newsfirstkannada.com

ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಕೋಟಿ ಕೋಟಿ ಆಸ್ತಿ ಘೋಷಣೆ

Share :

Published April 16, 2024 at 6:08am

  ಜಗದೀಶ್​ ಶೆಟ್ಟರ್​ರಿಂದಲೂ ಸಾಂಕೇತಿಕ ನಾಮಪತ್ರ ಸಲ್ಲಿಕೆ

  ಅದ್ಧೂರಿ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶಿಸಿದ ನಾಯಕರು

  ಸಾಂಕೇತಿಕವಾಗಿ ಬಸವರಾಜ ಬೊಮ್ಮಾಯಿ ನಾಮಿನೇಷನ್​

ಕರ್ನಾಟಕದ 2ನೇ ಹಂತದ ಲೋಕಸಭಾ ಚುನಾವಣಾ ನಾಮಪತ್ರ ಸಲ್ಲಿಕೆಗೆ ಏಪ್ರಿಲ್​ 20 ಕೊನೆ ದಿನ. ಹೀಗಾಗಿ ಅಖಾಡದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಮುಗಿಬಿದ್ದಿದ್ದಾರೆ. ಖಾದಿ ವರ್ಸಸ್​ ಖಾವಿ ಎಂದೇ ಬಿಂಬಿತವಾಗಿರುವ ಧಾರವಾಡ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ಭರ್ಜರಿ ರೋಡ್​ ಮೂಲಕ ನಾಮಪತ್ರ ಸಲ್ಲಿಸಿ, ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​​​ ವಿರುದ್ಧ ರೋಚಕ ಪಂದ್ಯ; ಆರ್​​​ಸಿಬಿಯನ್ನು ಗೆಲ್ಲಿಸಲು ಅಚ್ಚರಿ ಪ್ಲೇಯರ್​ ಎಂಟ್ರಿ

ಚುನಾವಣಾ ದಿನಾಂಕ ಹತ್ತಿರವಾಗ್ತಿದ್ದಂತೆ ಕರ್ನಾಟಕದಲ್ಲಿ ಲೋಕಸಭಾ ಚುನವಾಣಾ ಅಖಾಡ ರಂಗೇರಿತ್ತಿದೆ. ಇದರ ನಡುವೆ ರಣಾಂಗಣದಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ರಣಕಹಳೆ ಮೊಳಗಿಸಿದ್ದಾರೆ. ಕರ್ನಾಟಕದ 2ನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಬಿಜೆಪಿಯ ಘಟಾನುಘಟಿ ಅಭ್ಯರ್ಥಿಗಳು ಅಬ್ಬರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ರು.

ಬೃಹತ್ ಮೆರವಣಿಗೆ ಮೂಲಕ ಪ್ರಲ್ಹಾದ್ ಜೋಶಿ ನಾಮಿನೇಷನ್​

ಐದನೇ ಬಾರಿ ಗೆಲುವಿನ ಉತ್ಸಾಹದಲ್ಲಿರುವ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ, ಬಹಳ ಹುಮ್ಮಸ್ಸಿನಿಂದಲೇ ನಾಮಪತ್ರ ಸಲ್ಲಿಕೆ ಮಾಡಿದ್ರು. ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಬೃಹತ್ ಮೆರವಣಿಗೆ ಮೂಲಕ ಆಗಮಿಸಿ ನಾಮಿನೇಷನ್​ ಪೈಲ್​ ಮಾಡಿದ್ರು. ಈ ವೇಳೆ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ನಾಯಕರು ಸಾಥ್ ನೀಡಿದರು.

ತಂದೆ-ತಾಯಿ ಪ್ರತಿಮೆಗೆ ನಮಿಸಿ ಬೊಮ್ಮಾಯಿ ನಾಮಪತ್ರ

ಹಾವೇರಿ-ಗದಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕೂಡ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ರು. ಇದಕ್ಕೂ ಮುನ್ನ ಹುಬ್ಬಳ್ಳಿಯಲ್ಲಿ ಅವರು ತಮ್ಮ ತಂದೆ ತಾಯಿಯ ಪ್ರತಿಮೆಗೆ ನಮನ ಸಲ್ಲಿಸಿ ಆಶೀರ್ವಾದ ಪಡೆದ್ರು. ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು. ಏಪ್ರಿಲ್​ 19ರಂದು ರಾಜ್ಯ ನಾಯಕರು, ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಬರೋಬ್ಬರಿ 200 ಕೋಟಿ ಆಸ್ತಿ ದಾನ ಮಾಡಿದ ಖ್ಯಾತ ಉದ್ಯಮಿ ದಂಪತಿ; ಕಾರಣವೇನು?

ಇನ್ನು, ಬೆಳಗಾವಿಯಿಂದ ಸ್ಪರ್ಧಿಸಿರುವ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಕೂಡ ಸರಳವಾಗಿ ನಾಮಪತ್ರ ಸಲ್ಲಿಸಿದ್ರು. ಮಾಜಿ ಸಚಿವ ರಮೇಶ್ ಜಾರಕಿಹೋಳಿ ಸೇರಿದಂತೆ ಹಲವು ನಾಯಕರ ಜೊತೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಿನೇಷನ್​ ಪೈಲ್​ ಮಾಡಿದ್ರು. ಹಾಗೂ ಏಪ್ರಿಲ್​ 17ರಂದು ಜನರ ಜೊತೆ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸೋದಾಗಿ ತಿಳಿಸಿದ್ರು. ದಾವಣಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್​ ಕುಟುಂಬ ಸದಸ್ಯರ ಜೊತೆ ತೆರಳಿ, ಸಾಂಕೇತಿಕವಾಗಿ ನಾಮಿನೇಷನ್​ ಫೈಲ್​ ಮಾಡಿದ್ರು. ಬೀದರ್​ ಬಿಜೆಪಿ ಅಭ್ಯರ್ಥಿ ಭಗಂವತ್​ ಖೂಬಾ ಕೂಡಾ ಇವತ್ತು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್​ 18ರಂದು ಭಗವಂತ್​ ಖೂಬಾ ಹಾಗೂ ಏಪ್ರಿಲ್​ 19ರಂದು ಗಾಯತ್ರಿ ಸಿದ್ದೇಶ್ವರ್​ ಮತ್ತೊಮ್ಮೆ ಘಟಾನುಘಟಿ ನಾಯಕರ ಜೊತೆ ಬೃಹತ್​ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಸಿದವರೂ ಕೋಟಿ ಕೋಟಿ ಆಸ್ತಿ ಘೋಷಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ; ಕೋಟಿ ಕೋಟಿ ಆಸ್ತಿ ಘೋಷಣೆ

https://newsfirstlive.com/wp-content/uploads/2024/04/jagadish6.jpg

Load More