/newsfirstlive-kannada/media/media_files/2025/08/21/sameer-md-2025-08-21-15-53-10.jpg)
ಬೆಂಗಳೂರು: ಧರ್ಮಸ್ಥಳದ ಕುರಿತು ಮಾಡಿದ ಒಂದೇ ಒಂದು ವಿಡಿಯೋದಿಂದ ಯುಟ್ಯೂಬರ್ ಸಮೀರ್ ಎಂಡಿ ಸ್ಟಾರ್ ಆಗಿ ಬದಲಾಗಿದ್ದರು. ಈಗ ಅದೇ ವಿಡಿಯೋದಿಂದ ಸಮೀರ್ ಎಂಡಿಗೆ ಬಂಧನದ ಭೀತಿ ಎದುರಾಗಿದೆ.
ಧರ್ಮಸ್ಥಳದ ಕುರಿತು ಎಐ ತಂತ್ರಜ್ಞಾನ ಬಳಸಿ ವಿಡಿಯೋ ಮಾಡಿದ್ದ ಸಮೀರ್ ಎಂಡಿ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ್ದ. ಧರ್ಮಸ್ಥಳದಲ್ಲಿ ಸಾವಿರಾರು ಜನರನ್ನ ರೇ*ಪ್, ಕೊ*ಲೆ ಮಾಡಲಾಗಿದೆ. ಇದನ್ನ ಕೇಳಿದರೆ ನಿಮ್ಮ ರಕ್ತ ಕುದಿಯುತ್ತಿಲ್ವಾ? ಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು. ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ತನ್ನ ವಿಡಿಯೋದಲ್ಲಿ ಹೇಳಿದ್ದ.
ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು
ಇದನ್ನ ಗಂಭೀರವಾಗಿ ಪರಿಗಣಿಸಿದ ಧರ್ಮಸ್ಥಳ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂಡಿಯನ್ನ ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಬನ್ನೇರುಘಟ್ಟದಲ್ಲಿರೋ ನಿವಾಸಕ್ಕೆ ಪೊಲೀಸರು ಎಂಟ್ರಿ ಕೊಡ್ತಿದ್ದಂತೆ ಸಮೀರ್ ಮನೆಯಿಂದ ಪರಾರಿ ಆಗಿದ್ದಾನೆ.
ಇನ್ನು, ಪೊಲೀಸರು ಸಮೀರ್ ಬಗ್ಗೆ ಮಾಹಿತಿ ಕೊಡುವಂತೆ ಪೋಷಕರಿಗೆ ಸೂಚನೆ ನೀಡಿದ್ದಾರೆ. ಇದಲ್ಲದೇ ಬೆಂಗಳೂರಿನ ಮೂಲೆ ಮೂಲೆಯಲ್ಲಿ ಸಮೀರ್ಗಾಗಿ ಹುಡುಕಾಟ ಶುರುವಾಗಿದೆ. ಸಮೀರ್ನ ಮೊಬೈಲ್ ನೆಟ್ವರ್ಕ್ ಆಧರಿಸಿ ಧರ್ಮಸ್ಥಳದ ಪೊಲೀಸರು ಬಂಧನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: BREAKING: ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್
ಇದರ ನಡುವೆ ಬಂಧನದ ಭೀತಿ ಬೆನ್ನಲ್ಲೇ ಸಮೀರ್ ಎಂ.ಡಿ ಕೋರ್ಟ್ ಮೊರೆ ಹೋಗಿದ್ದಾನೆ. ಆಗಸ್ಟ್ 19ರಂದೇ ಸಮೀರ್ ಎಂ.ಡಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಜಿಲ್ಲಾ ನ್ಯಾಯಾಲಯವು ಸಂಜೆ 4.30ಕ್ಕೆ ಆದೇಶ ಕಾಯ್ದಿರಿಸಿದೆ. ಇನ್ನೂ, ಕೆಲವೇ ಹೊತ್ತಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಲಯ ಆದೇಶ ಪ್ರಕಟಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