ಬಹಳ ಅದ್ಧೂರಿಯಾಗಿ ನಡೆದ ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ
ಪ್ರೀ ವೆಡ್ಡಿಂಗ್ನಲ್ಲಿ ಡೈಮಂಡ್ ಲಯನ್ ಬ್ರೂಚ್ ಧರಿಸಿದ್ದ ಅನಂತ್ ಅಂಬಾನಿ
ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ ಅನಂತ್ ಅಂಬಾನಿ ಬ್ರೂಚ್ ಇತಿಹಾಸ
ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಕುಟುಂಬದಲ್ಲಿ ನಡೆದ ಮದುವೆ ಸಂಭ್ರಮ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದೆ. ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಅಂಬಾನಿ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಗುರು ಹಿರಿಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.
ಇದನ್ನೂ ಓದಿ: ಮುಕೇಶ್ ಅಂಬಾನಿ ಅಲ್ಲವೇ ಅಲ್ಲ.. ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಹೆಚ್ಚು ಷೇರು ಹೊಂದಿರೋದು ಯಾರು ಗೊತ್ತೇ..?
ಮುಖೇಶ್ ಅಂಬಾನಿ ತಮ್ಮ ಕಿರಿಯ ಮಗನ ಮೂರು ದಿನದ ಮದುವೆ ವೈಭವಾತೀತವಾಗಿ ನಡೆಸಿದ್ದಾರೆ. ಅತಿಥಿಗಳ ಹಿಡಿದು ಅಲಂಕಾರಗೊಂಡಿರೋ ಹೂಗಳವರೆಗೂ ಎಲ್ಲವೂ ಅದ್ಧೂರಿಯಾಗಿತ್ತು. ಈ ಅನಂತ್ ಹಾಗೂ ರಾಧಿಕಾ ಮದುವೆಗೆ ಬರೋಬ್ಬರಿ 5000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಮುಖೇಶ್ ಅಂಬಾನಿ. ಅದರಲ್ಲೂ ಈ ಮೂರು ದಿನದ ಮದುವೆಗೆ ಅನಂತ್ ಅಂಬಾನಿ ಧರಿಸಿದ್ದ ಬ್ರೂಚ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅನಂತ್ ಅಂಬಾನಿಗೆ ಪ್ರಾಣಿಗಳನ್ನು ಸಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ಅಷ್ಟೇ ಏಕೆ ಸ್ವತಃ ಆನೆಗಳನ್ನು ಅವರು ದತ್ತು ಪಡೆದು ಸಾಕುತ್ತಿದ್ದಾರೆ. ಅಚ್ಚರಿ ಎಂದರೆ ತಮ್ಮ ಮೂರು ದಿನದ ಮದುವೆ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ ಎರಡು ದಿನ ಪ್ರಾಣಿಗಳ ‘ಬ್ರೂಚ್’ ಹಾಕಿಕೊಂಡಿದ್ದರು.
ಇದನ್ನೂ ಓದಿ: ನೆರಳು ಎಲ್ಲಿಯೂ ಬೀಳಲ್ಲ, ಗಾಳಿಯ ವಿರುದ್ಧ ಹಾರಾಡುತ್ತೆ ಧ್ವಜ.. ವಿಜ್ಞಾನಕ್ಕೂ 5 ಸವಾಲು ಪುರಿ ಜಗನ್ನಾಥನ ಸನ್ನಿಧಿ..!
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆದ ತಮ್ಮ ಮದುವೆಗೆ ದಿನಕ್ಕೊಂದು ಉಡುಪನ್ನು ಧರಿಸಿದ್ದರು. ಆ ಉಡುಪಿನಲ್ಲಿ ಮುಖ್ಯವಾಗಿ ಬ್ರೂಚ್ಗಳ ಬೆಲೆಯ ಬಗ್ಗೆ ಸರ್ಚ್ ಮಾಡುತ್ತಿದ್ದಾರೆ ಸಾಕಷ್ಟು ಜನ. ಅನಂತ್ ಗುಜರಾತ್ನ ಜಾಮ್ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್ ಲಯನ್ ಬ್ರೂಚ್ 50 ಕ್ಯಾರಟ್ಗಳಿಗಿಂತ ಹೆಚ್ಚು ವಜ್ರವನ್ನು ಒಳಗೊಂಡಿದೆಯಂತೆ. ಇದೇ ವಜ್ರಗಳ ಆಭರಣಗಳಿಂದ ಮುಚ್ಚಿದ ಕಸ್ಟಮ್ ನಿರ್ಮಿತ ಲಯನ್ ಬ್ರೂಚ್ ಅನ್ನು ಅನಂತ್ ಅಂಬಾನಿ ಧರಿಸಿದ್ದರು. ಲಯನ್ ಕಣ್ಣುಗಳಿಗೆ ಮೇನ್ ಮತ್ತು ಹಸಿರು ಪಚ್ಚೆಗಳನ್ನು ಬಳಸಲಾಗಿದೆ. ಬ್ರೂಚ್ ಅನಂತ್ ಅವರ ಪ್ರಾಣಿಗಳ ಮೇಲಿನ ಪ್ರೀತಿಯ ಸಂಕೇತವಾಗಿತ್ತು.
