/newsfirstlive-kannada/media/media_files/2025/09/05/krunal-pandya-and-hardik-pandya-2025-09-05-16-24-05.jpg)
ಕೃನಾಲ್ ಪಾಂಡ್ಯ ಮತ್ತು ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ. ಟೀಂ ಇಂಡಿಯಾ ಸ್ಟಾರ್ಗಳಾದ ಈ ಅಣ್ತಾಮ್ಮಾಸ್ ಶಿಕ್ಷಕರ ದಿನಾಚರಣೆಯ ದಿನ ವಿಶೇಷ ಕಾರಣಕ್ಕೆ ಸುದ್ದಿಯಾಗಿದ್ದಾರೆ. ತಮ್ಮ ಬಾಲ್ಯದ ಕೋಚ್ ಜೀತೇಂದ್ರ ಸಿಂಗ್ಗೆ ಗುರು ಕಾಣಿಕೆ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಧನ ಸಹಾಯ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಆರ್ಥಿಕ ಸಹಾಯ, ಕುಟುಂಬದ ಮದುವೆ, ಕಾರು ಉಡುಗೊರೆ, ಮನೆ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಸ್ವತಃ ಜಿತೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
ಕೋಚ್ ಜೊತೆ ಆತ್ಮೀಯ ಸಂಬಂಧ
ಹಾರ್ದಿಕ್ ಮತ್ತು ಕೃನಾಲ್ ತಮ್ಮ ಬಾಲ್ಯದ ಕೋಚ್ ಜಿತೇಂದ್ರ ಸಿಂಗ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರು ಸತತವಾಗಿ ಆರ್ಥಿಕ ಸಹಾಯ ಮಾಡುತ್ತ ಬಂದಿದ್ದಾರೆ. ತಮ್ಮ ಕ್ರಿಕೆಟ್ ಪ್ರಯಾಣದ ಉದ್ದಕ್ಕೂ ಮಾರ್ಗದರ್ಶಕರಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಕೋಚ್ ಜಿತೇಂದ್ರ ಅವರೇ ನೀಡಿದ ಮಾಹಿತಿ ಪ್ರಕಾರ, ಈ ಸಹೋದರರಿಬ್ಬರು ವಿವಿಧ ವೈಯಕ್ತಿಕ ಸಹಾಯ ಸೇರಿ ಒಟ್ಟು 70 ರಿಂದ 80 ಲಕ್ಷ ರೂಪಾಯಿ ಸಹಾಯ ಮಾಡಿದ್ದಾರೆ. ಅಲ್ಲದೇ ನನ್ನ ತಂಗಿಯ ಮದುವೆಯನ್ನೂ ಮಾಡಿಸಿಕೊಟ್ಟಿದ್ದಾರೆ ಎಂದಿದ್ದಾರೆ.
2018ರಲ್ಲಿ ಮದುವೆ ಮಾಡುವ ಮಾತು ಕೊಟ್ಟಿದ್ದರು. 2024 ಫೆಬ್ರವರಿಯಲ್ಲಿ ತಂಗಿಯ ಮದುವೆ ಮಾಡಿಕೊಟ್ಟಿದ್ದಾರೆ. ತಂಗಿಯ ಮದುವೆಗೆ ಬರೋಬ್ಬರಿ 20 ಲಕ್ಷ ರೂಪಾಯಿ ಹಣ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯ ಯಾವಾಗಲೂ ಹೇಳುತ್ತಾರೆ. ನಿನ್ನ ತಂಗಿ ಅಂದ್ರೆ ಅವಳು ಯಾವಾಗಲೂ ನನ್ನ ಸಹೋದರಿ ಎನ್ನುತ್ತಾರೆ ಅನ್ನೋ ಮೂಲಕ ಭಾವುಕರಾದರು.
ಇದನ್ನೂ ಓದಿ:2026 IPL ಮ್ಯಾಚ್ ನೋಡುವವರಿಗೆ ಬಿಗ್ ಶಾಕ್.. ಟಿಕೆಟ್ಗಳ ಮೇಲೆ ಭಾರೀ ಜಿಎಸ್ಟಿ!
ಹಾರ್ದಿಕ್ ಪಾಂಡ್ಯ ವಿಶ್ವ ಕ್ರಿಕೆಟ್ನಲ್ಲಿ ಅತ್ಯನ್ನತ ಸ್ಥಾನಕ್ಕೇರಿದ್ದಾರೆ. ಟೀ ಇಂಡಿಯಾದ ಸೂಪರ್ ಆಲ್ರೌಂಡರ್. ಕೃನಾಲ್ ಪಾಂಡ್ಯ ಕೂಡ ಅದ್ಭುತ ಪ್ರತಿಭೆ. ಟೀಂ ಇಂಡಿಯಾದಲ್ಲಿ ಟಿ-20 ಪಂದ್ಯಗಳನ್ನ ಆಡಿದ್ದಾರೆ. ಐಪಿಎಲ್ನಲ್ಲಿ ಇಬ್ಬರು ಪರಸ್ಪರ ಎದುರಾಳಿಗಳು. ಕೃನಾಲ್ ಪಾಂಡ್ಯ ರಾಯಲ್ ಚಾಲೆಂಜರ್ಸ್ನಲ್ಲಿದ್ದರೆ, ಹಾರ್ದಿಕ್ ಮುಂಬೈ ಇಂಡಿಯನ್ಸ್ ನಾಯಕರಾಗಿ ಮುನ್ನಡೆಸ್ತಿದ್ದಾರೆ. ಈ ಅಣ್ತಾಮ್ಮಾಸ್, ಕ್ರಿಕೆಟ್ ಮೈದಾನದಲ್ಲಿನ ಜಿದ್ದಾಜಿದ್ದಿನ ಹೋರಾಟ ಹೊರತುಪಡಿಸಿ ಇಬ್ಬರೂ ತುಂಬಾ ಸಪೊರ್ಟೀವ್ ಆಗಿದ್ದಾರೆ.
ಇದನ್ನೂ ಓದಿ:RCB ವಿಜಯೋತ್ಸವದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ.. ಫ್ಯಾನ್ಸ್ಗೆ ಚಾನ್ಸ್?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