/newsfirstlive-kannada/media/media_files/2025/09/23/yaduveer-2025-09-23-11-46-16.jpg)
ಅಂಬಾ ವಿಲಾಸ ಅರಮನೆಯಲ್ಲಿ ಯದುವಂಶದ ಖಾಸಗಿ ದರ್ಬಾರ್ ನಿನ್ನೆಯಿಂದ ಆರಂಭವಾಗಿದೆ. ರಾಜವಂಶಸ್ಥ ಯದುವೀರ್ ಒಡೆಯರ್​ ಸಿಂಹಾಸನವೇರಿ ಧಾರ್ಮಿಕ ವಿಧಿ ವಿಧಾನ ನಡೆಸುತ್ತಿದ್ದಾರೆ.
ಈ ಮಧ್ಯೆ ಮೈಸೂರು ದಸರಾ ಸಂದರ್ಭದಲ್ಲಿ ಯದುವೀರ್​ ಒಡೆಯರ್​ ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ್ದು, ದಸರಾ ಸೇರಿದಂತೆ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ನಿಮಗೆ ಇಷ್ಟವಾದ ಹೀರೋ ಯಾರು ಎಂಬ ಪ್ರಶ್ನೆಗೆ ಯದುವೀರ್​ ಒಡೆಯರ್​ ಡಾ.ರಾಜ್​ ಕುಮಾರ್​ ಎಂದು ಹೇಳಿದ್ದಾರೆ.
ಹಳೆ ಮೈಸೂರು ಭಾಗವನ್ನ ಡಾ.ರಾಜ್​ ಕುಮಾರ್​ ಅವರ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಬೆಟ್ಟದ ಬಾಗಿಲು ಸಿನಿಮಾದಲ್ಲಿ ಬೆಟ್ಟದ ಜಾತ್ರೆಯಲ್ಲಿ ಸಾರ್ವಜನಿಕರು ಎಷ್ಟು ಶಿಸ್ತಿನಿಂದ ಭಾಗಿಯಾಗುತ್ತಿದ್ದರು ಅನ್ನೋದನ್ನ ಡಾ.ರಾಜ್​ ಕುಮಾರ್​ ಅವರ ಸಿನಿಮಾದಲ್ಲಿ ನೋಡಬಹುದು. ಹಳೆ ಬೆಟ್ಟದ ಅರಮನೆ ಕೂಡ ಬೆಟ್ಟದ ಬಾಗಿಲು ಸಿನಿಮಾದಲ್ಲಿ ಕಾಣಿಸುತ್ತದೆ ಎಂದು ಯದುವೀರ್​ ಒಡೆಯರ್​ ಹೇಳಿದ್ದಾರೆ.
ಇತ್ತೀಚಿಗೆ ಕಾಂತಾರ ಸಿನಿಮಾ ನೋಡಿದ್ದೇನೆ ತುಂಬಾ ಚೆನ್ನಾಗಿದೆ. ಮತ್ತೆ ಮಂಡ್ಯದಲ್ಲಿ ತೆಗೆದ ‘ತಿಥಿ’ ಸಿನಿಮಾ ಕೂಡ ನೋಡಿದ್ದೇನೆ ಎಂದು ಯದುವೀರ್​ ಒಡೆಯರ್​ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದಸರಾದಲ್ಲಿ ಅತ್ಯಂತ ದೊಡ್ಡ ಸೆಲೆಬ್ರೇಟಿ ಯಾರು.. ಯದುವೀರ್ ಒಡೆಯರ್ ಹೇಳಿದ ಹೆಸರು..?