ಪ್ರಬಲ ಭೂಕಂಪ.. ಪಪುವಾ ನ್ಯೂ ಗಿನಿಯಾದಲ್ಲಿ 1,000 ಮನೆ ನೆಲಸಮ; 9 ಲಕ್ಷ ಜನ ನಿರಾಶ್ರಿತ!

author-image
admin
Updated On
ಪ್ರಬಲ ಭೂಕಂಪ.. ಪಪುವಾ ನ್ಯೂ ಗಿನಿಯಾದಲ್ಲಿ 1,000 ಮನೆ ನೆಲಸಮ; 9 ಲಕ್ಷ ಜನ ನಿರಾಶ್ರಿತ!
Advertisment
  • ಭೂಕಂಪನಕ್ಕೆ ದ್ವೀಪರಾಷ್ಟ್ರ ಪಪುವಾ ನ್ಯೂ ಗಿನಿಯಾ ಸಂಪೂರ್ಣ ತತ್ತರ
  • ಹಲವು ನಗರ ಪ್ರದೇಶಗಳಿಂದ ಹೊರಗಡೆ ಓಡಿ ಬಂದ ಲಕ್ಷಾಂತರ ಜನರು
  • ಪಪುವಾದಲ್ಲಿ ನೆಲಸಮವಾದ ಮನೆಗಳ ಜೊತೆಗೆ ಭೀಕರ ಪ್ರವಾಹದ ಸಂಕಷ್ಟ

ಪಪುವಾ ನ್ಯೂ ಗಿನಿಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದ್ದು, ಬರೋಬ್ಬರಿ 1000 ಮನೆಗಳು ನೆಲಸಮವಾಗಿರೋ ವರದಿಯಾಗಿದೆ. ಸದ್ಯದ ಮಾಹಿತಿ ಪ್ರಕಾರ 5 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ತೀವ್ರ ಭೂಕಂಪಕ್ಕೆ ನಲುಗಿರೋ ಪಪುವಾ ನ್ಯೂ ಗಿನಿಯಾದಲ್ಲಿ ಪ್ರವಾಹದ ಪರಿಸ್ಥಿತಿ ಕೂಡ ಎದುರಾಗಿದೆ. ಸೆಪಿಕ್ ನದಿ ತುಂಬಿ ಹರಿಯುತ್ತಿದ್ದು, ಹಲವಾರು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದೆ. ನೆಲಸಮವಾದ ಮನೆಗಳು ಹಾಗೂ ಪ್ರಕೃತಿ ವಿಕೋಪದ ಮಧ್ಯೆ ಜನರು ಜೀವ ಉಳಿಸಲು ಪರದಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ:VIDEO: ಬ್ಯಾಕ್ ಟು USA ಹಾರಿದ ಸರಿಗಮಪ ಪುಟ್ಟ ಗಾಯಕ ವಿರಾಟ್‌; ಹೇಗಿತ್ತು ಗ್ರ್ಯಾಂಡ್​ ವೆಲ್​ಕಮ್​​! 

1,000 ಮನೆಗಳು ನೆಲಸಮ ಆಗಿರೋದ್ರಿಂದ ಪಪುವಾದ ಹಲವು ಪ್ರದೇಶ ಹಾನಿಗೊಳಗಾಗಿದೆ. 9 ಲಕ್ಷ ಜನರು ನಿರಾಶ್ರಿತರಾಗಿದ್ದು, ಹಲವು ನಗರ ಪ್ರದೇಶದ ಜನರು ಹೊರಗಡೆ ಬಂದು ವಾಸಿಸುತ್ತಿದ್ದಾರೆ. ಪ್ರಬಲ ಭೂಕಂಪನದಿಂದ ದ್ವೀಪರಾಷ್ಟ್ರವಾದ ಪಪುವಾ ನ್ಯೂ ಗಿನಿಯಾದಲ್ಲಿ ರಕ್ಷಣಾ ಕಾರ್ಯ ಬಹಳ ದೊಡ್ಡ ಸವಾಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment