ಬೆಂಗಳೂರಿನಲ್ಲಿ ಸಿನಿಮಾ ನಿರ್ಮಾಪಕ, ಸಿದ್ದಾಪುರದಲ್ಲಿ ಕಳ್ಳ.. ನಟಿ ಅಪಹರಣ ಕೇಸ್​​ಗೆ ತಿರುವು..!

ನಿರ್ಮಾಪಕ ಹಾಗೂ ವರ್ಧನ್ ಎಂಟರ್ಪ್ರೈಸ್​ನ ಮಾಲೀಕ ಹರ್ಷ ವರ್ಧನ್​ ಕಳೆದ ಎರಡು ದಿನಗಳ ಹಿಂದೆ ನಟಿಯಾದ ತಮ್ಮ ಪತ್ನಿ ಚೈತ್ರಾ ಆರ್​ ಅವರನ್ನ ಅಪಹರಣ ಮಾಡಿ ಸುದ್ದಿಯಾಗಿದ್ದರು. ಈ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ.

author-image
Ganesh Kerekuli
Kidnap case
Advertisment

ಸಿದ್ದಾಪುರ: ನಿರ್ಮಾಪಕ ಹಾಗೂ ವರ್ಧನ್ ಎಂಟರ್ಪ್ರೈಸ್​ನ ಮಾಲೀಕ ಹರ್ಷ ವರ್ಧನ್​ ಕಳೆದ ಎರಡು ದಿನಗಳ ಹಿಂದೆ ನಟಿಯಾದ ತಮ್ಮ ಪತ್ನಿ ಚೈತ್ರಾ ಆರ್​ ಅವರನ್ನ ಅಪಹರಣ ಮಾಡಿ ಸುದ್ದಿಯಾಗಿದ್ದರು. ಈ ಪ್ರಕರಣವು ಇದೀಗ ಹೊಸ ತಿರುವು ಪಡೆದುಕೊಂಡಿದೆ.  

ಹಾಸನ ಮೂಲದ ಹರ್ಷವರ್ಧನ್​ನನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಪೊಲೀಸರು ಬಂಧಿಸಿದ್ದಾರೆ. 

ಯಾಕೆ ಅರೆಸ್ಟ್ ಮಾಡಿದ್ದಾರೆ..?

2017 ರಲ್ಲಿ ಸಿದ್ದಾಪುರ ತಾಲೂಕಿನ ಹಲಗೇರಿ ಸಮೀಪ ಕುಂಬಾರಕುಳಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತು. ಮನೆಯ ಬಾಗಿಲು ಮುರಿದು ಬಂಗಾರ ಕಳ್ಳತನ ಮಾಡಿದ ಆರೋಪ ಹರ್ಷವರ್ಧನ್ ಮೇಲಿತ್ತು. ಈ ಹಿಂದೆ ಅರೆಸ್ಟ್ ಆಗಿದ್ದ ಹರ್ಷವರ್ಧನ್, ಬಳಿಕ ಜಾಮೀನು ಪಡೆದು ಹೊರಬಂದಿದ್ದರು. 

ಇದನ್ನೂ ಓದಿ: ಖ್ಯಾತ ನಟಿಯ ಕಿಡ್ನ್ಯಾಪ್! ಹೆಂಡತಿಯನ್ನೇ ಅಪಹರಿಸಿದ ಗಂಡ.. ಯಾಕೆ?

Kidnap case (1)

ಇದೇ ಪ್ರಕರಣದಲ್ಲಿ ಕೋರ್ಟ್​ನಿಂದ 10 ಬಾರಿ ವಾರೆಂಟ್ ಜಾರಿಯಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಸಿದ್ದಾಪುರ ಕೋರ್ಟ್​ ಆದೇಶದಂತೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಬಂಧಿಸಲಾಗಿದೆ. ಹರ್ಷವರ್ಧನ್, ‘ನಿನ್ನಲ್ಲೇನೋ ಹೇಳಬೇಕು’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು.  ಈ ಸಿನಿಮಾದ ನಟಿ ಚೈತ್ರಾಳನ್ನು ಪ್ರೀತಿಸಿ ವಿವಾಹವಾಗಿದ್ದು ದಂಪತಿಗೆ ಓರ್ವ ಮಗಳಿದ್ದಾಳೆ. ದಾಂಪತ್ಯದಲ್ಲಿ ವಿರಸ ಬಂದು ಇಬ್ಬರೂ ದೂರವಾಗಿದ್ದರು. ಕೆಲವು ದಿನಗಳ ಹಿಂದೆ ಮಗಳಿಗಾಗಿ ಪತ್ನಿಯನ್ನೇ ಅಪಹರಣ ಮಾಡಿದ ಆರೋಪ ಇದೆ.

ಇದನ್ನೂ ಓದಿ: ಬದಲಾದ ಧೋನಿ ಗೇಮ್​ ಪ್ಲಾನ್.. ಹರಾಜಿನಲ್ಲಿ ಬುದ್ಧಿವಂತಿಕೆ ತೋರಿಸಿದ CSK..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Harsha Vardhan Chaitra R
Advertisment