/newsfirstlive-kannada/media/media_files/2025/12/18/karwar-bird-2025-12-18-19-24-49.jpg)
ನಿಗೂಢ ಪಕ್ಷಿ.. ಎರಡ್ಮೂರು ದಿನಗಳ ಹಿಂದೆ ಕಾರವಾರದ ಬೀಜ್‌ನಲ್ಲಿ ನಿಗೂಢ ಪಕ್ಷಿಯೊಂದು ಪತ್ತೆಯಾಗಿದೆ. ಆ ಪಕ್ಷಿಯ ಸುತ್ತ ಈಗ ಅನುಮಾನದ ಹುತ್ತವೇ ಬೆಳ್ಕೊಂಡಿದೆ. ಅರೇ ಇದೇನಿದು? ಪಕ್ಷಗಳ ಸುತ್ತ ಏನಾದ್ರೂ ಅನುಮಾನ ಪಡೋದಕ್ಕೆ ಆಗುತ್ತಾ? ಪಾಪ ಪಕ್ಷಿಗಳಿಗೆ ಇದು ಭಾರತ, ಅದು ಚೀನಾ, ಪಕ್ಕದಲ್ಲಿ ಪಾಕಿಸ್ತಾನ ಅನ್ನೋದ್ ಗೊತ್ತಿರುತ್ತಾ? ಅವುಗಳು ಯಾವುದೇ ಅರಿವಿಲ್ಲದೇ ಬಾರ್ಡರ್‌ಗಳನ್ನ ಹಾಕಿಕೊಳ್ಳದೇ ಹಾರಾಡ ಮಾಡ್ತಾವೆ. ಜನರಿಗೆ ಗಡಿ ರೇಖೆಗಳು ಇರ್ಬಹುದು. ಆದ್ರೆ, ಪಕ್ಷಿಗಳಿಗೆ ಖಂಡಿತವಾಗಿಯೂ ಇಲ್ಲ. ಆದ್ರೆ, ಕಾರವಾದ ಬೀಜ್‌ನಲ್ಲಿ ಪತ್ತೆಯಾಗಿರೋ ಸೀಗಲ್ ಅನ್ನೋ ಪಕ್ಷಿ ಸಾಮಾನ್ಯದಲ್ಲ. ಅದರ ಮೇಲಿರೋ ಎಲೆಕ್ಟ್ರಾನಿಕ್ ಡಿವೈಸ್ ಏನಿದು ಅದು ನಿಗೂಢ ಪಕ್ಷಿ ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ.
ಇದನ್ನೂ ಓದಿ:28 ಕೋಟಿ ನೀರಿನಲ್ಲಿ ಹೋಮ..! ಯಾವ ಫ್ರಾಂಚೈಸಿ ಹೇಗೆಲ್ಲ ಕೈಸುಟ್ಟುಕೊಂಡಿವೆ?
/filters:format(webp)/newsfirstlive-kannada/media/media_files/2025/12/18/karwar-bird-3-2025-12-18-19-28-02.jpg)
ಕಾರವಾರ ಭದ್ರತಾ ದೃಷ್ಟಿಯಿಂದ ಅತೀ ಸೂಕ್ಷ್ಮ ಪ್ರದೇಶ.. ಅಲ್ಲಿ ಐಎನ್‌ಎಸ್ ನೌಕಾ ನೆಲೆ ಇದೆ. ಅತ್ಯಾಧುನಿಕ ಯುದ್ಧ ನೌಕೆಗಳು.. ಹಡಗುಗಳು.. ಯುದ್ಧಾಸ್ತ್ರಗಳ ಕಣಜವೇ ಇದೆ. ಅಷ್ಟೇ ಅಲ್ಲ, ಕೈಗಾ ವಿದ್ಯುತ್ ಅಣುಸ್ಥಾವರವೂ ಇದೆ. ಹೀಗಾಗಿ ಅಪ್ಪಿ ತಪ್ಪಿ ಏನಾದ್ರೂ ಕೈಗಾ ಅಣು ಸ್ಥಾವರದ ಮಾಹಿತಿ ಸೋರಿಕೆ ಆಯ್ತು.. ವೈರಿ ರಾಷ್ಟ್ರಗಳು ಕುತಂತ್ರ ಮಾಡಿದ್ರು.. ಸೋರಿಕೆ ಶುರುವಾಯ್ತು ಅಂದ್ರೆ ಇಡೀ ಕರ್ನಾಟಕ ಗೋವಾ ಕಣ್ಣೀರು ಹಾಕ್ಬೇಕಾಗುತ್ತೆ. ಅಂತಹ ಸೂಕ್ಷ್ಮ ಪ್ರದೇಶದಲ್ಲಿ ನಿಗೂಢ ಪಕ್ಷಿಯೊಂದು ಪತ್ತೆಯಾಗಿರೋದು ಖಂಡಿತವಾಗಿಯೂ ಅನುಮಾನದ ಹುತ್ತವನ್ನ ಬೆಳೆಸಿದೆ.
