/newsfirstlive-kannada/media/media_files/2025/08/20/accident-news1-2025-08-20-22-47-56.jpg)
ಬೆಂಗಳೂರು: ಲಾರಿ ಡ್ರೈವರ್ ನಿರ್ಲಕ್ಷ್ಯಕ್ಕೆ ಮಹಿಳೆ ಆಸ್ಪತ್ರೆ ಸೇರಿರೋ ಘಟನೆ ಜಾಲಹಳ್ಳಿ ಸರ್ಕಲ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಆಕೆಯ ಮೇಲೆ ಲಾರಿ ಹರಿದು ಹೋಗಿದೆ. ರಾತ್ರಿ 8:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಇದನ್ನೂ ಓದಿ:ದರ್ಶನ್ ಸೆಲೆಬ್ರಿಟಿಗಳಿಗೆ ಗುಡ್ನ್ಯೂಸ್.. ಡೆವಿಲ್ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ಗೆ ಮುಹೂರ್ತ ಫಿಕ್ಸ್
ಮಹಿಳೆಯೊಬ್ಬರು ಸಿಗ್ನಲ್ ಕ್ರಾಸ್ ಮಾಡುತ್ತಿದ್ದರು. ಆಗ 20 ಅಡಿಗೂ ಉದ್ದದ ಲಾರಿ ಯೂಟರ್ನ್ ತೆಗೆದುಕೊಳ್ಳುತ್ತಿತ್ತು. ಈ ವೇಳೆ ಮಹಿಳೆ ಹಿಂಬದಿ ಚಕ್ರಕ್ಕೆ ಸಿಕ್ಕಿಹಾಕಿಕೊಂಡಿದ್ದರು. ಮಹಿಳೆಯನ್ನು ಗಮನಿಸದೆ ಆಕೆಯ ಮೇಲೆಯೇ ಲಾರಿ ಹರಿದು ಹೋಗಿದೆ. ಪರಿಣಾಮ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಹಿಳೆ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಅಪಘಾತದ ಪರಿಣಾಮ ಜಾಲಹಳ್ಳಿ ಸಿಗ್ನಲ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಈ ಘಟನೆ ಸಂಬಂಧ ಪೀಣ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