ಕೊಹ್ಲಿಗಾಗಿ ನಿಯಮವನ್ನೇ ಬದಲಿಸಿದ ಬಿಸಿಸಿಐ.. ಮತ್ತೆ ರಾಜಾತಿಥ್ಯ ವಿವಾದ..!

2027ರ ವಿಶ್ವಕಪ್​ ಆಡೋ ಟಾರ್ಗೆಟ್​ ಮಾಡಿರೋ ರೋಹಿತ್​ ಶರ್ಮಾ ಬೆಂಗಳೂರಿಗೆ ಬಂದು ಫಿಟ್​ನೆಸ್​ ಟೆಸ್ಟ್​ ಎದುರಿಸಿದ್ದಾಯ್ತು. ರೋಹಿತ್​ ಜೊತೆಗಾರ ಕೊಹ್ಲಿ ಎಲ್ಲೋದ್ರು? ಕೊಹ್ಲಿ ಫಿಟ್​ನೆಸ್​ ಟೆಸ್ಟ್​ ಎದುರಿಸಲ್ವಾ? ಅಭಿಮಾನಿಗಳ ಮನದಲ್ಲಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

author-image
Ganesh Kerekuli
KOHLI_BATTING
Advertisment

2027ರ ವಿಶ್ವಕಪ್​ ಆಡೋ ಟಾರ್ಗೆಟ್​ ಮಾಡಿರೋ ರೋಹಿತ್​ ಶರ್ಮಾ ಬೆಂಗಳೂರಿಗೆ ಬಂದು ಫಿಟ್​ನೆಸ್​ ಟೆಸ್ಟ್​ ಎದುರಿಸಿದ್ದಾಯ್ತು. ರೋಹಿತ್​ ಜೊತೆಗಾರ ಕೊಹ್ಲಿ ಎಲ್ಲೋದ್ರು? ಕೊಹ್ಲಿ ಫಿಟ್​ನೆಸ್​ ಟೆಸ್ಟ್​ ಎದುರಿಸಲ್ವಾ? ಅಭಿಮಾನಿಗಳ ಮನದಲ್ಲಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಲಂಡನ್​ನಲ್ಲಿರೋ ವಿರಾಟ್​​ ಕೊಹ್ಲಿಗಾಗಿ ಬಿಸಿಸಿಐ ಬಾಸ್​​ಗಳು ನಿಯಮವನ್ನೇ ಬದಲಿದ್ದಾರೆ. ಭಾರತೀಯ ಕ್ರಿಕೆಟ್​ ಇತಿಹಾಸದಲ್ಲೇ ಮೊದಲ ಬಾರಿ ಇಂತದ್ದೊಂದು ಬದಲಾವಣೆಯಾಗಿದೆ!

ಇದನ್ನೂ ಓದಿ:ಹೊಸ ಲುಕ್​ನಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ.. ಹೋಗಿದ್ದು ಎಲ್ಲಿಗೆ ಗೊತ್ತಾ?

KOHLI_AXAR

ಕಳೆದೊಂದು ವಾರದಿಂದ ಭಾರತೀಯ ಕ್ರಿಕೆಟ್​ನಲ್ಲಿ ಫಿಟ್​​ನೆಸ್​​​ನದ್ದೇ ಚರ್ಚೆ. ಫಿಟ್​​ನೆಸ್​ ಮಾನದಂಡವನ್ನ ಹೆಚ್ಚಿಸಿರೋ ಬಿಸಿಸಿಐ ಹೊಸದಾಗಿ ಬ್ರಾಂಕೋ ಟೆಸ್ಟ್​ ಪರಿಚಯಿಸಿದೆ. ಬೆಂಗಳೂರಿನ ಬಿಸಿಸಿಐ ಸೆಂಟರ್​ ಆಫ್​ ಎಕ್ಸಲೆನ್ಸ್​ನಲ್ಲಿ ರೋಹಿತ್​ ಶರ್ಮಾ ಸೇರಿದಂತೆ ಹಲವು ಆಟಗಾರರು ಈ ಪರೀಕ್ಷೆಯನ್ನ ಕೆಲ ದಿನಗಳ ಹಿಂದಷ್ಟೇ ಎದುರಿಸಿದ್ರು. ಕಳೆದ ಕೆಲ ತಿಂಗಳಿನಿಂದ ತಂಡದಿಂದ ಹೊರಗಿರೋ ಆಟಗಾರರೆಲ್ಲಾ ಬಂದು ಟೆಸ್ಟ್​​ನ ಎದುರಿಸಿದ್ದೂ ಆಯ್ತು.. ಪಾಸ್​ ಆಗಿದ್ದೂ ಆಯ್ತು. ಐಪಿಎಲ್​ ಬಳಿಕ ಫೀಲ್ಡ್​ನಿಂದ​​ ಹೊರಗಿರೋ ವಿರಾಟ್​​ ಕೊಹ್ಲಿಯ ಸುಳಿವೇ ಇಲ್ಲ..  