ಅದು ಡಿಸೆಂಬರ್ 16ನೇ ತಾರೀಕು.. ಜನ ಕಾರವಾದ ಬೀಚ್‌ನಲ್ಲಿ ಸಹಜವಾಗಿ ಓಡಾಡ್ತಾ ಇದ್ರು.. ಅಲ್ಲಿ ಹಾರಾಟ ಮಾಡೋ ಪಕ್ಷಿಗಳನ್ನ ನೋಡಿ ಪ್ರಕೃತಿ ಸೌಂದರ್ಯ ಸವಿಯುತ್ತಾ ಇದ್ರು. ಬಟ್, ಅದೇ ಸಂದರ್ಭದಲ್ಲಿ ಹಾರಲು ಸಾಧ್ಯವಾಗದ, ಮೈಮೇಲೆ ಭಾರವನ್ನು ಹೊಂದಿರೋ ನಿಗೂಢ ಪಕ್ಷಿಯೊಂದು ಕಾಣಿಸಿಕೊಳ್ಳುತ್ತೆ. ಅದು ಹಾರಾಟ ಮಾಡೋದಕ್ಕೆ ಸಾಧ್ಯವಾಗದೇ ಬೀಜ್‌ನಲ್ಲಿಯೇ ಕುಳಿತುಕೊಳ್ಳುತ್ತೆ. ಆ ಪಕ್ಷಿಯನ್ನ ನೋಡಿದ ಜನರಿಗೆ ಅದರ ಮೇಲೆ ಎಲೆಕ್ಟ್ರಾನಿಕ್ ಡಿವೈಸ್ ಇರೋದು ಪತ್ತೆಯಾಗುತ್ತೆ. ಒಂದು ಕ್ಷಣ ಆಘಾತಕ್ಕೆ ಒಳಗಾಗಾತ್ರೆ. ಕಾರಣ, ಅದ್ರಲ್ಲಿ ಏನಿದೆಯೋ ಏನೋ? ಅನ್ನೋ ಭಯ ಶುರುವಾಗುತ್ತೆ. ಯಾರಿಗೆ ಆದ್ರೂ ಅದು ಸಹಜ ಆತಂಕ. ಹೀಗಾಗಿ ಪಕ್ಷಿಯನ್ನ ಮುಟ್ಟೋದಕ್ಕೆ ಯಾರೂ ಹೋಗೋದಿಲ್ಲ. ಹೀಗಾಗಿಯೇ ಅವ್ರು ಪೊಲೀಸ್ ಠಾಣೆಗೆ, ಅರಣ್ಯ ಇಲಾಖೆಗೆ ಮಾಹಿತಿ ಕೊಡ್ತಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಪಕ್ಷಿಯನ್ನ ವಶಕ್ಕೆ ಪಡೀತಾರೆ.
