ. ಒಂದ್ ವೇಳೆ ಅದ್ರಲ್ಲಿ ಏನಾದ್ರೂ ಸುಳಿವು ಸಿಕ್ತು ಅಂದ್ರೆ ಕುತಂತ್ರಿ ರಾಷ್ಟ್ರದ ಬಂಡವಾಳ ಬಯಲಾಗುತ್ತೆ. ನಿಜಕ್ಕೂ ಅದು ಸಂಶೋಧನೆಗಾಗಿ ಮಾಡಿದ್ದಾ? ಇಲ್ಲವೇ ಬೇಹುಗಾರಿಕೆಗಾ? ಅನ್ನೋದು ಹೊರಬರುತ್ತೆ.
ಇದನ್ನೂ ಓದಿ: ಕಾರವಾರಕ್ಕೆ ಬಂತು ಅದೊಂದು ನಿಗೂಢ ಪಕ್ಷಿ! ಬೇಹುಗಾರಿಕೆ ಆಟ ಆಡ್ತಿದ್ಯಾ ಚೀನಾ?
/filters:format(webp)/newsfirstlive-kannada/media/media_files/2025/12/19/karwar-bird-3-2025-12-19-08-51-57.jpg)
ಚೀನಾ ಜಿಪಿಎಸ್ ಟ್ರ್ಯಾಕರ್ ಸುತ್ತ ಅನುಮಾನದ ಹುತ್ತ!
ಸಾಮಾನ್ಯವಾಗಿ ಪಕ್ಷಿಗಳ ಅಧ್ಯಯನಕ್ಕೆ ಜಿಪಿಎಸ್ ಟ್ರ್ಯಾಕರ್‌ಗಳನ್ನ ಬಳಸಲಾಗುತ್ತೆ. ಅದನ್ನ ಬಳಕೆ ಮಾಡಿದ್ರೆ ಹಕ್ಕಿಗಳ ಚಲನವಲನದ ಬಗ್ಗೆ ಅಧ್ಯಯ ಮಾಡಲು ಅನುಕೂಲವಾಗುತ್ತೆ. ಹೇಗೆ ಅಂದ್ರೆ, ಯಾವ ಜಾತಿಯ ಪಕ್ಷಿಗಳು ಯಾವ ದಿಕ್ಕಿನತ್ತ ಹಾರಿ ಹೋಗ್ತಾವೆ? ಚಳಿಗಾಲದಲ್ಲಿ, ಮಳೆಗಾಲದಲ್ಲಿ, ಬೇಸಿಗೆ ಗಾಲದಲ್ಲಿ. ಹೀಗೆ ಮೂರು ಕಾಲದಲ್ಲಿ ಪಕ್ಷಿಗಳು ಎಲ್ಲೆಲ್ಲಿ ಇರ್ತಾವೆ ಅನ್ನೋ ಮಾಹಿತಿ ಲಭ್ಯವಾಗುತ್ತೆ. ಹಾಗೇ ಒಮ್ಮೆ ಬಂದು ಹೋದ ಸ್ಥಳಕ್ಕೆ ಪುನಃ ಬರ್ತಾವೋ ಇಲ್ವೋ? ಅನ್ನೋ ಮಾಹಿತಿಯೂ ಜಿಪಿಎಸ್ ಟ್ರ್ಯಾಕರ್ ಮೂಲಕ ಪತ್ತೆ ಮಾಡೋದಕ್ಕೆ ಸಾಧ್ಯವಾಗುತ್ತೆ. ಹೀಗಾಗಿಯೇ ಪಕ್ಷಿ ಅಧ್ಯಯನ ಕೇಂದ್ರಗಳು ಬೇರೆ ಬೇರೆ ಜಾತಿಯ ಪಕ್ಷಿಗಳನ್ನ ಹಿಡಿದು ಅವುಗಳಿಗೆ ಜಿಪಿಎಸ್ ಟ್ರ್ಯಾಕರ್ ಅಳವಡಿಸಿ ಹಾರಿ ಬಿಡುತ್ತವೆ.
