/newsfirstlive-kannada/media/media_files/2026/02/04/kamalakar-guruji-3-2026-02-04-15-03-19.jpg)
ಸುಚಿತ್ರ ಇಬ್ಬರು ಮಕ್ಕಳ ತಾಯಿ. ಹೆಸ್ರು ಸುಚಿತ್ರ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಈಕೆ ಕೆಲ ಡ್ಯಾನ್ಸ್​​ ಅಕಾಡೆಮಿ, ಟ್ರಸ್ಟ್​ಗಳಲ್ಲಿ ಕೆಲ್ಸ ಮಾಡ್ತಿದ್ದಳು. ಹೀಗೆ ಟ್ರಸ್ಟ್​ಗಳಲ್ಲಿ ಕೆಲ್ಸ ಮಾಡ್ತಿದ್ದ ಈಕೆಗೆ ಕೆಲ ಸ್ವಾಮೀಜಿಗಳ ಜೊತೆ ಪರಿಚಯವಾಗಿತ್ತು. ಆಗ ಈಕೆಗೆ ಸಿಕ್ಕ ಗುರೂಜಿಯೇ ಕಮಲಾಕರ ಭಟ್.
ಗಂಡನ ಬಿಟ್ಟು ಸ್ವಾಮೀಜಿ ಮನೆ ಸೇರಿದ್ದೇಕೆ ಸುಚಿತ್ರ?
ಇದೊಂದು ಮದುವೆ.. ಮಕ್ಕಳು.. ಮತ್ತೊಂದು ಸಹಜೀವನ.. ಆನಂತರ ಧ್ವೇಷ.. ಅಸೂಯೆ ಕೊ* ಹೀಗೆ ಸಾಗುವ ಕತೆ. ಅದರಲ್ಲಿ ಮೊದಲನೇ ಘಟ್ಟ, ಸುಚಿತ್ರ ಸರಿಯಾಗಿ ಕಳೆದ 20 ವರ್ಷಗಳ ಹಿಂದೆ ಮಹೇಶ್ ಜಟ್ಯಾ ನಾಯ್ಕ್ ಎಂಬ ವ್ಯಕ್ತಿಯನ್ನ ಪ್ರೀತಿಸಿ ಮದುವೆಯಾಗಿರ್ತಾಳೆ. ಮೊದಲಿಗೆ ಇಬ್ರೂ ಚೆನ್ನಾಗಿಯೇ ಇರ್ತಾರೆ. ಸುಚಿತ್ರಾಳಿಗೆ ಮಹೇಶ್​ ಫ್ರೀಡಂ​ ಕೊಟ್ಟು, ಅಕಾಡೆಮಿ ಟ್ರಸ್ಟ್​ ಎಂದು ಸುತ್ತಾಟಕ್ಕೆ ಬಿಟ್ಟಿರ್ತಾರೆ. ತಿಂಗಳು ಕಳೆದಂತೆ ಆಕೆ ಗರ್ಭಿಣಿ ಆಗ್ತಾಳೆ. ಆಗ ಹುಟ್ಟಿದ್ದ ಮಗಳು ಸುಮಶ್ರೀ. ಮತ್ತೆ ವರ್ಷಗಳು ಉರುಳ್ತಿದ್ದಂತೆ ಆಕೆಗೆ ಮತ್ತೊಬ್ಬ ಅಮೃತಾ ಅನ್ನೋ ಮಗಳು ಹುಟ್ಟಿರ್ತಾಳೆ. ಇಲ್ಲಿ ಮಹೇಶ್​ ಯಾವತ್ತೂ ಹೆಣ್ಮಗು ಎಂದು ಬೇಸರಿಸಿಕೊಂಡಿಲ್ಲ. ಇದು ದೇವರ ಬರಹ ಅಳಿಸೋಕೆ ನಾವ್ಯಾರು ಅಂತಲೇ ಇದ್ರು. ಇಲ್ಲಿ ಸುಚಿತ್ರಾ ಮಕ್ಕಳನ್ನ ಧ್ವೇಷಿಸ್ತಿದ್ಲು ಅಂತ ಅಲ್ಲ. ಆಕೆಯೂ ಮಕ್ಕಳನ್ನ ಚೆನ್ನಾಗೇ ನೋಡಿಕೊಳ್ತಿದ್ಲು. ಇದೆಲ್ಲ ಬದ್ಲಾಗಿದ್ದು.. ಸುಚಿ ಅಶುಚಿಯಾಗಿದ್ದು.. ಸುಚಿತ್ರಾ ಗಂಡ ಬೆಂಗಳೂರು ಸೇರಿದ್ಮೇಲೆ.