ಇದನ್ನೂ ಓದಿ: 1500 ಜನರು ಇರುವ ಹಳ್ಳಿಯಲ್ಲಿ ಕೇವಲ 3 ತಿಂಗಳಲ್ಲಿ 27,000 ಶಿಶುಗಳ ಜನನ -ಬೆಚ್ಚಿಬಿದ್ದ ಮಹಾರಾಷ್ಟ್ರ
/filters:format(webp)/newsfirstlive-kannada/media/media_files/2025/12/18/karwar-bird-2-2025-12-18-19-28-13.jpg)
ಕಾರವಾರದಲ್ಲಿ ಸಿಕ್ಕಿರೋ ಹಕ್ಕಿ ಸೀಗಲ್. ಇದರ ದೇಹದಲ್ಲಿ ಚೀನಾ ಮೂಲದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿರುವುದು ಭದ್ರತಾ ಹಾಗೂ ಪರಿಸರ ಅಧ್ಯಯನ ವಲಯದಲ್ಲಿ ಆತಂಕ ಮೂಡಿಸಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಉತ್ತರ ಕನ್ನಡ ಜಿಲ್ಲಾ ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಹಕ್ಕಿಯ ದೇಹದಲ್ಲಿದ್ದ ಜಿಪಿಎಸ್ ಟ್ರ್ಯಾಕರ್ ಅನ್ನು ಸುರಕ್ಷಿತವಾಗಿ ಹೊರತೆಗೆದು ತಪಾಸಣೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಜಿಪಿಎಸ್ ಟ್ರ್ಯಾಕರ್ ಚೀನಾದ ‘ಇಕೋ–ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿ’ ಎಂಬ ಸಂಸ್ಥೆಗೆ ಸಂಬಂಧಿಸಿದ್ದು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಟ್ರ್ಯಾಕರ್‌ಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳಲು ಇಕೋ -ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿಗೆ ಸಂಸ್ಥೆಯನ್ನು ಇಮೇಲ್ ಮೂಲಕ ಸಂಪರ್ಕಿಸಿದೆ.
ಚೀನಾ ಜಿಪಿಎಸ್ ಸಿಗ್ನಲ್, ತನಿಖೆಯಲ್ಲಿ ಸಿಕ್ಕಿದ್ದೇನು?
ಸದ್ಯಕ್ಕೆ ಪತ್ತೆಯಾಗಿರೋ ಪಕ್ಷಿಯ ಮೇಲಿರೋ ಎಲೆಕ್ಟ್ರಾನಿಕ್ ಡಿವೈಸ್ ಏನು? ಅದು ಯಾವ ದೇಶದ ಸಿಗ್ನಲ್? ಅನ್ನೋದನ್ನ ಪೊಲೀಸ್ರು ಪತ್ತೆ ಮಾಡಿದ್ದಾರೆ. ಆದ್ರೆ, ಸಂಶೋಧನೆಗೆ ಹಾರಿಸಿದ್ದಾ? ಇಲ್ಲವೇ ಬೇಹುಗಾರಿಕೆಗಾ ಅನ್ನೋದ್ ಇನ್ನೂ ಕನ್ಫರ್ಮ್ ಆಗಿಲ್ಲ. ಪಕ್ಷಿಯ ಮೇಲಿರೋ ಡಿವೈಸ್ ಚೀನಾದ ಬೀಜಿಂಗ್ ನಗರದಲ್ಲಿನ ಹೈಡಿಯನ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಸಿಇಒ ಆಗಿ ಲೈ ಕಾಮ್ ಎಂಬವರು ಕಾರ್ಯನಿರ್ವಹಿಸ್ತಿದ್ದಾರೆ. ಇಕೋ ಎನ್ವಿರಾನ್ಮೆಂಟ್ ಸೈನ್ಸ್ ಅಕಾಡೆಮಿ ಕಳೆದ ಹಲವು ದಶಕಗಳಿಂದ ಪರಿಸರ, ವನ್ಯಜೀವಿ ಮತ್ತು ಜೀವಸಂಕುಲ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಅಂತರರಾಷ್ಟ್ರೀಯ ಮಟ್ಟದ ಸಂಶೋಧನಾ ಸಂಸ್ಥೆಯಾಗಿದೆ. ಇದು ಸದ್ಯಕ್ಕೆ ಸಿಕ್ಕಿರೋ ಮಾಹಿತಿ. ಆದ್ರೆ, ಅದು ಚೀನಾದ ಬೇಹುಗಾರಿಕೆಯ ಅನುಮಾನವನ್ನ ಮೂಡಿಸ್ತಿದೆ.
