Advertisment

ಪ್ರಿಯಕರನೊಂದಿಗೆ ಸೇರಿ ಗಂಡನ ಕತ್ತು, ಮರ್ಮಾಂಗ ಹಿಸುಕಿ ಜೀವ ತೆಗೆಯಲು ಯತ್ನ.. ಹೆಂಡತಿ ಅರೆಸ್ಟ್​

ಈ ವೇಳೆ ಸುನಂದ ಸಿದ್ದು ಬಿಡಬೇಡಾ ಖಲ್ಲಾಸ್ ಮಾಡು ಎನ್ನುತ್ತಿದ್ದಳು. ಕತ್ತು ಹಿಸುಕುವಾಗ ಬೀರಪ್ಪ ಕಾಲಿನಿಂದ ಕೂಲರ್ ಅನ್ನು ಒದ್ದು ಶಬ್ಧ ಮಾಡಿದ್ದಾನೆ. ಶಬ್ಧ ಜೋರಾಗಿದ್ದರಿಂದ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ.

author-image
Bhimappa
VIJ_WIFE
Advertisment

ವಿಜಯಪುರ: ಪ್ರಿಯಕರನೊಂದಿಗೆ ಸೇರಿ ರಾತ್ರಿ ಮಲಗಿದ್ದ ತನ್ನ ಗಂಡನ ಕತ್ತು ಹಿಸುಕಿ ಜೀವ ತೆಗೆಯಲು ಹೆಂಡತಿ ಪ್ರಯತ್ನಿಸಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. 

Advertisment

ತನ್ನ ಗಂಡ ಬೀರಪ್ಪ ಮಾಯಪ್ಪ ಪೂಜಾರಿ (36)ಯ ಜೀವ ತೆಗೆಯಲು ಯತ್ನಿಸಿದ ಹೆಂಡತಿ ಸುನಂದ. ಈಕೆಯ ಪ್ರಿಯಕರ ಸಿದ್ದಪ್ಪ ಕ್ಯಾತಕೇರಿ ದುಷ್ಕೃತ್ಯಕ್ಕೆ ಕೈ ಹಾಕಿದವರು. ಗಂಡನ ಜೀವ ತೆಗೆಯಲು ಸುನಂದ ಸಿದ್ದಪ್ಪನ ಜೊತೆ ಸೇರಿ ಪ್ಲಾನ್ ಮಾಡಿದ್ದಳು. ಕೃತ್ಯಕ್ಕೆ ಯತ್ನಿಸಿದಾಗ ಮನೆಯ ಮಾಲೀಕರು ಬಂದಿದ್ದರಿಂದ ಎಲ್ಲವೂ ವಿಫಲವಾಗಿದೆ. ಸೆಪ್ಟೆಂಬರ್ 1ರಂದು ನಡೆದಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 
    
ಸಿದ್ದಪ್ಪ ಕ್ಯಾತಕೇರಿ ಎಂಬಾತನೊಂದಿಗೆ ಸುನಂದ ಅನೈತಿಕ ಸಂಬಂಧ ಹೊಂದಿದ್ದಳು. ಹೀಗಾಗಿ ಮಲಗಿದಾಗ ಗಂಡನ ಜೀವ ತೆಗೆಯಲು ಸುನಂದ ಪ್ಲಾನ್ ಮಾಡಿದ್ದಳು. ಅದರಂತೆ ಗಂಡ ಮಲಗಿದ್ದಾಗ ಪ್ರಿಯಕರನ ಜೊತೆಗೆ ಮತ್ತೊಬ್ಬನನ್ನು ಕರೆಯಿಸಿ ಕೊಲೆಗೆ ಯತ್ನಿಸಿದ್ದಾಳೆ. ಗಂಡನ ಎದೆ ಮೇಲೆ ಕುಳಿತು ಕತ್ತು ಹಿಸುಕಿ, ಮರ್ಮಾಂಗ ಹಿಸುಕಿ ಜೀವ ತೆಗೆಯಲು ಮುಂದಾಗಿದ್ದರು. 