ಇದನ್ನೂ ಓದಿ:ಕಮಲಾಕರ್ ಭಟ್ ಕೇಸ್​: ಬಿಕೆ ಹರಿಪ್ರಸಾದ್ vs ಸುರೇಶ್ ಕುಮಾರ್..!
/filters:format(webp)/newsfirstlive-kannada/media/media_files/2026/02/04/kamalakar-guruji-2026-02-04-14-58-20.jpg)
ಈ ದಂಪತಿ ಸುಮಶ್ರೀ ಹಾಗೂ ಅಮೃತಾ ಅನ್ನೋ ಇಬ್ಬರು ಹೆಣ್ಣು ಮಕ್ಕಳ ಜೊತೆ ಚೆನ್ನಾಗೇ ಇದ್ರು. ಮಹೇಶ್ ಇಬ್ಬರು ಹೆಣ್ಮಕ್ಕಳು.. ಅವ್ರ ಜೀವನ ಚೆನ್ನಾಗಿರ್ಬೇಕು ಅಂದ್ರೆ ಹಣ ಮಾಡ್ಲೇಬೇಕು ಎಂದು ಬೆಂಗಳೂರಿಗೆ ಬಂದಿರ್ತಾರೆ. ಆತ ಬೆಂಗಳೂರಿನ ಒಂದು ಹೋಟೆಲ್​ನಲ್ಲಿ ಕೆಲ್ಸಕ್ಕೆ ಸೇರಿರ್ತಾರೆ. ಅಲ್ಲಿ ಗಂಡ ಕಷ್ಟ ಪಡ್ತಿದ್ರೆ, ಇಲ್ಲಿ ಸುಚಿತ್ರಾಗೆ ಇನ್​ಸ್ಟಾ ಮೋಹ. ದೊಡ್ಡವರ ಜೊತೆ ವ್ಯಾಮೋಹ ನಡೆಸೋ ಹುಚ್ಚು ಹುಟ್ಟಿಬಿಡುತ್ತೆ. ಆಗ ಆಕೆಯ ಕಾವಿಗೆ ಸಿಕ್ಕ ಖಾವಿನೇ ಈ ಕಮಲಾಕರ ಭಟ್​ ಗುರೂಜಿ ಅಂತೆ.
ಈ ಕಮಲಾಕರ ಭಟ್​ ಗುರೂಜಿ ಬಗ್ಗೆ ನಿಮ್ಗೆ ಪ್ರತ್ಯೇಕವಾಗಿ ಹೇಳ್ಬೇಕಿಲ್ಲ. ರಾಜ್ಯದ ಒಬ್ಬ ಪ್ರಖ್ಯಾತ ಜ್ಯೋತಿಷ್ಯಜ್ಞ. ಎಷ್ಟೋ ಯಾಗಗಳು.. ಯಜ್ಞಗಳು.. ಪೂಜೆ ಪುನಸ್ಕಾರಗಳು. ಜನರಿಗೆ ಏನು ಒಳಿತು ಏನು ಕೆಡುಕು ಅಂತ ತಿಳಿಸಿದ್ದ ಮಹಾನ್​ ಗುರೂಜಿ. ನಿತ್ಯ ಪೂಜೆ ಖ್ಯಾತಿಯ ಸುಯಜ್ಞ ಜ್ಯೋತಿಷ್ಯ ಸ್ವಾಮೀಜಿ. ಮೂಲತಃ ಸಿದ್ದಾಪುರದ ಹೆಮ್ಮನಬೈಲ್​​ನವ್ರು.