‘ಕಿಂಗ್​’ ಕೊಹ್ಲಿಗೆ ರಾಜಾತಿಥ್ಯ.!

ಕಳೆದ ಕೆಲ ವರ್ಷಗಳ ಹಿಂದೆಯೇ ಫಿಟ್​ನೆಸ್​ ಪರೀಕ್ಷೆಯನ್ನ ಟೀಮ್​ ಇಂಡಿಯಾ ಆಯ್ಕೆಗೆ ಬಿಸಿಸಿಐ ಕಡ್ಡಾಯ ಮಾಡಿದೆ. ತಂಡದಿಂದ ದೀರ್ಘಕಾಲ ಹೊರಗಿರುವವರು, ಇಂಜುರಿಗೆ ತುತ್ತಾದವರು, ಕಮ್​ಬ್ಯಾಕ್​ ಮಾಡೋಕೂ ಮುನ್ನ ಫಿಟ್​ನೆಸ್​ ಟೆಸ್ಟ್​ ಪಾಸ್​ ಆಗೋದು ಕಡ್ಡಾಯವಾಗಿದೆ. ಬೆಂಗಳೂರಿನಲ್ಲಿರೋ ಎನ್​ಸಿಎಗೇ ಬಂದು ಈ ಟೆಸ್ಟ್​ ಪಾಸ್​ ಮಾಡಬೇಕಿದೆ. ರೋಹಿತ್​ ಶರ್ಮಾ ಸೇರಿದಂತೆ ಹಲವು ಆಟಗಾರರು ಬಂದು ಟೆಸ್ಟ್ ಎದುರಿಸಿ ಹೋಗಿದ್ದು ಇದೇ ಕಾರಣಕ್ಕೆ. ಈ ವಿಚಾರದಲ್ಲಿ ವಿರಾಟ್​ ಕೊಹ್ಲಿಗೆ ಮಾತ್ರ ಬಿಸಿಸಿಐ ಬಾಸ್​​ಗಳು ಸ್ಪೆಷಲ್​ ಟ್ರೀಟ್​​ಮೆಂಟ್​​ ನೀಡ್ತಿದ್ದಾರೆ. ಲಂಡನ್​ನಲ್ಲಿರೋ ಕಿಂಗ್​ಗೆ ರಾಜಾತಿಥ್ಯ ನೀಡಲಾಗ್ತಿದೆ. 