ಈ ವೇಳೆ ಸುನಂದ ಸಿದ್ದು ಬಿಡಬೇಡಾ ಖಲ್ಲಾಸ್ ಮಾಡು ಎನ್ನುತ್ತಿದ್ದಳು. ಕತ್ತು ಹಿಸುಕುವಾಗ ಬೀರಪ್ಪ ಕಾಲಿನಿಂದ ಕೂಲರ್ ಅನ್ನು ಒದ್ದು ಶಬ್ಧ ಮಾಡಿದ್ದಾನೆ. ಶಬ್ಧ ಜೋರಾಗಿದ್ದರಿಂದ ಮನೆ ಮಾಲೀಕರು ಎಚ್ಚರಗೊಂಡಿದ್ದಾರೆ. ಬಳಿಕ ಇವರ ಮನೆ ಬಳಿ ಬಂದು ಮಾಲೀಕ ಬಾಗಿಲು ಬಡಿದಾಗ ಎಚ್ಚರಗೊಂಡು ಬೀರಪ್ಪನ 8 ವರ್ಷದ ಮಗ ಬಾಗಿಲು ತೆರೆದಿದ್ದಾನೆ. ಬಾಗಿಲು ಓಪನ್ ಆಗುತ್ತಿದ್ದಂತೆ ಪ್ರಿಯಕರ ಪರಾರಿಯಾಗಿದ್ದಾನೆ.

ಇದನ್ನೂ ಓದಿ:ಮತ್ತು ಬರೋ ಸ್ಪ್ರೇ ಮಾಡಿ, ಕೈ ಕಟ್ಟಿ ಹೆಂಡತಿ ತಲೆ ಬೋಳಿಸಿದ ಗಂಡ.. ಮನೆಯವ್ರು ಸಪೋರ್ಟ್​

Advertisment

VIJ_WIFE_HUSBAND

ಪರಾರಿಯಾದ ಬಳಿಕ ವಿಡಿಯೋ ಮಾಡಿ ಹರಿ ಬಿಟ್ಟಿರುವ ಸಿದ್ದಪ್ಪ, ಸುನಂದ ಮಾತು ಕೇಳಿ ನಾನು ತಗಲಾಕೊಂಡೆ ಎಂದು ಹೇಳಿದ್ದಾನೆ. ಸದ್ಯ ಸುನಂದಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಪ್ಪಿಸಿಕೊಂಡಿರುವ ಪ್ರಿಯಕರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಗಾಯಗೊಂಡ ಬೀರಪ್ಪನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಬೀರಪ್ಪ ಮೂಲತಃ ಅಂಜುಟಗಿ ಗ್ರಾಮದವರು. ಪತ್ನಿ ಸುನಂದ ಅದೇ ಗ್ರಾಮದ ಸಿದ್ದಪ್ಪನ ಜೊತೆಗೆ ಮೊಬೈಲ್​ನಲ್ಲಿ ಮಾತಾಡುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಕೊಂಡಿದ್ದಳು. ಸಾಲ ಇದ್ದಿದ್ದರಿಂದ ಅಂಜುಟಗಿ ಗ್ರಾಮದಲ್ಲಿದ್ದ ಜಮೀನು ಮಾರಾಟ ಮಾಡಿ ಇಂಡಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದರೂ ಪ್ರಿಕಯರನೊಂದಿಗೆ ಫೋನ್​​ನಲ್ಲಿ ಮಾತನಾಡುತ್ತಿದ್ದಳು. ಒಮ್ಮೆ ಸಿಕ್ಕಿಕೊಂಡಾಗ ಇನ್ನೊಮ್ಮೆ ಹೀಗೆ ಮಾಡಲ್ಲ ಎಂದಿದ್ದ ಹೆಂಡತಿ ಸುನಂದ ಕೊನೆಗೆ ಗಂಡನನ್ನೇ ಮುಗಿಸಲು ದೊಡ್ಡ ಪ್ಲಾನ್ ಮಾಡಿ ಪೊಲೀಸರಿಗೆ ತಗಲಾಕಿಕೊಂಡಿದ್ದಾಳೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

women with lover and husband Women
Advertisment
Advertisment
Advertisment