ದಿನ ಬೆಳಗಾದ್ರೆ.. ಟಿವಿಗಳಲ್ಲಿ ಜ್ಯೋತಿಷ್ಯ ಹೇಳ್ತಾ.. ಎಷ್ಟೋ ದೊಡ್ಡವರ ಭವಿಷ್ಯ ಹೇಳ್ತಾ.. ಸೋಷಿಯಲ್​ ಮೀಡಿಯಾದಲ್ಲೂ ತನ್ನ ಭವಿಷ್ಯ, ವಾಸ್ತುಗಳ ಬಗ್ಗೆ ಹೇಳುವ ಈ ಗುರೂಜಿ.. ಆ ಒಂದು ದಿನ ತನ್ನ ಭವಿಷ್ಯವೇ ನೋಡಿಕೊಂಡಿರ್ಲಿಲ್ಲ. ಈಗ ಕೊಲೆ ಕೇಸಲ್ಲಿ ಸಿಕ್ಕಿಕೊಂಡು ಖಾವಿಗೆ ಕಳಂಕ ತಂದ ಎಷ್ಟೋ ಸ್ವಾಮೀಜಿಗಳ ಲಿಸ್ಟ್​ಗೆ ಸೇರಿಬಿಟ್ಟಿದ್ದಾರೆ.
ಇದನ್ನೂ ಓದಿ: ನನ್ನ ಉಳಿಸಲು ಹೋಗಿ ಅಣ್ಣ ಬಲಿಯಾದ -ಕಮಲಾಕರ್ ಭಟ್ ಕೇಸ್​ನಲ್ಲಿ ಸಂತ್ರಸ್ತ ಕಣ್ಣೀರು..!
/filters:format(webp)/newsfirstlive-kannada/media/media_files/2026/02/04/kamalakar-guruji-4-2026-02-04-15-03-42.jpg)
ಗಂಡ ಬೆಂಗಳೂರು ಸೇರಿದ್ಮೇಲೆ ಸುಚಿತ್ರಾ ಇದೇ ಕಮಲಾಕರನ ಜೊತೆ ಸಲುಗೆಯಿಂದ ಇದ್ದದ್ದು ಊರೆಲ್ಲಾ ಹಬ್ಬಿದೆ. ಶಿವಮೊಗ್ಗದಲ್ಲಿರೋ ಈ ಸ್ವಾಮಿಜಿ ಮನೆಗೆ ಹೋಗೋದು, ಬರೋದು.. ಅವರ ಮನೆಯಲ್ಲೇ ವಾಸ ಮಾಡೋದು. ಈ ಎಲ್ಲಾ ವಿಚಾರ ಗಂಡ ಮಹೇಶ್​ಗೆ ಗೊತ್ತಾಗಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಆಗಿರುತ್ತದೆ. ಗಲಾಟೆ ಹೆಚ್ಚಾಗ್ತಿದ್ದಂತೆ ಒಂದಿನ ಸುಚಿತ್ರಾ ತಮ್ಮ ಇಬ್ಬರು ಮಕ್ಕಳನ್ನ ಕರ್ಕೊಂಡು.. ಗಂಡನಿಗೆ ಗೊತ್ತಾಗದಂತೆ.. ಸೀದಾ ಕಮಲಾಕರ ಗುರೂಜಿ ಮನೆ ಸೇರಿಬಿಟ್ಟಿದ್ಲಂತೆ. ಅಲ್ಲಿಂದಲೇ ಮನೆಯಲ್ಲಿ ಗಂಡ ಹೆಂಡತಿ ನಡುವೆ ದೊಡ್ಡ ಆಕ್ರೋಶದ ಕಿಡಿ ಹೊತ್ತಿಕೊಂಡಿದೆ.
