ಜಮೀನು ಪೋಡಿ ಎಂದರೇನು..? ಅದನ್ನು ರೈತರು ಯಾಕೆ ಮಾಡಿಸಬೇಕು..? ಕಂಪ್ಲೀಟ್ ಮಾಹಿತಿ

ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ವಿಭಜನೆ ಮಾಡುವುದು ಎಂದರ್ಥ. ಒಂದು ವೇಳೆ ಒಂದೇ ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನರ ಹೆಸರಿದ್ರೆ ಅಥವಾ ಹಲವಾರು ಪಾಲುದಾರರಿದ್ರೆ, ಆ ಜಮೀನನ್ನು ಪ್ರತ್ಯೇಕಿಸಿ ಅವರವರ ಹೆಸರಿಗೆ ಸ್ವತಂತ್ರ ದಾಖಲೆ ಮಾಡಿಕೊಡುವುದನ್ನೇ ಪೋಡಿ ಎನ್ನುತ್ತಾರೆ.

author-image
Ganesh Kerekuli
Advertisment

ಪೋಡಿ ಎಂದರೆ ಜಮೀನಿನ ದುರಸ್ತಿ ಅಥವಾ ವಿಭಜನೆ ಮಾಡುವುದು ಎಂದರ್ಥ. ಒಂದು ವೇಳೆ ಒಂದೇ ಸರ್ವೆ ನಂಬರ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಜನರ ಹೆಸರಿದ್ರೆ ಅಥವಾ ಹಲವಾರು ಪಾಲುದಾರರಿದ್ರೆ, ಆ ಜಮೀನನ್ನು ಪ್ರತ್ಯೇಕಿಸಿ ಅವರವರ ಹೆಸರಿಗೆ ಸ್ವತಂತ್ರ ದಾಖಲೆ ಮಾಡಿಕೊಡುವುದನ್ನೇ ಪೋಡಿ ಎನ್ನುತ್ತಾರೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ಒಂದು ಸರ್ವೆ ನಂಬರ್ ಅಡಿಯಲ್ಲಿ ಹಲವಾರು ಹಿಸ್ಸಾಗಳು ಇರುತ್ತವೆ. ಆದರೆ ಎಲ್ಲರ ಹೆಸರು ಒಂದೇ ಪಹಣಿಯಲ್ಲಿರುತ್ತದೆ. ಇದರಿಂದಾಗಿ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅಥವಾ ಸಾಲ ಪಡೆಯಲು ಸಾಕಷ್ಟು ತೊಂದರೆಯಾಗುತ್ತದೆ. ಪೋಡಿ ಮಾಡಿಸಿದಾಗ ಜಮೀನನ್ನು ಕಾನೂನುಬದ್ಧವಾಗಿ ವಿಭಜಿಸಿ, ಪ್ರತ್ಯೇಕ ಹಿಸ್ಸಾ ಸಂಖ್ಯೆ ಮತ್ತು ತಾತ್ಕಾಲಿಕ ಪೋಡಿ ನಂಬರ್ ನೀಡಲಾಗುತ್ತದೆ. ಇದರಿಂದ ಪ್ರತಿಯೊಬ್ಬ ಪಾಲುದಾರರಿಗೂ ಅವರ ಜಮೀನಿನ ಮೇಲೆ ಏಕ ಮಾಲೀಕತ್ವದ ಸ್ವತಂತ್ರ ಪಹಣಿ ದೊರೆಯುತ್ತದೆ.

ಪೋಡಿಯಲ್ಲಿ ಪ್ರಮುಖವಾಗಿ ನಾಲ್ಕು ವಿಧಗಳಿವೆ: ದರ್ಖಾಸ್ತು ಪೋಡಿ, ಅಲಿನೇಷನ್ ಪೋಡಿ, ಮ್ಯೂಟೇಷನ್ ಪೋಡಿ ಮತ್ತು ತುರ್ತಾಗಿ ಮಾಡಿಸಿಕೊಳ್ಳಬಹುದಾದ ತತ್ಕಾಲ್ ಪೋಡಿ. ಈ ಪ್ರಕ್ರಿಯೆಯನ್ನು ಕೈಗೊಳ್ಳಲು ಭೂ ಮಾಲೀಕರ ಆಧಾರ್ ಕಾರ್ಡ್ ಮತ್ತು ಜಮೀನಿನ ಪಹಣಿ ಕಡ್ಡಾಯವಾಗಿ ಬೇಕು. ನೀವು ನಿಮ್ಮ ಹತ್ತಿರದ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಪ್ರಕ್ರಿಯೆ ಆರಂಭಿಸಬಹುದು. ನೆನಪಿರಲಿ, ಪೋಡಿಯಲ್ಲಿ ಕೇವಲ ಗಡಿ ರೇಖೆಗಳನ್ನು ಗುರುತಿಸಿ ದಾಖಲೆ ಸೃಷ್ಟಿಸಲಾಗುತ್ತದೆಯೇ ಹೊರತು ಪಹಣಿಯಲ್ಲಿರುವ ಹೆಸರು ಬದಲಾವಣೆಯಾಗುವುದಿಲ್ಲ.

