/newsfirstlive-kannada/media/media_files/2025/09/05/chinnayya-1-2025-09-05-10-49-21.jpg)
ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆ ಮುಂದುವರೆದಿದೆ. ನೂರಾರು ಬುರುಡೆ ತೋರಿಸುತ್ತೇನೆ ಎಂದು ಚಿನ್ನಯ್ಯ ಬಂದು ಈಗ ಎಸ್ಐಟಿ ಅಧಿಕಾರಿಗಳ ವಶದಲ್ಲಿದ್ದಾನೆ. ಆದರೆ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಈ ಬಗ್ಗೆ ಎಸ್ಐಟಿ ಅಧಿಕಾರಿಗಳು ಪ್ರಶ್ನೆ ಮಾಡಿ..ಪ್ರಶ್ನೆ ಮಾಡಿ ಸುಸ್ತಾಗಿದ್ದರು. ಸದ್ಯ ಇದೀಗ ಚಿನ್ನಯ್ಯ ತಂದಿದ್ದ ಬುರುಡೆ ಎಲ್ಲಿದು ಎನ್ನುವುದು ಗೊತ್ತಾಗಿದೆ.
ಚಿನ್ನಯ್ಯ ತಂದಿದ್ದ ಬುರುಡೆಯನ್ನ ಬಂಗ್ಲೆಗುಡ್ಡೆಯಿಂದ ತಂದಿರುವುದಾಗಿ ಜಯಂತ್ ಹೇಳಿದ್ದಾನೆ. ಅರಣ್ಯದಲ್ಲಿ ಭೂಮಿಯ ಮೇಲ್ಭಾಗದಲ್ಲಿ ಇದ್ದ ಬುರುಡೆಯನ್ನು ತಂದಿದ್ದರು. ಕಾಡಿನಲ್ಲಿ ಒಂದು ಮರಕ್ಕೆ ಸೀರೆ ಬಿಗಿದ ಸ್ಥಳದ ಪಕ್ಕದಲ್ಲೇ ಬುರುಡೆ ಪತ್ತೆ ಆಗಿದೆ. ಬುರುಡೆಯನ್ನು ಮೇಲೆತ್ತುಕೊಳ್ಳಬೇಕಾದರೆ ಕತ್ತಿಯನ್ನು ಬಳಕೆ ಮಾಡಿ ಅದನ್ನು ಚೀಲದಲ್ಲಿ ಹಾಕಿಕೊಳ್ಳಲಾಗಿದೆ. ಇದನ್ನು ತರಬೇಕಾದರೆ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿ: ಹೊಸ ಲುಕ್ನಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ.. ಹೋಗಿದ್ದು ಎಲ್ಲಿಗೆ ಗೊತ್ತಾ?
ಧರ್ಮಸ್ಥಳ ಭಾಗದಿಂದಲೇ ಬುರುಡೆ ಎತ್ತಿಕೊಂಡು ಬಂದಿರುವ ಅನುಮಾನ ಇದೆ. ಕಾಡಿನಿಂದ ಬುರುಡೆ ತಂದಿರುವ ಒರಿಜಿನಲ್ ವಿಡಿಯೋ ಲಭ್ಯ ಆಗಿದೆ. ಜುಲೈ 11 ರಂದು ಯೂಟ್ಯೂಬರ್ ಕೇರಳದ ಮನಾಫ್ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದರಲ್ಲಿಯೇ ಬುರುಡೆ ತಂದಿರುವುದು ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