ಸಂಶೋಧನಾ ಕೇಂದ್ರಗಳು ಅಧ್ಯಯನ ದೃಷ್ಟಿಯಿಂದ ಹಾಗೇ ಮಾಡ್ತಾ ಇರೋದು ಖಂಡಿತವಾಗಿ ಒಳ್ಳೆಯದು. ಆದ್ರೆ ಸಂಶೋಧನಾ ನೆಪದಲ್ಲಿ ಬೇರೆ ಬೇರೆ ದೇಶದ ಮೇಲೆ ಬೇಹುಗಾರಿಕೆ ನಡೀತಾ ಇದೆಯಾ? ಅನ್ನೋ ಅನುಮಾನ ಖಂಡಿತವಾಗಿಯೂ ಇದೆ. ಅದು ಹೇಗೆ ಅಂದ್ರೆ ಸಂಶೋಧನಾ ಕೇಂದ್ರದಲ್ಲಿಯೇ ಬೇಹುಗಾರರು ಸೇರ್ಕೊಂಡ್ ಇರ್ಬಹುದು. ಅವ್ರು ಮಾಹಿತಿಯನ್ನ ಕದೀತಾ ಇರ್ಬಹುದು. ಇಲ್ಲವೇ ಸಂಶೋಧನಾ ಕೇಂದ್ರದ ಹೆಸರಲ್ಲಿಯೇ ಬೇಹುಗಾರರು ಕುತಂತ್ರ ಕೆಲ್ಸ ಮಾಡ್ತಾ ಇರ್ಬಹುದು. ಇಂತಾ ವಿಚಾರದಲ್ಲಿ ನಮ್ಮ ಪಕ್ಕದಲ್ಲಿಯೇ ಇರೋ ಚೀನಾ ಎತ್ತಿದ ಕೈ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.
ಇದನ್ನೂ ಓದಿ: ಕಾರವಾರಕ್ಕೆ ಬಂತು ಅದೊಂದು ನಿಗೂಢ ಪಕ್ಷಿ! ಬೇಹುಗಾರಿಕೆ ಆಟ ಆಡ್ತಿದ್ಯಾ ಚೀನಾ?
/filters:format(webp)/newsfirstlive-kannada/media/media_files/2025/12/18/karwar-bird-2025-12-18-19-24-49.jpg)
ವಿಶ್ವದ ಎಲ್ಲಾ ದೇಶದ ಮೇಲೂ ಬೇಹುಗಾರಿಕೆ.. ಹೇಗಿರುತ್ತೆ ಅದು?
ಜಗತ್ತಿನಲ್ಲಿಯೇ ಅತೀ ಹೆಚ್ಚು ಅಪಾಯಕಾರಿ ದೇಶ ಅಂತ ಯಾವುದಾದ್ರೂ ಇದ್ರೆ ಅದು ಚೀನಾ. ಯಾಕಂದ್ರೆ ಅದರ ಜೊತೆ ವೈರತ್ವ ಇಟ್ಟುಕೊಂಡ್ರೂ ಕಷ್ಟ, ಸ್ನೇಹ ಇಟ್ಟುಕೊಂಡ್ರು ಕಷ್ಟ. ಒಂದ್ ವೇಳೆ ಸ್ನೇಹ ಬೆಳೀತು ಅಂತಾ ಇಟ್ಟುಕೊಳ್ಳಿ... ಆವಾಗ ಅದು ಮಿತ್ರ ರಾಷ್ಟ್ರಕ್ಕೆ ಬೇಕಾಬಿಟ್ಟಿ ಸಾಲ ಕೊಡುತ್ತೆ. ಅದ್ಯಾವಾಗ ಸಾಲ ತೀರಿಸೋದಕ್ಕೆ ಆಗೋದಿಲ್ಲ ಅನ್ನೋದು