ಇದನ್ನೂ ಓದಿ:ಲಂಕೆಯಲ್ಲಿ ರಶ್ಮಿಕಾ ಮಂದಣ್ಣ.. ಗೆಳತಿಯರ ಜೊತೆ ‘ಬ್ಯಾಚುಲರ್ ಪಾರ್ಟಿ’ ಎಂದ ಫ್ಯಾನ್ಸ್..! Photos
/filters:format(webp)/newsfirstlive-kannada/media/media_files/2025/12/18/karwar-bird-1-2025-12-18-19-28-26.jpg)
ಅರಣ್ಯ ಇಲಾಖೆ ಮತ್ತು ಪೊಲೀಸರು ಸಂಶೋಧನೆ ಶುರು ಮಾಡಿದ್ದಾರೆ. ಡಿವೈಸ್ ಅನ್ನ ಸದ್ಯಕ್ಕೆ ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದು. ಅದ್ರಲ್ಲಿ ಏನಾದ್ರೂ ಬೇಹುಗಾರಿಕಾ ಅಂಶ ಇದೆಯಾ? ಅನ್ನೋದನ್ನ ಶೋಧಿಸ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸರು ಸರಿಯಾದ ಹೆಜ್ಜೆಯನ್ನ ಇಟ್ಟಿದ್ದಾರೆ. ಯಾಕಂದ್ರೆ, ಪ್ರಾರ್ಥಮಿಕ ತನಿಖೆಯಲ್ಲಿ ಸಿಕ್ಕಿರೋದೇ ಸತ್ಯ ಅಂತ ಹೇಳೋದಕ್ಕೆ ಸಾಧ್ಯವಿಲ್ಲ. ಅದ್ರಲ್ಲಿಯೂ ಜಿಪಿಎಸ್ ಟ್ರ್ಯಾಕರ್ ಚೀನಾದು ಅನ್ನೋದ್ ಕನ್ಫರ್ಮ್ ಆಗಿದೆ. ಈ ಹಿನ್ನೆಲೆಯಲ್ಲಿ ಪಕ್ಕಾ ತನಿಖೆ ಆಗ್ಬೇಕು. ಅದನ್ನ ಪೊಲೀಸ್ರು ಮಾಡ್ತಾರೆ ಅನ್ನೋ ಭರವಸೆಯನ್ನ ಇಡೋಣ.
ನಿಜಕ್ಕೂ ಆ ಪಕ್ಷಿಯಲ್ಲಿದ್ದ ಜಿಪಿಎಸ್ ಸಂಶೋಧನೆಯದ್ದಾ?
ಸದ್ಯ ಪೊಲೀಸ್ರು ಸೀಗಲ್ ಪಕ್ಷಿಯಲ್ಲಿ ಸಿಕ್ಕಿರೋ ಜಿಪಿಎಸ್ ಅನ್ನ ಭದ್ರತಾ ದೃಷ್ಟಿಯಿಂದ ಯಾವುದೇ ಅನುಮಾನ ಉಂಟಾಗದಂತೆ ಜಿಪಿಎಸ್ ಟ್ರ್ಯಾಕರ್ ನಿಷ್ಕ್ರಿಯಗೊಳಿಸಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇನ್ನೊಂದ್ ವಿಚಾರ ಅಂದ್ರೆ, ಜಿಪಿಎಸ್ ಟ್ರ್ಯಾಕರ್ ಸಹಾಯದಿಂದ ಹಕ್ಕಿಗಳು ಯಾವ ದಿಕ್ಕಿನಲ್ಲಿ ಹಾರತ್ತವೆ? ಎಷ್ಟು ದೂರ ಹಾರುತ್ತವೆ? ಯಾವ ಪ್ರದೇಶಗಳಲ್ಲಿ ವಾಸಿಸುತ್ತವೆ ಹಾಗೂ ಅವುಗಳ ವಲಸೆ ಪಥ ಹೇಗಿರುತ್ತದೆ ಎಂಬ ಮಾಹಿತಿಯನ್ನು ಸಂಗ್ರಹಿಸುವುದು ಸಂಶೋಧನೆಯ ಉದ್ದೇಶವಾಗಿರುತ್ತೆ. ಈ ಹಿನ್ನೆಲೆಯಲ್ಲಿ ಕಾರವಾರದಲ್ಲಿ ಪತ್ತೆಯಾದ ಸೀಗಲ್ ಹಕ್ಕಿಯ ಮೇಲಿದ್ದ ಜಿಪಿಎಸ್ ಟ್ರ್ಯಾಕರ್ ಕೂಡ ಪರಿಸರ ಅಧ್ಯಯನದ ಭಾಗವಾಗಿರಬಹುದು ಅನ್ನೋದು ಪ್ರಾರ್ಥಮಿಕ ಅಂಶ ಅಷ್ಟೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us