newsfirstkannada.com

ಪೋಷಕರೇ ಹುಷಾರ್​.. ಶಾಲಾ-ಕಾಲೇಜುಗಳ 828 ವಿದ್ಯಾರ್ಥಿಗಳಲ್ಲಿ HIV ಪಾಸಿಟಿವ್; 47 ಸಾವು

Share :

Published July 9, 2024 at 2:33pm

    ಏಡ್ಸ್ ನಿಯಂತ್ರಣ ಸೊಸೈಟಿಯಿಂದ ಹೆಚ್​ಐವಿ ಮಾಹಿತಿ ಬಹಿರಂಗ

    ಪಾಸಿಟಿವ್ ವಿದ್ಯಾರ್ಥಿಗಳಲ್ಲಿ ಎಷ್ಟು ಸ್ಟೂಡೆಂಟ್ಸ್​ ಮೃತಪಟ್ಟಿದ್ದಾರೆ..?

    ಶಾಲೆ ಮಕ್ಕಳಲ್ಲೇ ಹೆಚ್​ಐವಿ ಹೆಚ್ಚಾಗಿ ಪಾಸಿಟಿವ್ ಕಾಣಿಸಿಕೊಂಡಿದೆ

ಅಗರ್ತಲಾ: ಈಶಾನ್ಯ ರಾಜ್ಯವಾದ ತ್ರಿಪುರದ ಶಾಲಾ- ಕಾಲೇಜಿನ 828 ವಿದ್ಯಾರ್ಥಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಕಾಣಿಸಿಕೊಂಡಿದ್ದು ಇದರಲ್ಲಿ 47 ಸ್ಟೂಡೆಂಟ್ಸ್​ ಸಾವನ್ನಪ್ಪಿರುವುದು ಭಾರೀ ಆತಂಕ ಮೂಡಿಸಿದೆ.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

ನಮ್ಮ ನೋಂದಣಿಯಲ್ಲಿ ಒಟ್ಟು 828 ವಿದ್ಯಾರ್ಥಿಗಳ ಮಾಹಿತಿ ಇದ್ದು ಇವರಲ್ಲಿ ಹೆಚ್​ಐವಿ ಪಾಸಿಟಿವ್ ಕಾಣಿಸಿಕೊಂಡಿದೆ. ಇದರಲ್ಲಿನ 47 ವಿದ್ಯಾರ್ಥಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಉಳಿದ 572 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ ಎಂದು ತ್ರಿಪುರದ ಏಡ್ಸ್ ನಿಯಂತ್ರಣ ಸೊಸೈಟಿಯ (TSACS) ಜಂಟಿ ನಿರ್ದೇಶಕ ಭಟ್ಟಾಚಾರ್ಜಿ ತಿಳಿಸಿದ್ದಾರೆ.

ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?

ರಾಜ್ಯದ 220 ಶಾಲೆಗಳು, 24 ಕಾಲೇಜುಗಳು ಹಾಗೂ ಯುನಿರ್ವಸಿಟಿಯಲ್ಲಿ ಓದುವ ವಿದ್ಯಾರ್ಥಿಗಳು ಡ್ರಗ್ಸ್​ ಇಂಜೆಕ್ಷನ್​ ಅನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಹೆಚ್​ಐವಿ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಈ ಎಲ್ಲ ಶಾಲಾ-ಕಾಲೇಜುಗಳನ್ನು ನಾವು ಪತ್ತೆ ಮಾಡಿದ್ದು ಅಲ್ಲಿನ ಹಲವು ವಿದ್ಯಾರ್ಥಿಗಳು ಆ ಡ್ರಗ್​ಗೆ ಅಡಿಕ್ಟಿಡ್ ಆಗಿದ್ದಾರೆ. ನಾವು ರಾಜ್ಯಾದ್ಯಂತ ಒಟ್ಟು 164 ಆರೋಗ್ಯ ಕೇಂದ್ರಗಳಿಂದ ಈ ಡೇಟಾ ಸಂಗ್ರಹಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೀವಂತ ಹಾವನ್ನೇ ತಿಂದ ಡಕಾಯಿತ.. ಸುಲಿಗೆ, ಲೂಟಿ ಮಾಡ್ತಿದ್ದವನಿಂದ ಭಯಾನಕ ಕೃತ್ಯ

ಈ ಡ್ರಗ್​ಗೆ ಅಡಿಕ್ಟ್​ ಆದವರೆಲ್ಲ ಶ್ರೀಮಂತ ಮನೆಯ ಮಕ್ಕಳು ಆಗಿದ್ದಾರೆ. ಇನ್ನು ತಂದೆ, ತಾಯಿ ಇಬ್ಬರು ಕೆಲಸದಲ್ಲಿ ಬ್ಯುಸಿ ಇರುವಾಗ ಮಕ್ಕಳು ಈ ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳು ಈ ಬಗ್ಗೆ ಅರಿತುಕೊಳ್ಳುವಷ್ಟರಲ್ಲಿ ಅವರು ಮೃತಪಡುತ್ತಿದ್ದಾರೆ. ತ್ರಿಪುರದಲ್ಲಿ 5,674 ಮಂದಿಗೆ ಹೆಚ್​​ಐವಿ ಪಾಸಿಟಿವ್‌ ಇದ್ದು ಇದರಲ್ಲಿ 4,570 ಮಂದಿ ಪುರುಷರು, 1,103 ಮಂದಿ ಮಹಿಳೆಯರು ಸೇರಿದ್ದಾರೆ. ಅಲ್ಲದೇ ಪ್ರತಿ ನಿತ್ಯ 5 ರಿಂದ 7 ಹೊಸ ಹೆಚ್‌ಐವಿ ಪಾಸಿಟಿವ್ ಕೇಸ್ ಪತ್ತೆಯಾಗುತ್ತಿರುವುದು ಆತಂಕ ಮೂಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಹುಷಾರ್​.. ಶಾಲಾ-ಕಾಲೇಜುಗಳ 828 ವಿದ್ಯಾರ್ಥಿಗಳಲ್ಲಿ HIV ಪಾಸಿಟಿವ್; 47 ಸಾವು

https://newsfirstlive.com/wp-content/uploads/2024/07/AIDS.jpg

Load More