ಇದನ್ನೂ ಓದಿ:ಶಿಕ್ಷಣ ‌ಇಲಾಖೆಯಿಂದ ಮಹತ್ವದ ಆದೇಶ.. ಶಿಕ್ಷಕರು, ಪೋಷಕರು ಓದಲೇಬೇಕಾದ ಸ್ಟೋರಿ

ಪೋಡಿ ಮಾಡಿಸುವುದರಿಂದ ರೈತರಿಗೆ ಹತ್ತಾರು ಪ್ರಯೋಜನಗಳಿವೆ. ಮುಖ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ ಮತ್ತು ಬೆಳೆ ವಿಮೆ ಸೌಲಭ್ಯ ಪಡೆಯಲು ಇದು ಸಹಕಾರಿ. ಅಲ್ಲದೆ, ಜಮೀನಿನ ಗಡಿಗಳು ನಿಖರವಾಗಿ ಗುರುತಿಸಲ್ಪಡುವುದರಿಂದ ಪಕ್ಕದ ಜಮೀನಿನವರಿಂದ ಆಗುವ ಒತ್ತುವರಿ ತಡೆಯಬಹುದು. ಪ್ರಮುಖವಾಗಿ ಕರ್ನಾಟಕದಲ್ಲಿ ಕೃಷಿ ಭೂಮಿಯನ್ನು ಮಾರಾಟ ಮಾಡಲು ಅಥವಾ ಹೊಸದಾಗಿ ಖರೀದಿ ಮಾಡಲು ಈಗ ಪೋಡಿ ಮಾಡಿಸುವುದು ಕಡ್ಡಾಯವಾಗಿದೆ.

ಕೊನೆಯದಾಗಿ, ಪೋಡಿ ಪ್ರಕ್ರಿಯೆ ಪೂರ್ಣಗೊಂಡ ನಂತರ ರೈತರಿಗೆ ಒಂದು ಪ್ರತ್ಯೇಕ ಆರ್.ಟಿ.ಸಿ (RTC) ಮತ್ತು ಜಮೀನಿನ ನಕ್ಷೆ ದೊರೆಯುತ್ತದೆ. ಇದು ಭೂಮಿಯ ಮಾಲೀಕತ್ವದ ಭದ್ರತೆಯನ್ನು ಖಾತರಿಪಡಿಸುತ್ತದೆ. ನಿಮ್ಮ ಜಮೀನಿನ ದಾಖಲೆಗಳು ಸ್ಪಷ್ಟವಾಗಿರಲು ಮತ್ತು ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆಗಳು ಎದುರಾಗದಿರಲು ಪೋಡಿ ಮಾಡಿಸಿಕೊಳ್ಳುವುದು ಪ್ರತಿಯೊಬ್ಬ ಜಮೀನು ಮಾಲೀಕರ ಜವಾಬ್ದಾರಿಯಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಬಹುದು.
ಮತ್ತಷ್ಟು ಇಂಟರೆಸ್ಟಿಂಗ್​ ಕಂಟೆಂಟ್​ಗಾಗಿ ನ್ಯೂಸ್​ಫಸ್ಟ್​ ಪ್ರಾಪರ್ಟಿ ಸಬ್ಸ್​ಕ್ರೈಬ್​ ಮಾಡಿ..!

ಇದನ್ನೂ ಓದಿ: ವಿದೇಶದಲ್ಲಿ ಓದುವ ಕನಸು.. ಅದಕ್ಕಾಗಿ ನೀವು ಎಷ್ಟು ತಯಾರಿ ನಡೆಸಬೇಕು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Poddi
Advertisment