ಗೊತ್ತಾಗುತ್ತೋ? ಆವಾಗ ಭೂಮಿ ಕಬಳಿಸುತ್ತೆ. ಅಲ್ಲಿಯೇ ತನ್ನದೇ ಆದ ಏರ್‌ಬೇಸ್‌ಗಳನ್ನ ನಿರ್ಮಾಣ ಮಾಡಿಕೊಳ್ಳುತ್ತೆ. ಇಂತಾ ಕುತಂತ್ರ ಬುದ್ಧಿಯಿಂದಲೇ ಚೀನಾ ಜಗತ್ತಿನ ಹಲವಾರು ದೇಶದಲ್ಲಿ ಮಿಲಿಟರಿ ನೆಲೆಯನ್ನ ಸ್ಥಾಪನೆ ಮಾಡ್ಕೊಂಡಿದೆ. ಇನ್ನು ವೈರತ್ವ ಶುರುವಾಯ್ತು ಅಂದ್ರೆ ಶತ್ರುರಾಷ್ಟ್ರವನ್ನ ಅದೆಷ್ಟು ಕುಗ್ಗಿಲು ಸಾಧ್ಯನೋ ಆ ಎಲ್ಲಾ ಕೆಲ್ಸವನ್ನು ಮಾಡುತ್ತೆ. ಸೈಬರ್ ದಾಳಿಗಳನ್ನ ನಡೆಸುತ್ತೆ. ಗಡಿಯಲ್ಲಿ ಕಿರಿಕ್ ಮಾಡುತ್ತೆ, ವ್ಯವಹಾರದಲ್ಲಿ ಕುತಂತ್ರ ಮಾಡೋದನ್ನ ಮಾಡುತ್ತೆ. ಹಾಗೇ ಬೇಹುಗಾರಿಕೆಯನ್ನೂ ನಡೆಸುತ್ತೆ.
ಚೀನಾ ಸ್ಪೈ ತಂತ್ರ!
- ಸೈಬರ್ ಮೂಲಕ ಗುಪ್ತಚರ ಮಾಹಿತಿ ಕಲೆ ಹಾಕುತ್ತೆ!
- ಮಾನವರನ್ನೇ ಸ್ಪೈಗಳಾಗಿ ರೆಡಿ ಮಾಡಿ ವಿದೇಶಕ್ಕೆ ಶಿಫ್ಟ್!
- ತಂತ್ರಜ್ಞಾನ ಮತ್ತು ಡೇಟಾ ಸಂಗ್ರಹ ಮಾಡಿಕೊಳ್ಳುತ್ತೆ!
- ಸಂಶೋಧನಾ ಮಾರ್ಗದಿಂದಲೂ ನಡೆಯುತ್ತೆ ಸ್ಪೈ ಕೆಲ್ಸ!
- ತನ್ನ ದೇಶದ ಕಂಪನಿಗಳ ಮೂಲಕವೂ ಮಾಹಿತಿ ಕಲೆ!
- ಬಲೂನ್‌ಗಳನ್ನ ಹಾರಿಸಿ ಬಿಟ್ಟು ಬೇಹುಗಾರಿಕೆ ಮಾಡುತ್ತೆ!
- ಕರಾವಳಿ ಭಾಗದಲ್ಲಿ ಗಡಗು ನಿಲ್ಲಿಸಿ ಗುಪ್ತ ಮಾಹಿತಿ ಕಳ್ಳತನ!
ಇದನ್ನೂ ಓದಿ:ಬರಬೇಕಾಗಿದ್ದ ಹಣ ಬರಬಹುದು -ನಿಮ್ಮ ರಾಶಿ ಭವಿಷ್ಯ ತುಂಬಾನೇ ಚೆನ್ನಾಗಿದೆ
/filters:format(webp)/newsfirstlive-kannada/media/media_files/2025/12/18/karwar-bird-1-2025-12-18-19-28-26.jpg)
ಚೀನಾ ಬೇಹುಗಾರಿಕೆ ಭಾರತಕ್ಕೇನು ಅಪಾಯ?