ಇತಿಹಾಸದಲ್ಲೇ ಮೊದಲ ಬಾರಿಗೆ ವಿದೇಶದಲ್ಲಿ ಟೆಸ್ಟ್​

ಭಾರತೀಯ ಕ್ರಿಕೆಟ್​ನ ಇತಿಹಾಸದಲ್ಲೇ ಬೆಂಗಳೂರಿನ ಎನ್​ಸಿಎ ಬಿಟ್ಟು ಹೊರಗಡೆ ಫಿಟ್​​ನೆಸ್​​ ಟೆಸ್ಟ್​ಗೆ ಬಿಸಿಸಿಐ ಬಾಸ್​​ಗಳು ಪರ್ಮಿಷನ್​ ಕೊಟ್ಟಿರೋ ಸುದ್ದಿ ಈಗ ಹೊರಬಿದ್ದಿದೆ. ಐಪಿಎಲ್​ ಬಳಿಕ ಪತ್ನಿ, ಮಕ್ಕಳೊಂದಿಗೆ ಲಂಡನ್​ ಬೀಡು ಬಿಟ್ಟಿರೋ ವಿರಾಟ್​​ ಕೊಹ್ಲಿಗೆ ಬಿಸಿಸಿಐ ಸ್ಪೆಷಲ್​ ಪರ್ಮಿಷನ್​ ನೀಡಿದೆ. ಉಳಿದೆಲ್ಲಾ ಆಟಗಾರರು ಎನ್​ಸಿಎನಲ್ಲಿ ಟೆಸ್ಟ್​ ಎದುರಿಸಿದ್ರೆ ವಿರಾಟ್​ ಕೊಹ್ಲಿ ಮಾತ್ರ ಲಂಡನ್​ನಲ್ಲೇ ಈ ಟೆಸ್ಟ್​ಗೆ ಒಳಗಾಗಿದ್ದಾರೆ. 

ಟೆಸ್ಟ್​​​ನಲ್ಲಿ ಕೊಹ್ಲಿ ಪಾಸ್​​, ಆಸಿಸ್​​ ಪ್ರವಾಸಕ್ಕೆ ರೆಡಿ

ಅಗಸ್ಟ್​ ಕೊನೆಯ ವಾರದಲ್ಲೇ ಕೊಹ್ಲಿ ಲಂಡನ್​ನಲ್ಲಿ ಫಿಟ್​ನೆಸ್​ ಟೆಸ್ಟ್ ಒಳಗಾಗಿದ್ದಾರೆ ಎಂಬ ಮಾಹಿತಿ ಇದೀಗ ಬಿಸಿಸಿಐ ಮೂಲದಿಂದ ಹೊರಬಿದ್ದಿದೆ. ಕೊಹ್ಲಿಯ ಟೆಸ್ಟ್​ ರಿಪೋರ್ಟ್​ನ ಎನ್​ಸಿಎಗೆ ಕಳುಹಿಸಲಾಗಿದ್ದು, ಟೆಸ್ಟ್​ನಲ್ಲಿ ಕೊಹ್ಲಿ ಪಾಸಾಗಿದ್ದಾರೆ ಎಂದು ತಿಳಿದುಬಂದಿದೆ. ಇದ್ರೊಂದಿಗೆ ಮುಂದಿನ ಅಕ್ಟೋಬರ್​​ನಲ್ಲಿ ನಡೆಯೋ ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಆಡೋದು ಕನ್​ಫರ್ಮ್​ ಆಗಿದೆ. ಆ ಸರಣಿಗೆ ಈಗಿನಿಂದಲೇ ಕೊಹ್ಲಿ ಸಿದ್ಧತೆಯೂ ಆರಂಭವಾಗಿದೆ. 

ಕೊಹ್ಲಿಗ್ಯಾಕೆ ಸ್ಪೆಷಲ್​ ಟ್ರೀಟ್​​ಮೆಂಟ್​?

ವಿರಾಟ್​ ಕೊಹ್ಲಿ ಫಿಟ್​ನೆಸ್​ ಟೆಸ್ಟ್​ ಎದುರಿಸಿದ್ದು, ಅದ್ರಲ್ಲಿ ಪಾಸ್​ ಆಗಿರೋದು ಒಂದೆಡೆಯಾದ್ರೆ, ಕೊಹ್ಲಿಗೆ ಸ್ಪೆಷಲ್​ ಟ್ರೀಟ್​ಮೆಂಟ್​ ನೀಡಿರೋ ಬಿಸಿಸಿಐ ಇನ್ನೊಂದೆಡೆ ಟೀಕೆಗೆ ಗುರಿಯಾಗಿದೆ. ಸ್ಟಾರ್​ ಕಲ್ಚರ್​ಗೆ ಬ್ರೇಕ್​​ ಹಾಕ್ತೀವಿ ಎಂದು ಪದೇಪದೆ ಹೇಳೋ ಬಿಸಿಸಿಐ ಮತ್ತೆ ಅದನ್ನೇ ಮಾಡ್ತಿರೋದ್ಯಾಕೆ ಎಂದು ಫ್ಯಾನ್ಸ್​ ಪ್ರಶ್ನೆ ಮಾಡ್ತಿದ್ದಾರೆ. ಉಳಿದೆಲ್ಲಾ ಆಟಗಾರರಿಗೆ ಒಂದು ನ್ಯಾಯ.? ಕೊಹ್ಲಿಗೆ ಮಾತ್ರ ಮತ್ತೊಂದು ನ್ಯಾಯನಾ? ವಿರಾಟ್​ ಕೊಹ್ಲಿಗಾಗಿ ರೂಲ್ಸ್​ ಬ್ರೇಕ್​ ಮಾಡಿದ್ದು ಸರೀನಾ?ಎಂಬ ಟೀಕೆಗಳು ಅಭಿಮಾನಿಗಳ ವಲಯದಲ್ಲಿ ಕೇಳಿ ಬರ್ತಿವೆ. 

