ಇಂದು ತುಮಕೂರಿನಲ್ಲಿ ಖಾಸಗಿ ಬಸ್ನಲ್ಲಿ ನಿಗೂಢ ಸ್ಪೋಟ!
ಟಾಯ್ಲೆಟ್ಗೆ ಬಳಸೋ ಆ್ಯಸಿಡ್ ಬಾಟಲ್ ಬ್ಲಾಸ್ಟ್ ಅನ್ನೋ ಮಾಹಿತಿ
ಬಸ್ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳು!
ತುಮಕೂರು: ಖಾಸಗಿ ಬಸ್ನಲ್ಲಿ ನಿಗೂಢ ಸ್ಪೋಟವಾಗಿದ್ದು, 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದಾಗ ಗೂಳೂರು ಸಮೀಪ ಗಣಪತಿ ಅನ್ನೋ ಬೋರ್ಡ್ ಹೊಂದಿದ್ದ ಖಾಸಗಿ ಬಸ್ನಲ್ಲಿ ಈ ಸ್ಫೋಟ ಆಗಿದ್ದು, ಭಾರೀ ದುರಂತ ತಪ್ಪಿದೆ.
ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಟಾಯ್ಲೆಟ್ಗೆ ಬಳಸೋ ಆ್ಯಸಿಡ್ ಬಾಟಲ್ ಸ್ಫೋಟಗೊಂಡಿದೆ. ಮಹಿಳೆ ಒಬ್ಬರು ತನ್ನೊಂದಿಗೆ ಆ್ಯಸಿಡ್ ಬಾಟಲ್ ಇಟ್ಟುಕೊಂಡು ಪ್ರಯಾಣ ಮಾಡುತ್ತಿದ್ದರು. ಇದೇ ಬಾಟಲ್ ದಿಢೀರ್ ಸ್ಫೋಟಗೊಂಡಿದ್ದು, ಒಂದು ಕ್ಷಣ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಆ್ಯಸಿಡ್ ಒತ್ತಡ ಹೆಚ್ಚಾಗಿ ಬಾಟಲ್ ಸ್ಫೋಟಗೊಂಡ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ನು, ಸ್ಥಳಕ್ಕೆ ಭೇಟಿ ನೀಡಿದ್ದ ತುಮಕೂರು ಗ್ರಾಮಾಂತರ ಪೊಲೀಸ್ರು ಪರಿಶೀಲನೆ ನಡೆಸಿದ್ದಾರೆ. ಮಹಿಳೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ನಿಂದ ಬಸ್ನಲ್ಲಿ ಬರುತ್ತಿದ್ದಳು ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