ಮಕ್ಕಳನ್ನೂ ಕರ್ಕೊಂಡೋಗಿ ಗುರೂಜಿ ಮನೆ ಸೇರಿದ್ದಕ್ಕೆ ಗಂಡ ಮಹೇಶ್​ಗೆ ಇನ್ನಿಲ್ಲದ ಕೋಪ ಬಂದಿದೆ. ಈ ವಿಚಾರಕ್ಕೆ ದಂಪತಿ ನಡುವೆ ಕೌಟುಂಬಿಕ ಕಲಹ ದೊಡ್ಡದಾಗಿದೆ. ಇದೇ ಗಲಾಟೆಗೆ ಕಳೆದ ಆರು ತಿಂಗಳಿಂದ ಮಹೇಶ್ ಸುಚಿತ್ರಾಳಿಂದ ದೂರವಿದ್ದು, ಒಂಟಿಯಾಗಿದ್ರೆ ಮತ್ತಷ್ಟು ನೋವಾಗುತ್ತೆ ಅಂತ ಎರಡು ತಿಂಗಳಿಂದ ಅಣ್ಣ ವಸಂತ ನಾಯ್ಕ್ ಅವ್ರ ಮನೆ ಸೇರಿಬಿಟ್ಟಿದ್ದ.
ಇದನ್ನೂ ಓದಿ:ಕಮಲಾಕರ್ ಭಟ್ ಕೇಸ್​: ಬಿಕೆ ಹರಿಪ್ರಸಾದ್ vs ಸುರೇಶ್ ಕುಮಾರ್..!
/filters:format(webp)/newsfirstlive-kannada/media/media_files/2026/02/04/kamalakar-guruji-1-2026-02-04-15-04-00.jpg)
ಆ ರಾತ್ರಿ ಆಗಿದ್ದೇನು..?
ಆ ದಿನ ರಾತ್ರಿ 9:45 ರ ಸಮಯ ಆಗಿತ್ತು.. ಮಹೇಶ್​ ಅವ್ರ ಅಣ್ಣಾ ವಸಂತ ನಾಯ್ಕ್ ಮನೆಯಲ್ಲಿ ಎಲ್ಲಾ ಊಟ ಮಾಡುತ್ತಿದ್ದರು. ಮನೆಯವರೆಲ್ರೂ ಊಟಕ್ಕೆ ಕುಳಿತಿದ್ದ ಸಂದರ್ಭದಲ್ಲಿ ಸುಚಿತ್ರಾ, ಮತ್ತವಳ ತಂದೆ ಲೋಕನಾಥ್ ಈ ಕಮಲಾಕರ ಸ್ವಾಮಿ ಹಾಗೂ ಇತರೆ ನಾಲ್ಕು ಜನ ಏಕಾಏಕಿ ಕಾರಲ್ಲಿ ಬಂದು ವಸಂತ ಮನೆಗೆ ನುಗ್ಗಿದ್ರು. ಆ ಗಲಾಟೆಯಲ್ಲೇ ಸುಚಿತ್ರಾ ಗಂಡನಿಗೆ ಗಂಭೀರ ಗಾಯಗಳಾದ್ರೆ.. ಆತನ ಅಣ್ಣ ವಸಂತ್​ ನಾಯ್ಕ್​ ಜೀವ ಬಿಟ್ಟಿದ್ದ. ಪಕ್ಕಾ ಪ್ಲ್ಯಾನ್​ ಪ್ರಕಾರವೇ ನಡೆದಿದೆಯಂತೆ.. ಸುಚಿತ್ರಾಳೇ ಗ್ಯಾಂಗ್​ ಕಟ್ಟಿಕೊಂಡು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮಕ್ಕೆ ಬಂದು.. ಮೊದ್ಲು ವಾಗ್ವಾದ.. ಗಲಾಟೆ ಆನಂತರ ಜೀವವೇ ಹೋಗಿದೆ!
ಇದನ್ನೂ ಓದಿ: ಗಂಡ- ಹೆಂಡತಿ ನಡುವೆ ಫೈಟ್: ಅಡ್ಡ ಬಂದ ವ್ಯಕ್ತಿಯ ಹತ್ಯೆ- ಜ್ಯೋತಿಷಿ ಕಮಲಾಕರ್ ಸೇರಿ 7 ಮಂದಿ ಬಂಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us