Advertisment

ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?

author-image
Veena Gangani
Updated On
ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಹೊಸ ಆಶಾಕಿರಣ.. ಜೈ ಅನ್ಮೋಲ್ ಯಶಸ್ಸಿನ ಗುಟ್ಟೇನು ಗೊತ್ತಾ?
Advertisment
  • ಅನಿಲ್ ಅಂಬಾನಿ ಸಾಮ್ರಾಜ್ಯಕ್ಕೆ ಆಸರೆಯಾಗಿದ್ದು ಯಾರು ಗೊತ್ತಾ?
  • ಜಗತ್ತಿನ 6ನೇ ಶ್ರೀಮಂತ ವ್ಯಕ್ತಿ ಅನಿಸಿಕೊಂಡಿದ್ದ ಅನಿಲ್ ಅಂಬಾನಿ
  • ಜೈ ಅನ್ಮೋಲ್ ಅಂಬಾನಿ ಶ್ರಮದಿಂದ ರಿಲಯನ್ಸ್ ಸಂಸ್ಥೆ ಚೇತರಿಕೆ

ಅಂಬಾನಿ ಎಂದ ಕೂಡಲೇ ಕಣ್ಮುಂದೆ ಬರೋದು ಜಗತ್ತಿನ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ. ಅವರ ಐಷಾರಾಮಿ ಜೀವನ, ಅದ್ಧೂರಿ ಕಾರುಗಳು ಹಾಗೂ ಬಂಗಲೆಗಳು. ಈಗಂತೂ ಅನಂತ್ ಅಂಬಾನಿ ಮದುವೆಯದ್ದೇ ಎಲ್ಲೆಲ್ಲೂ ಸುದ್ದಿ ಸಮಾಚಾರ. ಮುಖೇಶ್ ಅಂಬಾನಿಯ ಶ್ರೀಮಂತಿಕೆಯ ಎದುರು ಅಂಬಾನಿ ಕುಟುಂಬದ ಮತ್ತೊಂದು ಕುಡಿ ಅನಿಲ್ ಅಂಬಾನಿ ಮಂಕಾಗಿ ಹೋಗಿರೋದಂತೂ ಸುಳ್ಳಲ್ಲ. ಅದರಲ್ಲೂ ಅನಿಲ್ ಅಂಬಾನಿ ಶ್ರೀಮಂತಿಕೆಯ ಉತ್ತುಂಗವನ್ನೂ ನೋಡಿದೋರು. ಅದೇ ರೀತಿ ತಮ್ಮ ವ್ಯಾಪಾರದಲ್ಲಿ ಹೊಡೆತ ತಿಂದು, ಈಗ ಮತ್ತೆ ಮೇಲೆದ್ದು ಬರುತ್ತಿರುವ ಫಿನಿಕ್ಸ್.

Advertisment

ಇದನ್ನೂ ಓದಿ:ಅಂಬಾನಿ ಮಗನ ಅದ್ದೂರಿ ಮದುವೆ.. 1 ವೆಡ್ಡಿಂಗ್​​ ಕಾರ್ಡ್​​​ಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ?

publive-image

ಒಂದು ಕಾಲದಲ್ಲಿ ಜಗತ್ತಿನ 6ನೇ ಶ್ರೀಮಂತ ವ್ಯಕ್ತಿ ಅನಿಸಿಕೊಂಡಿದ್ದ ಅನಿಲ್ ಅಂಬಾನಿ, 2010ರ ಸುಮಾರಿಗೆ ಸಾಲದ ಸುಳಿಯಲ್ಲಿ ಸಿಲುಕುತ್ತಾ ಹೋದ್ರು. 2020ರಲ್ಲಿ ಯುಕೆಯ ಕೋರ್ಟ್​ನಲ್ಲಿ ತಮ್ಮ ವ್ಯಾಪಾರ ದಿವಾಳಿಯಾಗಿದೆ ಅಂತಲೂ ಘೋಷಿಸಿದ್ರು. ಆದ್ರೀಗ ಮತ್ತೆ ಉದ್ಯಮ ಜಗತ್ತಿನಲ್ಲಿ ಅನಿಲ್ ಅಂಬಾನಿ ಕುಟುಂಬ ಪುಟಿದೇಳುತ್ತಿದೆ. ಇದಕ್ಕೆ ಕಾರಣ ಅನಿಲ್ ಅಂಬಾನಿಯ ಹಿರಿಯ ಮಗ ಜೈ ಅನ್ಮೋಲ್ ಅಂಬಾನಿ. ಅನ್ಮೋಲ್ ಅಂಬಾನಿ ತನ್ನ ಟೀನೇಜ್​ನಿಂದಲೇ ವ್ಯಾಪಾರದ ಅ, ಆ, ಇ, ಈ ಗಳನ್ನ ಕಲಿತು, ತಮ್ಮ ಕುಟುಂಬದ ವ್ಯಾಪಾರ, ವಹಿವಾಟುಗಳನ್ನ ಮುನ್ನಡೆಸುತ್ತಿದ್ದಾರೆ. ಅನಿಲ್ ಅಂಬಾನಿಯ ಕುಟುಂಬಕ್ಕೆ ಅವರ ಮಗ ಅನ್ಮೋಲ್ ಹೊಸ ಆಶಾ ಕಿರಣವಾಗಿದ್ದು, ಹಂತ ಹಂತವಾಗಿ ತಮ್ಮ ವ್ಯಾಪಾರವನ್ನ ವೃದ್ಧಿಸುತ್ತಿದ್ದಾರೆ.

