/newsfirstlive-kannada/media/media_files/2025/10/15/simantha_kumar_docter-2025-10-15-17-12-18.jpg)
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯ ಜನರಲ್ ಸರ್ಜನ್ ಡಾ.ಮಹೇಂದ್ರ ರೆಡ್ಡಿ​ ತನ್ನ ಪತ್ನಿ ಕೃತಿಕಾಳನ್ನು ಕೊಲೆ ಮಾಡಿರುವುದು 6 ತಿಂಗಳ ಬಳಿಕ ಎಫ್​ಎಸ್​​ಎಲ್ ವರದಿ ಮೂಲಕ ಬಹಿರಂಗಗೊಂಡಿದೆ. ಸದ್ಯ ಈ ಸಂಬಂಧ ಬೆಂಗಳೂರು ಕಮಿಷನರ್​ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ದಾರೆ​.
ಡಾ. ಕೃತಿಕಾ ರೆಡ್ಡಿ ಹತ್ಯೆ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಹೆಂಡತಿನ ಮೊದಲು ಆಸ್ಪತ್ರೆಗೆ ಕರೆದುಕೊಂಡು ಬಂದಿರುವುದು ಮಹೇಂದ್ರ ರೆಡ್ಡಿ. ಕೃತಿಕಾಳ ಪೋಷಕರು ಮೊದಲು ಯಾರ ಮೇಲೂ ದೂರು ಕೊಟ್ಟಿರಲಿಲ್ಲ. ಏಕೆಂದರೆ ಯಾರ ಮೇಲೂ ಅನುಮಾನ ಇರುವುದಿಲ್ಲ. ಹೀಗಾಗಿ ಮೊದಲು ಯುಡಿಆರ್ ಕೇಸ್ ದಾಖಲಿಸಿ ತನಿಖೆ ಮಾಡಲಾಗಿತ್ತು. ಎಫ್ಎಸ್​ಎಲ್ ರಿಪೋರ್ಟ್ ಆಧಾರದ ಮೇಲೆ ತನಿಖೆ ಚುರುಕು ಮಾಡಿದೇವು ಎಂದು ಹೇಳಿದ್ದಾರೆ.
ಯುಡಿಆರ್ ಕೇಸ್ಎಫ್​​ಎಸ್​ಎಲ್​ ವರದಿ ಬಳಿಕ ಕೊಲೆ ಕೇಸ್ ಆಗಿ ಕನ್ವರ್ಟ್ ಆಗಿದೆ. ಮೃತ ಕೃತಿಕಾ ಕೂಡ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ವೈದ್ಯರ ಮಾಹಿತಿ ಹಾಗೂ ವರದಿ ಆಧಾರದಲ್ಲಿ ತನಿಖೆ ಮಾಡಲಾಗಿದೆ. ನಮ್ಮ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದ ಪತಿಯೇ ಕೊಲೆ ಮಾಡಿರೋದು ಬಹಿರಂಗ ಆಗಿದೆ. ಕೃತಿಕಾಳ ತಂದೆಯ ದೂರಿನನ್ವಯ ತನಿಖೆ ಮಾಡಿ ಆರೋಪಿಯನ್ನ ಬಂಧಿಸಿದ್ದೇವೆ. ಕೇಸ್​ನಲ್ಲಿ ಬೇರೆಯವರ ಹೆಸರು ಬಂದರೆ ಅವರ ಮೇಲೂ ಕ್ರಮ ತೆಗೆದುಕೊಳ್ಳುತ್ತೇವೆ. ಉಡುಪಿಯಲ್ಲಿರುವ ಮಣಿಪಾಲದಿಂದ ಆರೋಪಿ ಮಹೇಂದ್ರ ರೆಡ್ಡಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅನಸ್ತೇಶಿಯಾ ನೀಡಿ ಮಹಿಳೆಯನ್ನ ಹತ್ಯೆ ಮಾಡಿರುವುದು ವರದಿಯಿಂದ ಗೊತ್ತಾಗಿದೆ. ಚಾರ್ಜ್​ಶೀಟ್ ಸಬ್​ಮೀಟ್ ಆಗಿದೆ. ದೀರ್ಘವಾಗಿ ತನಿಖೆ ಮಾಡುವ ಮೂಲಕ ಎಲ್ಲ ದಾಖಲೆಗಳನ್ನು ಸಂಗ್ರಹ ಮಾಡಿದ್ದೇವೆ. ಅನಾರೋಗ್ಯವೆಂದು ಆಸ್ಪತ್ರೆಗೆ ದಾಖಲು ಮಾಡಿದಾಗ ಮೃತಪಟ್ಟಿದ್ದರು ಎನ್ನಲಾಗಿತ್ತು. ಆದರೆ ತನಿಖೆಯಲ್ಲಿ ಅನಸ್ತೇಶಿಯಾ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ. …
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