ಇದನ್ನೂ ಓದಿ: ಶಿಕ್ಷಕರ ದಿನ ಶಿಷ್ಯರ ನೆನೆದ ಕೋಚ್​.. ಗುರುವಿಗೆ 80 ಲಕ್ಷ ಆರ್ಥಿಕ ಸಹಾಯ ಮಾಡಿದ ಪಾಂಡ್ಯ ಬ್ರದರ್ಸ್​..!

KOHLI_POWER

ಟೀಕೆ-ಟಿಪ್ಪಣಿಗಳ ಹೊರತಾಗಿ 2027ರ ವಿಶ್ವಕಪ್​ ಆಡೋದು ನನ್ನ ಗುರಿ ಎಂದು ಹೇಳಿಕೊಂಡಿದ್ದ ಕೊಹ್ಲಿ, ಲಂಡನ್​ನಲ್ಲಿ ಕಠಿಣ ಪರಿಶ್ರಮ ಪಡ್ತಿದ್ದಾರೆ. ಆಂಗ್ಲರ ನಾಡಲ್ಲೇ ವಿರಾಟ್​ ಕೊಹ್ಲಿ ಅಭ್ಯಾಸದ ಅಖಾಡಕ್ಕೆ ಧುಮುಕಿದ್ದಾರೆ. ಮಿಸ್​ ಮಾಡದೇ ಕಳೆದ ಕೆಲ ದಿನಗಳಿಂದ ಇನ್​ಡೋರ್​​ ನೆಟ್ಸ್​ನಲ್ಲಿ ಅಭ್ಯಾಸ ನಡೆಸ್ತಿದ್ದಾರೆ. ಬ್ಯಾಟಿಂಗ್​ ಜೊತೆ ಜೊತೆಗೆ ಮುಂದಿನ ಸರಣಿಗೆ ಫಿಟ್​ ಅಂಡ್ ಫೈನ್​ ಆಗಿರೋಕೆ ಜಿಮ್​ನಲ್ಲೂ ಕಸರತ್ತು ನಡೆಸ್ತಿದ್ದಾರೆ.

ಇದನ್ನೂ ಓದಿ:2026 IPL ಮ್ಯಾಚ್ ನೋಡುವವರಿಗೆ ಬಿಗ್ ಶಾಕ್.. ಟಿಕೆಟ್​ಗಳ ಮೇಲೆ ಭಾರೀ ಜಿಎಸ್​ಟಿ!

ಒಟ್ಟಿನಲ್ಲಿ ಸದ್ಯ ಕೊಹ್ಲಿ ಫ್ಯಾನ್ಸ್​ ಮಾತ್ರ ಫುಲ್​ ಖುಷ್​ ಆಗಿದ್ದಾರೆ. ಜೂನ್​ 3ರಂದು ಕೊನೆಯ ಬಾರಿ ಫೀಲ್ಡ್​ನಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿಯನ್ನ ಆನ್​​ಫೀಲ್ಡ್​ನಲ್ಲಿ ನೋಡಲು, ಆಟವನ್ನ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. 


ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Rohit Sharma-Virat Kohli Virat Kohli beard BCCI Farewell Virat Kohli
Advertisment