/newsfirstlive-kannada/media/media_files/2025/08/24/sammer-2025-08-24-13-33-14.jpg)
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ್ದ ಆರೋಪದ ಮೇಲೆ ಪೊಲೀಸರು ಜುಲೈ 12ರಂದು ಸಮೀರ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದರು. ಇದೇ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸರು ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದರು.
ಇದನ್ನೂ ಓದಿ:ಫುಲ್ ಗ್ಲಾಮರ್ ಲುಕ್ನಲ್ಲಿ ದರ್ಶನ್.. ‘ಇದ್ರೆ ನೆಮ್ಮದಿಯಾಗ್ ಇರ್ಬೇಕು’ ಸಾಂಗ್ ರಿಲೀಸ್
ಇದಕ್ಕೂ ಮೊದಲೇ ಆಗಸ್ಟ್ 19ರಂದೇ ಸಮೀರ್ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಜಿಲ್ಲಾ ನ್ಯಾಯಾಲಯವು ಯೂಟ್ಯೂಬರ್ ಸಮೀರ್ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಇದೀಗ ಯೂಟ್ಯೂಬರ್ ಸಮೀರ್ ವಕೀಲರೊಂದಿಗೆ ಬೆಳ್ತಂಗಡಿ ಠಾಣೆಗೆ ಬಂದಿದ್ದಾನೆ. ಜೊತೆಗೆ ದಾಖಲೆಗಳು, ಮೂವರು ವಕೀಲರೊಂದಿಗೆ ಸಮೀರ್ ವಿಚಾರಣೆಗೆ ಹಾಜರಾಗಿದ್ದಾನೆ. ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಕೇಸ್ನಲ್ಲಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಹೀಗಾಗಿ ನಾಪತ್ತೆಯಾಗಿದ್ದ ಸಮೀರ್ ಈಗ ವಿಚಾರಣೆಗೆಂದು ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾನೆ.
ಸಮೀರ್ ವಿರುದ್ಧ ಕೇಳಿಬಂದ ಆರೋಪಗಳೇನು..?
- ಧರ್ಮಸ್ಥಳದ ವಿರುದ್ಧ ಅಪ ಪ್ರಚಾರ ಮಾಡಿರುವ ಆರೋಪ
- ಶ*ವಗಳನ್ನ ಹೂತಿಟ್ಟ ಬಗ್ಗೆ, ಬುರುಡೆ ರಹಸ್ಯದ ಬಗ್ಗೆ ವಿಡಿಯೋ
- AI ವಿಡಿಯೋಗಳ ಮೂಲಕ ಅಪಪ್ರಚಾರ ಮಾಡಿದ ಆರೋಪ
- ಜನರನ್ನ ಹಾದಿ ತಪ್ಪಿಸೋದಕ್ಕೆ ವಿಡಿಯೋ ಮಾಡಿದ ಆರೋಪ
- ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ
- ಬುರುಡೆ ಪ್ರಕರಣದಲ್ಲಿ ಸಮೀರ್ ಕೂಡ ಸೂತ್ರಧಾರಿ ಎನ್ನಲಾಗಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