publive-image

ಶ್ರೀಮಂತ ಕುಟುಂಬದಲ್ಲೇ ಹುಟ್ಟಿದ ಅನ್ಮೋಲ್ ಚಿನ್ನದ ಚಮಚದೊಂದಿಗೇ ಬೆಳೆದವರು. ಮುಂಬೈನ ಹೆಸರಾಂತ ಶಾಲೆಯಲ್ಲಿ ಸ್ಕೂಲಿಂಗ್ ಮುಗಿಸಿದ ಅನ್ಮೋಲ್, ಉನ್ನತ ವ್ಯಾಸಾಂಗವನ್ನ ಮಾಡಿದ್ದು ಯುಕೆಯಲ್ಲಿ. ತಮ್ಮ 18ನೇ ವಯಸ್ಸಿನಲ್ಲೇ ತಮ್ಮದೇ ರಿಲಯನ್ಸ್ ಮ್ಯೂಚವಲ್ ಫಂಡ್ ಸಂಸ್ಥೆಯಲ್ಲಿ ಇಂಟರ್ನ್​ ಆಗಿ ಅನ್ಮೋಲ್ ಮೊದಲ ಅನುಭವವನ್ನ ಪಡೆದ್ರು. ಇದು 2014ರಲ್ಲಿ ಅವ್ರು ತಮ್ಮ ರಿಲಯನ್ಸ್ ಗ್ರೂಪ್ ಸಂಸ್ಥೆಗೆ ಸೇರಲು ನಂತರ ಹಂತ ಹಂತವಾಗಿ ಸಂಸ್ಥೆಯಲ್ಲಿ ಬೆಳೆಯೋದಕ್ಕೆ ಉಪಯುಕ್ತವಾಯ್ತು. ಸೆಪ್ಟಂಬರ್ 2017ರಲ್ಲಿ ಜೈ ಅನ್ಮೋಲ್ ಅಂಬಾನಿ, ರಿಲಯನ್ಸ್ ಕ್ಯಾಪಿಟಲ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕಗೊಳ್ತಾರೆ. ಏಪ್ರಿಲ್ 2018ರಲ್ಲಿ ರಿಲಯನ್ಸ್ ನಿಪ್ಪಾನ್ ಹಾಗೂ ರಿಲಯನ್ಸ್ ಹೋಮ್​ನ ಬೋರ್ಡ್​ನಲ್ಲೂ ಸ್ಥಾನವನ್ನ ಗಿಟ್ಟಿಸುತ್ತಾರೆ. ಆದ್ರೆ ಜಸ್ಟ್ ಒಂದೇ ವರ್ಷದಲ್ಲಿ, 2019ರ ಅಕ್ಟೋಬರ್​ಗೆ ಜೈ ಅನ್ಮೋಲ್ ಅಂಬಾನಿ ಹಾಗೂ ಅವರ ಸೋದರ ಜೈ ಅಂಶುಲ್ ಅಂಬಾನಿ ಇಬ್ಬರೂ ರಿಲಯನ್ಸ್ ಇನ್ಫ್ರಾದ ಬೋರ್ಡ್​ಗೆ ರಾಜೀನಾಮೆ ನೀಡಿ ಹೊರ ಬರ್ತಾರೆ.

