newsfirstkannada.com

ಹಣಕಾಸು ವರ್ಷದ ಮೊದಲ ದಿನವೇ ಷೇರುಪೇಟೆಯಲ್ಲಿ ಸಂಚಲನ; ನಿಫ್ಟಿ, ಸೆನ್ಸೆಕ್ಸ್​​ ಸಾರ್ವಕಾಲಿಕ ದಾಖಲೆ

Share :

Published April 1, 2024 at 10:37am

Update April 1, 2024 at 10:38am

    ಷೇರು ಮಾರುಕಟ್ಟೆ ಆರಂಭ ಆಗ್ತಿದ್ದಂತೆ ಗರಿಷ್ಠ ಮಟ್ಟ ತಲುಪಿದ ಸೆನ್ಸೆಕ್ಸ್​

    ಕೇವಲ 20 ನಿಮಿಷದಲ್ಲೇ ಎರಡೂ ಸೂಚ್ಯಂಕಗಳು ಸಾರ್ವಕಾಲಿಕ ಜಿಗಿತ

    ಷೇರು ಮಾರುಕಟ್ಟೆಯಲ್ಲಿ ಯಾವುದು ಟಾಪ್​​ ಲಿಸ್ಟ್​ನಲ್ಲಿವೆ..?

ಹೊಸ ಹಣಕಾಸು ವರ್ಷದ ಮೊದಲ ದಿನ ಷೇರುಪೇಟೆಯಲ್ಲಿ ಭರ್ಜರಿ ಆರಂಭ ಕಂಡಿದೆ. ಷೇರುಪೇಟೆ ಆರಂಭವಾದ ತಕ್ಷಣ 74,101 ಗರಿಷ್ಠ ಮಟ್ಟಕ್ಕೆ ಸೆನ್ಸೆಕ್ಸ್ ತಲುಪಿದೆ. ಮಾರುಕಟ್ಟೆ ಪ್ರಾರಂಭವಾದ 20 ನಿಮಿಷದಲ್ಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಹೊಸ ದಾಖಲೆ ಬರೆದಿದೆ. ಈ ಎರಡೂ ಸೂಚ್ಯಂಕಗಳು ಸಾರ್ವಕಾಲಿಕ ಜಿಗಿತ ತಲುಪಿವೆ.

ಐತಿಹಾಸಿಕ ಗರಿಷ್ಠ ಮಟ್ಟ
ಎನ್‌ಎಸ್‌ಇ (National Stock Exchange) ನಿಫ್ಟಿ 22,529.95 ಮತ್ತು ಬಿಎಸ್‌ಇ ಸೆನ್ಸೆಕ್ಸ್ (Bombay Stock Exchange Limited) 74,254.62 ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಮಾರುಕಟ್ಟೆಯ ಇಂದಿನ ಆರಂಭಿಕ ಪ್ರಾರಂಭವು 317.27 ಪಾಯಿಂಟ್ ಅಥವಾ ಶೇಕಡಾ 0.43 ರಷ್ಟು ಏರಿಕೆಯೊಂದಿಗೆ 73,968 ರ ಮಟ್ಟದಲ್ಲಿ ಪ್ರಾರಂಭವಾಗಿದೆ. ಎನ್‌ಎಸ್‌ಇ ನಿಫ್ಟಿಯ ವಹಿವಾಟು 128.10 ಪಾಯಿಂಟ್ ಅಥವಾ ಶೇಕಡಾ 0.57 ರಷ್ಟು ಏರಿಕೆಯೊಂದಿಗೆ 22,455 ಮಟ್ಟದಲ್ಲಿ ಪ್ರಾರಂಭವಾಗಿದೆ.

557 ಅಂಕಗಳ ಭಾರೀ ಜಿಗಿತದೊಂದಿಗೆ ಬಿಎಸ್‌ಇ ಸಂವೇದಿ ಸೂಚ್ಯಂಕ ಇಂದು 74,208ಕ್ಕೆ ತಲುಪಿದೆ. 30 ಸೆನ್ಸೆಕ್ಸ್ ಷೇರುಗಳಲ್ಲಿ 2 ಮಾತ್ರ ಕುಸಿತ ಕಂಡಿದೆ. ಉಳಿದ 28 ಷೇರುಗಳು ಏರಿಕೆಯೊಂದಿಗೆ ಹಸಿರು ಮಾರ್ಕ್‌ನಲ್ಲಿ ವಹಿವಾಟಾಗುತ್ತಿದೆ. ಸೆನ್ಸೆಕ್ಸ್​ನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ ಶೇಕಡಾ 2 ರಷ್ಟು ಮತ್ತು ಟಾಟಾ ಸ್ಟೀಲ್ ಶೇಕಡಾ 1.70 ರಷ್ಟು ಏರಿಕೆಯಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಶೇ.1.55 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.25 ಏರಿಕೆಯಾಗಿದೆ. ಬಜಾಜ್ ಫಿನ್‌ಸರ್ವ್ ಶೇಕಡಾ 1.15 ಮತ್ತು ಏಷ್ಯನ್ ಪೇಂಟ್ಸ್ ಶೇಕಡಾ 1.11 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: FASTag, EPS, NPS.. ಇಂದಿನಿಂದ ದೇಶದಲ್ಲಿ ಜಾರಿಗೆ ಬಂದಿರುವ 6 ಬದಲಾವಣೆಗಳ ಬಗ್ಗೆ ನಿಮಗೂ ಗೊತ್ತಿರಲಿ

ಎನ್‌ಎಸ್‌ಇ ನಿಫ್ಟಿ ಕೂಡ ಗರಿಷ್ಠ ಮಟ್ಟದಲ್ಲಿ ಸ್ವಿಂಗ್ ಆಗುತ್ತಿದೆ. 50 ಷೇರುಗಳಲ್ಲಿ 48 ಷೇರುಗಳು ಏರಿಕೆ ಕಂಡಿದೆ. 2 ಷೇರುಗಳು ಮಾತ್ರ ಕುಸಿತದೊಂದಿಗೆ ವಹಿವಾಟು ನಡೆಸುತ್ತಿವೆ. ಜೆಎಸ್‌ಡಬ್ಲ್ಯೂ ಸ್ಟೀಲ್, ಟಾಟಾ ಸ್ಟೀಲ್, ಶ್ರೀ ರಾಮ್ ಫೈನಾನ್ಸ್, ಅಪೊಲೊ ಹಾಸ್ಪಿಟಲ್ಸ್ ಮತ್ತು ಎಲ್ ಆಂಡ್ ಟಿ ಷೇರುಗಳು ಟಾಪ್ ಲಿಸ್ಟ್​ನಲ್ಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣಕಾಸು ವರ್ಷದ ಮೊದಲ ದಿನವೇ ಷೇರುಪೇಟೆಯಲ್ಲಿ ಸಂಚಲನ; ನಿಫ್ಟಿ, ಸೆನ್ಸೆಕ್ಸ್​​ ಸಾರ್ವಕಾಲಿಕ ದಾಖಲೆ

https://newsfirstlive.com/wp-content/uploads/2024/04/STOCK-MARKET.jpg

Load More