ಅನಂತ್ ಅಂಬಾನಿ ಶುಕ್ರವಾರ ಕೆಂಪು ಬಣ್ಣದ ಶೇರ್ವಾನಿ ಧರಿಸಿದ್ದರು. ಅವರು ಧರಿಸಿದ್ದ ಶೇರ್ವಾನಿ ಎಡಗಡೆಯಲ್ಲಿ ಆನೆಯ ‘ಬ್ರೂಚ್’ ಧರಿಸಿದ್ದರು. ಇದು 14 ಕೋಟಿ ಬೆಲೆ ಬಾಳುವ ಬ್ರೂಚ್ ಆಗಿದ್ದು, ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು. ಇದಲ್ಲದೆ, ಅನಂತ್ ಅಂಬಾನಿ ಸಂಗೀತಾ ಕಾರ್ಯಕ್ರಮದ ವೇಳೆ ತಮ್ಮ ಕೋಟ್ ಮೇಲೆ ಸಿಂಹದ ‘ಬ್ರೂಚ್’ ಧರಿಸಿದ್ದರು. ಇದು ಕೂಡ ದುಬಾರಿ ಮೌಲ್ಯದಾಗಿತ್ತು. ಅನಂತ್ ಅಂಬಾನಿ ಹಾಗೂ ರಾಧಿಕಾ ಮದುವೆ ಸಮಾರಂಭದಲ್ಲಿ ಪಚ್ಚೆ ಮತ್ತು ವಜ್ರದ ವಿನ್ಯಾಸವನ್ನು ಒಳಗೊಂಡ ಪ್ಯಾಂಥರ್ ಬ್ರೂಚ್ ಅನ್ನು ಧರಿಸಿದ್ದರು. ಈ ಪ್ಯಾಂಥರ್ ಬ್ಯೂಚ್ 720 ಕ್ಯಾರೆಟ್ ತೂಕದ ದೊಡ್ಡ ಕರಿ ಚಿರತೆ ಬ್ರೂಚ್ ಆಗಿದೆ. ಗಾರ್ಬಾ ನೈಟ್ನಲ್ಲಿಯೂ ಇದೇ ಪ್ಯಾಂಥರ್ ಬ್ಯೂಚ್ ಧರಿಸಿದ್ದರು. ಮುಖ್ಯವಾಗಿ ಈ ಬ್ರೂಚ್ ಅನ್ನು ವಿಶೇಷವಾಗಿ ಅನಂತ್ ಅಂಬಾನಿಗಾಗಿ ಮಾಡಲಾಗಿದೆ. ಏಕೆಂದರೆ ಇದು ಪ್ರಾಣಿಗಳ ಮೇಲಿನ ಅವರ ಪ್ರೀತಿಯನ್ನು ಸೂಚಿಸುತ್ತದೆ. ಜಾಂಬಿಯನ್ ಪಚ್ಚೆಯು ಈ ಬ್ರೂಚ್ಗಾಗಿ ವಿಶೇಷವಾಗಿ 720-ಕ್ಯಾರೆಟ್ ಕಟ್ ಆಗಿದೆ. ಪ್ಯಾಂಥರ್ ಬ್ಯೂಚ್ನಲ್ಲಿ ಅತ್ಯುನ್ನತ ಗುಣಮಟ್ಟದ ವಜ್ರಗಳನ್ನು ಒಳಗೊಂಡಿರುತ್ತದೆ. ಪಚ್ಚೆಯ ಬಣ್ಣ, ಹೊಳಪು ಮತ್ತು ಭವ್ಯವಾದ ಗಾತ್ರವನ್ನು ಒಳಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