Advertisment

publive-image

ಆದ್ರೆ ಜೈ ಅನ್ಮೋಲ್ ಅಂಬಾನಿ ತಮ್ಮ ಸಂಸ್ಥೆಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕಗೊಂಡ ಬಳಿಕ ಅವರ ಶ್ರಮದಿಂದಾಗಿ ಶೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಗ್ರೂಪ್​ನ ಸ್ಟಾಕ್ ಬೆಲೆಯೂ ಶೇಕಡ 40ರಷ್ಟು ಹೆಚ್ಚಳವಾಗುತ್ತೆ. ಅಲ್ಲದೆ, ಜಪಾನ್​ ಮೂಲದ ನಿಪ್ಪಾನ್ ಸಂಸ್ಥೆ, ರಿಲಯನ್ಸ್​​ನಲ್ಲಿ ತನ್ನ ಶೇರು ಪ್ರಮಾಣವನ್ನ ಹೆಚ್ಚಳ ಮಾಡುವಂತೆ ಮನವೊಲಿಸುವಲ್ಲೂ ಅನ್ಮೋಲ್​ರದ್ದು ಪ್ರಮುಖ ಪಾತ್ರ. ಇದಾದ ಬಳಿಕವೇ ರಿಲಯನ್ಸ್ ಗ್ರೂಪ್​​ನಿಂದ ರಿಲಯನ್ಸ್ ಲೈಫ್ ಇನ್ಶುರೆನ್ಸ್ ಮತ್ತು ರಿಲಯನ್ಸ್ ಕ್ಯಾಪಿಟಲ್ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳು ಹುಟ್ಟೋದು. ಖಾಸಗಿ ಪತ್ರಿಕೆಯೊಂದರ ವರದಿ ಪ್ರಕಾರ, ಜೈ ಅನ್ಮೋಲ್ ಅಂಬಾನಿಯ ವ್ಯಾಪಾರಿ ಸಾಮ್ರಾಜ್ಯದ ಇವತ್ತಿನ ಒಟ್ಟು ಮೌಲ್ಯ ಸುಮಾರು 2 ಸಾವಿರ ಕೋಟಿ ರೂಪಾಯಿ. 2022ರಲ್ಲಿ ಮತ್ತೊಬ್ಬ ಖ್ಯಾತ ಉದ್ಯಮಿ ದಿವಂಗತ ನಿಕುಂಜ್ ಶಾ ಅವ್ರ ಮಗಳು ಕ್ರಿಷಾ ಶಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಹೊಂದಿರುವ ಜೈ ಅನ್ಮೋಲ್ ಶಾ ದುಬಾರಿ ರೋಲ್ಸ್ ರಾಯ್ಸ್ ಫ್ಯಾಂಟಮ್ ಹಾಗೂ ಲ್ಯಾಂಬೋರ್ಗಿನಿ ಗ್ಯಾಲಾರ್ಡೋ ಕಾರುಗಳನ್ನ ಹೊಂದಿದ್ದಾರೆ. ಅಲ್ಲದೆ, ಮಾಹಿತಿಯೊಂದರ ಪ್ರಕಾರ ತಮ್ಮ ಬ್ಯುಸಿನೆಸ್ ಟ್ರಿಪ್​ಗಳಿಗಾಗಿ ಪ್ರೈವೇಟ್ ಜೆಟ್ ಹಾಗೂ ಹೆಲಿಕಾಪ್ಟರ್​ಗಳನ್ನೂ ಧೀರೂಬಾಯ್ ಅಂಬಾನಿಯ ಮೊಮ್ಮಗ ಹೊಂದಿದ್ದಾರೆ ಎನ್ನಲಾಗಿದೆ. ಮುಗಿದೇ ಹೋಯ್ತು, ವ್ಯಾಪಾರದ ಜಗತ್ತಿನಲ್ಲಿ ಇವರಿನ್ನೂ ಮೇಲೆದ್ದು ಬರೋಕೆ ಸಾಧ್ಯವೇ ಇಲ್ಲ ಅಂದುಕೊಂಡಿದ್ದ ಶ್ರೀಮಂತ ಕುಟುಂಬವೊಂದು ಮತ್ತೊಮ್ಮೆ ಬೂದಿಯಿಂದ ಎದ್ದು ಹೊರ ಬಂದಿದ್ದು, ಇದಕ್ಕೆಲ್ಲಾ ಅಂಬಾನಿ ಕುಟುಂಬದ ಮೂರನೇ ತಲೆಮಾರಿನ ಯುವಕ ಕಾರಣವಾಗಿದ್ದು, ನಿಜಕ್ಕೂ ಇನ್ಸ್​ಪಿರೇಷನ್.

Advertisment

ವಿಶೇಷ ವರದಿ: ನವೀನ್ ಕುಮಾರ್​ ಕೆ​. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment