/newsfirstlive-kannada/media/media_files/2025/08/21/sameer-m-d-2025-08-21-14-58-21.jpg)
ಬೆಂಗಳೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಬೆನ್ನಲ್ಲೇ ಯೂಟ್ಯೂಬರ್ ಸಮೀರ್ ಎಂ.ಡಿಯನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿಯಲ್ಲಿರುವ ಸಮೀರ್ ಮನೆಯನ್ನ ಸುತ್ತುವರೆದಿದ್ದಾರೆ.
ಯೂಟ್ಯೂಬರ್ ಸಮೀರ್ಗೆ ಬಂಧನದ ಭೀತಿ ಎದುರಾಗುದೆ. ಸಮೀರ್ನನ್ನು ವಶಕ್ಕೆ ಪಡೆಯಲು ಪೊಲೀಸರು ಬರ್ತಿದ್ದಂತೆ ಮನೆಬಿಟ್ಟು ಪರಾರಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಸಮೀರ್ ಮನೆಯಲ್ಲಿ ಕುಟುಂಬಸ್ಥರು ಮಾತ್ರ ಇದ್ದಾರೆ ಅಂತ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಆರೋಪದ ಬೆನ್ನಲ್ಲೇ ಯೂಟ್ಯೂಬರ್ ಸಮೀರ್ನನ್ನು ಬಂಧಿಸಲು ಧರ್ಮಸ್ಥಳ ಪೊಲೀಸ್ ಠಾಣೆಯ ಮೂವರು ಪೊಲೀಸರು ಬಂದಿದ್ದಾರೆ. ಬನ್ನೇರುಘಟ್ಟ ಬಳಿಯ ಹುಲ್ಲಳ್ಳಿಯಲ್ಲಿರುವ ಸಮೀರ್ ಮನೆಯನ್ನು ಧರ್ಮಸ್ಥಳ ಹಾಗೂ ಬನ್ನೇರುಘಟ್ಟ ಪೊಲೀಸರು ಸುತ್ತುವರೆದಿದ್ದಾರೆ. ಸಿಡಿಆರ್ ಹಾಗೂ ಮೊಬೈಲ್ ನೆಟ್ವರ್ಕ್ ಆಧಾರಿತವಾಗಿ ಸಮೀರ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಲೊಕೇಶನ್ ಡಂಪ್ ಮಾಡಿದ್ದ ಧರ್ಮಸ್ಥಳ ಪೊಲೀಸರಿಗೆ ಆಗ ಸಿಕ್ಕಿದ್ದೇ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಪಕ್ಕದಲ್ಲಿರುವ ಮನೆ. ಸದ್ಯ ಸಮೀರ್ ಮನೆಯನ್ನು ಪೊಲೀಸರು ಜಾಲಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