/newsfirstlive-kannada/media/media_files/2025/12/18/mahrastra-birth-fraud-2025-12-18-18-01-32.jpg)
ಮಹಾರಾಷ್ಟ್ರದ ಯಾವತ್ಮಲ್ (Yavatmal district) ಜಿಲ್ಲೆಯ ಹಳ್ಳಿ ಒಂದರಲ್ಲಿ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. 1,500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಕೇವಲ ಮೂರು ತಿಂಗಳಲ್ಲಿ ಬರೋಬ್ಬರಿ 27,000 ಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ!
ಶೆಂದೂರ್ಸಾನಿ (Shendurusani) ಗ್ರಾಮದಲ್ಲಿ 27 ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸಿದ್ದಾರೆ ಎಂದು ದಾಖಲೆಗಳು ಹೇಳಿವೆ. ಆದರೆ ಇದು ಸತ್ಯವಲ್ಲ. ಅಸಲಿಗೆ ಇಲ್ಲಿ ನಡೆದಿರೋದು ಸೈಬರ್ ಖದೀಮರ ಕೈಚಳಕ. ಹಣದ ಆಸೆಗಾಗಿ ಸೈಬರ್ ಕಳ್ಳರ ಜೊತೆ ಅಧಿಕಾರಿಗಳು ದೊಡ್ಡ ಹಗರಣದಲ್ಲಿ ಭಾಗಿಯಾದ್ರಾ ಎಂಬ ಅನುಮಾನ ಮೂಡಿದೆ. ಅಸಲಿಗೆ ಆಗಿದ್ದೇನು ಅನ್ನೋ ವಿವರ ಹೀಗಿದೆ..
ಇದನ್ನೂ ಓದಿ:ಜೈಲು ಸೇರಿದ ಪತ್ನಿ.. ಲಾಯರ್ ಅಪ್ಪನ ವಿರುದ್ಧ ವಾದಿಸಲು ಕರಿ ಕೋಟ್ ಧರಿಸಿದ ಮಗ..!
ಇದನ್ನು ಮಹಾರಾಷ್ಟ್ರದ ಅತಿದೊಡ್ಡ ಜನನ ಪ್ರಮಾಣಪತ್ರ ಹಗರಣವೆಂದು ಪರಿಗಣಿಸಲಾಗಿದೆ. ಜನನ ಮತ್ತು ಮರಣ ಪ್ರಮಾಣಪತ್ರ ನೀಡಲು ಮಾಹಾರಾಷ್ಟ್ರ ಅಧಿಕಾರಿಗಳು ತುಂಬಾನೇ ವಿಳಂಬ ಮಾಡುತ್ತಿದ್ದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಳೆದ ಸೆಪ್ಟೆಂಬರ್ ಮತ್ತು ನವೆಂಬರ್​ನಲ್ಲಿ ವಿಶೇಷ ಅಭಿಯಾನ ಪ್ರಾರಂಭಿಸಲಾಯಿತು. ಈ ಅವಧಿಯಲ್ಲಿ ಗ್ರಾಮದ ಜನಸಂಖ್ಯೆಗಿಂತ ಹೆಚ್ಚಿನ ಮಕ್ಕಳು ಜನಿಸಿರೋದು ಬೆಳಕಿಗೆ ಬಂದಿದೆ.
ಹಗರಣದಲ್ಲಿ ಸೈಬರ್ ಅಪರಾಧ ಗ್ಯಾಂಗ್ ಭಾಗಿಯಾಗಿದೆ. ಜನನ ಮತ್ತು ಮರಣ ನೋಂದಣಿ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಾಸ ಮಾಡಲಾಗಿದೆ. ಗ್ರಾಮ ಪಂಚಾಯತ್‌ನ CRS ಲಾಗಿನ್ ಐಡಿ ಮುಂಬೈನದ್ದು ಎಂದು ತನಿಖೆಯಿಂದ ತಿಳಿದುಬಂದಿದೆ. ಜನನ ನೋಂದಣಿಯಲ್ಲಿ ವ್ಯತ್ಯಾಸ ಆಗಿರೋದು ಕಂಡು ಬರುತ್ತಿದ್ದಂತೆಯೇ ಜಿಲ್ಲಾ ಆರೋಗ್ಯ ಅಧಿಕಾರಿ ಯಾವತ್ಮಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಲಂಕೆಯಲ್ಲಿ ರಶ್ಮಿಕಾ ಮಂದಣ್ಣ.. ಗೆಳತಿಯರ ಜೊತೆ ‘ಬ್ಯಾಚುಲರ್ ಪಾರ್ಟಿ’ ಎಂದ ಫ್ಯಾನ್ಸ್..! Photos
/filters:format(webp)/newsfirstlive-kannada/media/media_files/2025/12/18/mahrastra-birth-fraud-1-2025-12-18-18-02-59.jpg)
ಜಿಲ್ಲಾ ಪರಿಷತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂದರ್ ಪಟ್ಕಿ ತನಿಖೆಗೆ ಸಮಿತಿ ರಚಿಸಿದ್ದರು. ತನಿಖೆಯಲ್ಲಿ ದಾಖಲಾಗಿರುವ 27,397 ಜನನ ಪ್ರಮಾಣಪತ್ರಗಳು ಮತ್ತು 7 ಮರಣ ಪ್ರಮಾಣಪತ್ರಗಳು ಫೇಕ್ ಅನ್ನೋದು ಪತ್ತೆ ಹಚ್ಚಿದ್ದಾರೆ. ಇದೀಗ ಸಿಆರ್‌ಎಸ್ ಐಡಿಗಳನ್ನು ಹೇಗೆ ತಿರುಚಲಾಗಿದೆ ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ನಕಲಿ ಡೇಟಾವನ್ನು ಬಳಸಿ ಅಥವಾ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಜನನ ಪ್ರಮಾಣಪತ್ರಗಳನ್ನು ರಚಿಸಲಾಗಿದ್ಯಾ ಅನ್ನೋದ್ರ ಬಗ್ಗೆಯೂ ತನಿಖೆ ನಡೆಯುತ್ತಿದೆ.
ವಿಚಾರ ಗೊತ್ತಾಗುತ್ತಿದ್ದಂತೆಯೇ ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಗ್ರಾಮಕ್ಕೆ ಭೇಟಿ ನೀಡಿದರು. 27,397 ಜನನ ಪ್ರಮಾಣಪತ್ರಗಳಲ್ಲಿರುವ ಶೇಕಡಾ 99 ರಷ್ಟು ಹೆಸರುಗಳು ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದವು ಎಂದಿದ್ದಾರೆ. ನಾನು ಸಿಎಂ ಫಡ್ನವೀಸ್ ಅವರೊಂದಿಗೆ ಮಾತನಾಡಿದ್ದೇನೆ. ಎಲ್ಲಾ ಜನನ ಪ್ರಮಾಣಪತ್ರಗಳನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us