/newsfirstlive-kannada/media/media_files/2025/12/13/vijayanagara-district-2025-12-13-08-51-56.jpg)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಸೊನ್ನಮರಡಿ ವೀರಭದ್ರಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಉತ್ಸವ ಮೂರ್ತಿಯನ್ನು ದೇವಸ್ಥಾನದಿಂದ ಸಕಲ ಪೂಜಾವಿಧಿ ವಿಧಾನಗಳೊಂದಿಗೆ ರಥದಲ್ಲಿ ಕುಳ್ಳಿರಿಸಿ, ರಥ ಮುಂದೆ ಸಾಗುತ್ತಿದಂತೆ ಭಕ್ತರು ಜಯಘೋಷ ಹಾಕಿದ್ರು.
ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯನ್ನ ಸಮರ್ಪಿಸಿದರು. ರಥದ ಮುಕ್ತಿಪಠವನ್ನು ಜಗಳೂರಿನ ಪರಮೇಶ್ವರಪ್ಪ ಅವರು 68 ಸಾವಿರ ರೂಗೆ ಹರಾಜಿನಲ್ಲಿ ಪಡೆದುಕೊಂಡರು. ಹುಲಿಕೆರೆ, ಹಿರೇಕುಂಬಳಗುಂಟೆ, ಬಿಟಿ ಗುದ್ದಿ, ಕಾನಾಹೊಸಹಳ್ಳಿ, ಕಾನಾಮಡುಗು ಸೇರಿದಂತೆ ಹತ್ತಾರು ಹಳ್ಳಿಯ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಇನ್ನು, ಸಾಲ ತಿರಿಸು ಅಂತ ಬರೆದು ಬಾಳೆ ಹಣ್ಣು ಸಮರ್ಪಿಸಿದ ಭಕ್ತನ ಕೋರಿಕೆ ಕೂಡ ಅಲ್ಲಿ ಗಮನ ಸೆಳೀಯಿತು.
ಇದನ್ನೂ ಓದಿ: ಹುಡುಗ-ಹುಡುಗಿ ಓಡಿ ಹೋದರು.. ಪ್ರೇಮಿಗಳ ಬೆಂಬಲಿಸಿದ್ದಕ್ಕೆ ಇಬ್ಬರ ಹ*ತ್ಯೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us