/newsfirstlive-kannada/media/media_files/2025/09/05/shirasi-1-2025-09-05-22-35-31.jpg)
ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ಗುಂಡು ತಗುಲಿ ಮಗು ಸಾವಿನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಂಗಗಳ ಓಡಿಸಲು ಬಂದಿದ್ದ ನಿತೀಶ್ ಗೌಡ ಎಂಬಾತ ಮಕ್ಕಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿರೋದು ದೃಢವಾಗಿದೆ. ಈ ಸಂಬಂಧ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಗುಂಡು ಹಾರಿಸಿದ್ದ ವ್ಯಕ್ತಿಯನ್ನ ಬಂಧಿಸಿದ್ದಾರೆ.
ಏನಿದು ಪ್ರಕರಣ..?
ಏರ್ ಗನ್ ಬುಲೆಟ್ ತಗುಲಿ 9 ವರ್ಷದ ಬಾಲಕ ಸಾವನ್ನಪ್ಪಿದ್ದ. ಆಟ ಆಡುವ ವೇಳೆ ಆತನ ಸಹೋದರ ಗನ್ ಬಟನ್ ಒತ್ತಿ ಘಟನೆ ನಡೆದಿತ್ತು ಎಂದು ಸುದ್ದಿ ಹರಡಿಸಲಾಗಿತ್ತು. ಸೋಮನಳ್ಳಿಯಲ್ಲಿರುವ ರಾಘವ ಹೆಗಡೆ ಮನೆಯಲ್ಲಿ ಬಸಪ್ಪ ಉಂಡಿ ಹಾಗೂ ಪವಿತ್ರಾ ಉಂಡಿ ದಂಪತಿ ಕೆಲಸ ಮಾಡಿಕೊಂಡು ಉಳಿದಿದ್ದರು.
ರಾಘವ ಹೆಗಡೆ ಅವರ ತೋಟದ ಮನೆಯಲ್ಲಿಯೇ ಈ ದಂಪತಿ ಇಬ್ಬರು ಮಕ್ಕಳ ಜೊತೆ ವಾಸವಿತ್ತು. ಆ ಮಕ್ಕಳು ಸಹ ಅಲ್ಲಿನ ಶಾಲೆಗೆ ಹೋಗುತ್ತಿದ್ದರು. ಶುಕ್ರವಾರ ಶಾಲೆಗೆ ರಜೆಯಿದ್ದ ಕಾರಣ ಆ ಮಕ್ಕಳೆಲ್ಲರೂ ಮನೆ ಬಳಿ ಆಟವಾಡುತ್ತಿದ್ದರು.
ಇದನ್ನೂ ಓದಿ:ಕೊಹ್ಲಿಗಾಗಿ ನಿಯಮವನ್ನೇ ಬದಲಿಸಿದ ಬಿಸಿಸಿಐ.. ಮತ್ತೆ ರಾಜಾತಿಥ್ಯ ವಿವಾದ..!
ಊರಿನಲ್ಲಿ ಮಂಗಗಳ ಕಾಟ ಹೆಚ್ಚಾದ ಕಾರಣ ಜನರೆಲ್ಲರೂ ಸೇರಿ ಮಂಗನನ್ನು ಓಡಿಸಲು ಸದಾಶಿವಳ್ಳಿಯ ನಿತೀಶ್ ಗೌಡನನ್ನು ನೇಮಿಸಿದ್ದರು. ಆಗಾಗ ರಾಘವೇಂದ್ರ ಹೆಗಡೆ ಮನೆ ಕಡೆ ನಿತೀಶ ಗೌಡ ಬರುತ್ತಿದ್ದ. ಆಗ, ಬಸಪ್ಪ ಉಂಡಿ ಅವರ ಮಕ್ಕಳು ಕೀಟಲೆ ಮಾಡುತ್ತಿದ್ದು, ಇದನ್ನು ನಿತೀಶ ಗೌಡ ಸಹಿಸುತ್ತಿರಲಿಲ್ಲ ಎನ್ನಲಾಗಿದೆ.
ಇಂದು ಬೆಳಗ್ಗೆ ಸೋಮನಳ್ಳಿಯ ಗಣಪತಿ ಹೆಗಡೆ ಮನೆಯ ಅಂಗಳದಲ್ಲಿ ಬಸಪ್ಪ ಉಂಡಿ ಮಕ್ಕಳಿಬ್ಬರು ಆಡುತ್ತಿದ್ದರು. ಅಲ್ಲಿಗೆ ಬಂದಿದ್ದ ನಿತೀಶ್ ಗೌಡ ರಾಘವ ಹೆಗಡೆ ಬಳಿಯಿಂದ ಗನ್ ತೆಗೆದುಕೊಂಡು ಗುಂಡು ಹಾರಿಸಿದ್ದಾನೆ. 3ನೇ ತರಗತಿ ಓದುವ ಕರಿಯಪ್ಪ ಗುಂಡಿ ಎದೆಗೆ ಗುಂಡು ಹಾರಿಸಿದ್ದ. ಆ ಬಾಲಕ ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದ. ನಂತರ ಬಾಲಕನ ಸಹೋದರ ಫೈರ್ ಮಾಡಿದ್ದಾನೆ ಎಂದು ಸುದ್ದಿ ಹಬ್ಬಿಸಿದ್ದರು
ಪ್ರಕರಣ ಗೊತ್ತಾಗಿದ್ದು ಹೇಗೆ..?
ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು.. ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯವನ್ನ ಪೊಲೀಸರು ಸರಿಯಾಗಿ ಪರಿಶೀಲಿಸಿದ್ದಾರೆ. ಈ ವೇಳೆ ನಿತೀಶ್ ಗೌಡನೇ ಫೈರ್ ಮಾಡಿರೋದು ಗೊತ್ತಾಗಿದೆ. ಘಟನೆ ಸಂಬಂಧ ಆರೋಪಿ ನಿತೀಶ್ ಗೌಡನನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಎ2 ತೋಟದ ಮಾಲೀಕ ರಾಘವ ಹೆಗಡೆಯನ್ನೂ ವಶಕ್ಕೆ ಪಡೆದಿದ್ದಾರೆ.
ಶ್ರೀಧರ್ ಜಿ.ಎಚ್, ನ್ಯೂಸ್ ಫಸ್ಟ್ ಶಿರಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