ಭಾರತ ಮತ್ತು ಪಾಕಿಸ್ತಾನ ನಡುವೆ ಅದೆಷ್ಟೇ ವೈರತ್ವ ಇರ್ಬಹುದು. ಆದ್ರೆ ಭಾರತದಲ್ಲಿನ ರಕ್ಷಣಾ ಮಾಹಿತಿಯನ್ನ ಕದಿಯೋದಕ್ಕೆ ಸಾಧ್ಯವಾಗೋದಿಲ್ಲ. ಹಾಗೊಂದು ವೇಳೆ ಬೇಹುಗಾರಿಕೆಯಿಂದ ಅಲ್ಪ ಸ್ವಲ್ಪ ಮಾಹಿತಿ ಕಳ್ಳತನ ಮಾಡಿದ್ರೂ ನೇರವಾಗಿ ಯುದ್ಧಕ್ಕೆ ಬರೋ ದಮ್ಮು ಪಾಕಿಸ್ತಾನಕ್ಕೆ ಇಲ್ಲ. ಯುದ್ಧಕ್ಕೆ ಬಂದ್ರೂ ಗೆಲ್ಲೋ ಸಾಮರ್ಥ್ಯ ಪಾಕಿಸ್ತಾನಕ್ಕೆ ಇಲ್ಲ. ಚೀನಾ ಹಾಗಲ್ಲ. ಪಾಕಿಸ್ತಾನಕ್ಕಿಂತ ಚೀನಾ ಅಪಾಯಕಾರಿ. ಯಾಕಂದ್ರೆ ಭಾರತದಲ್ಲಿ ಅದೆಷ್ಟೋ ಚೀನಾ ಆ್ಯಪ್‌ಗಳು ವರ್ಕ್ ಮಾಡ್ತೀವಿ, ಮೊಬೈಲ್ ಕಂಪನಿಗಳು ಕಾರ್ಯನಿರ್ವಹಿಸ್ತಾ ಇವೆ... ಹೀಗಾಗಿ ಒಂದಲ್ಲ ಒಂದ್ ದಿನ ಚೀನಾಗೆ ಅಪಾಯಕಾರಿ ಆಗೋ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಸರ್ಕಾರ ಚೀನಾ ನಿರ್ಮಿತ ಅದೆಷ್ಟೋ ಆ್ಯಪ್‌ಗಳನ್ನ ಬ್ಯಾನ್ ಮಾಡಿದ್ದು ಸತ್ಯ. ಆದ್ರೆ, ಬೇರೆ ಬೇರೆ ಮಾರ್ಗದಲ್ಲಿ ಚೀನಾ ಬೇಹುಗಾರಿಕೆ ಮಾಡ್ತಾ ಇದೆ. ಹೀಗಾಗಿ ಕಾರವಾರದಲ್ಲಿ ಕಾಣಿಸ್ಕೊಂಡಿರೋ ಸೀಗಲ್ ಹಕ್ಕಿಯಲ್ಲಿರೋ ಚೀನಾ ಜಿಪಿಎಸ್ ಟ್ರ್ಯಾಕರ್ ಮೇಲೆ ಅನುಮಾದ ಹುತ್ತ ಖಂಡಿತವಾಗಿಯೂ ಇದೆ.
ಇದನ್ನೂ ಓದಿ: ಕಾರವಾರಕ್ಕೆ ಬಂತು ಅದೊಂದು ನಿಗೂಢ ಪಕ್ಷಿ! ಬೇಹುಗಾರಿಕೆ ಆಟ ಆಡ್ತಿದ್ಯಾ ಚೀನಾ?
ಮಿತ್ರ ರಾಷ್ಟ್ರಗಳ ಮೇಲೆಯೇ ಚೀನಾ ಬೇಹುಗಾರಿಕೆ ಮಾಡುತ್ತೆ. ಹೀಗಿದ್ದಾಗ ವಿರೋಧಿ ರಾಷ್ಟ್ರಗಳ ಮೇಲೆ ಬೇಹುಗಾರಿಕೆ ಮಾಡದೇ ಇರುತ್ತಾ? ಖಂಡಿತ ಮಾಡುತ್ತೆ. ಕಾರವಾರದಲ್ಲಿ ಸಿಕ್ಕಿರೋ ಪಕ್ಷಿಯ ಜಿಪಿಎಸ್ ಟ್ರ್ಯಾಕರ್‌ನ ಮೂಲ ಪತ್ತೆ ಮಾಡ್ಬೇಕು. ಸಂಶೋಧನೆ ನೆಪದಲ್ಲಿ ಸ್ಪೈ ಆಗ್ತಾ ಇದೆಯಾ ಅನ್ನೋದನ್ನ ಕಂಡು ಹಿಡಿಯಬೇಕು.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us