newsfirstkannada.com

‘ದಂಗಲ್ ಗರ್ಲ್’ ಸುಹಾನಿ ಬಲಿ ಪಡೆದ ಆ ಅಪರೂಪದ ಕಾಯಿಲೆ ಯಾವುದು? ಅದರ ಲಕ್ಷಣಗಳು ಏನೇನು?

Share :

Published February 18, 2024 at 10:27am

    ನನ್ನ ಮಗಳು ದೇವರ ಮಗಳು ಎಂದು ತಾಯಿ ಕಣ್ಣೀರು

    ಸುಹಾನಿ ಉಳಿಸಿಕೊಳ್ಳಲು ತಂದೆ ಏನೆಲ್ಲ ಮಾಡಿದರು?

    25 ಸಾವಿರ ಮಕ್ಕಳಲ್ಲಿ ದಂಗಲ್​​ಗೆ ಆಯ್ಕೆ ಆಗಿದ್ದ ಸುಹಾನಿ

ಹರಿಯಾಣದ ಫರಿದಾಬಾದ್‌ನ ‘ದಂಗಲ್ ಗರ್ಲ್’ ಸುಹಾನಿ ಭಟ್ನಾಗರ್ ಕೇವಲ 19ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ. 2016ರಲ್ಲಿ ತೆರೆಕಂಡ ‘ದಂಗಲ್’ ಚಿತ್ರದಲ್ಲಿ ಸುಹಾನಿ ಅಮೀರ್ ಖಾನ್ ಮಗಳ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಳು. ಕಳೆದ ಮಂಗಳವಾರ ಸುಹಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 16 ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, 17 ರಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಆ್ಯಕ್ಸಿಡೆಂಟ್​​ ಬಳಿಕ ಇದೆಲ್ಲ: ಸುಹಾನಿ ತಂದೆ ಪುನೀತ್ ಭಟ್ನಾಗರ್ ಮಾತನಾಡಿ.. ‘ಕೆಲವು ತಿಂಗಳ ಹಿಂದೆ ಸುಹಾನಿಗೆ ಅಪಘಾತವಾಗಿತ್ತು. ಇದರಿಂದ ಆಕೆಯ ಕಾಲಿಗೆ ಗಂಭೀರ ಗಾಯವಾಗಿತ್ತು. ಈ ವೇಳೆ ಸುಹಾನಿ ಸೇವಿಸಿದ ಔಷಧಿಯಿಂದ ಸೋಂಕು ತಗುಲಿತ್ತು. ಪರಿಣಾಮ ಕೈಕಾಲುಗಳು ಊದಿಕೊಳ್ಳಲಾರಂಭಿಸಿದ್ದವು. ದೇಹದಲ್ಲಿ ನೀರು ತುಂಬಿಕೊಳ್ಳಲು ಶುರುವಾಗಿತ್ತು.

ವೈದ್ಯಕೀಯ ಪರೀಕ್ಷೆಯಿಂದ ಖಾಯಿಲೆ ಪತ್ತೆ: 2 ತಿಂಗಳ ಹಿಂದೆ ಸುಹಾನಿ ಎಡಗೈನಲ್ಲಿ ಊತ ಶುರುವಾಗಿತ್ತು. ಆರಂಭದಲ್ಲಿ ಇದನ್ನು ನಾವು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರದ ದಿನಗಳಲ್ಲಿ ಇಡೀ ದೇಹವನ್ನ ಊತ ಆವರಿಸಿತ್ತು. ಅನೇಕ ವೈದ್ಯರನ್ನು ಸಂಪರ್ಕಿಸಿದೆವು. ಆದರೆ ಯಾವ ವೈದ್ಯರೂ ರೋಗವನ್ನು ಗುರುತಿಸಲಿಲ್ಲ. 11 ದಿನಗಳ ಹಿಂದಷ್ಟೇ ಸುಹಾನಿಯನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಮಗಳ ಪರೀಕ್ಷೆ ಮಾಡಿದ ಏಮ್ಸ್‌ ವೈದ್ಯರು ಆಕೆಗೆ ‘ಡರ್ಮಟೊಮಿಯೊಸಿಟಿಸ್’ ಎಂಬ ಕಾಯಿಲೆ ಇದೆ. ಇದು ಅತ್ಯಂತ ಅಪರೂಪದ ಕಾಯಿಲೆ. ಈ ರೋಗದಲ್ಲಿ ಸ್ನಾಯುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಇಡೀ ದೇಹದಲ್ಲಿ ಊತ ಶರುವಾಗುತ್ತದೆ. ಇದೇ ಕಾರಣಕ್ಕೆ ಸುಹಾನಿ ತನ್ನ ದೇಹದಲ್ಲಿ ತ್ರಾಣ (ಶಕ್ತಿ) ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದರು. ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ದೇಹದಲ್ಲಿ ತ್ರಾಣ ಇಲ್ಲದಿರೋದ್ರಿಂದ ದೇಹಕ್ಕೆ ಸೋಂಕು ಉಂಟಾಗಿದೆ. ಕೊನೆ ದಿನಗಳಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಇದರಿಂದ ಆಕೆಗೆ ಉಸಿರಾಟದಲ್ಲಿ ತೊಂದರೆ ಆಗಿತ್ತು ಎಂದು ತಂದೆ ಭಾವುಕರಾಗಿದ್ದಾರೆ.

ಇದನ್ನೂ ಓದಿದಂಗಲ್ ಚಿತ್ರದಲ್ಲಿ ನಟಿಸಿದ್ದ ಬಾಲನಟಿ ಸುಹಾನಿ ಭಟ್ನಾಗರ್ ದಿಢೀರ್ ಸಾವು.. 19 ವರ್ಷಕ್ಕೆ ಏನಾಯ್ತು?

ಸುಹಾನಿ ದೇವರ ಮಗು: ಸುಹಾನಿ ತಾಯಿ ಪೂಜಾ ಭಟ್ನಾಗರ್ ಮಾತನಾಡಿ, ಸುಹಾನಿ ಬಾಲ್ಯದಿಂದಲೂ ಮಾಡೆಲಿಂಗ್‌ನಲ್ಲಿ ಒಲವು ಹೊಂದಿದ್ದಳು. ‘ದಂಗಲ್’ ಚಿತ್ರಕ್ಕಾಗಿ ದೆಹಲಿಯಲ್ಲಿ 25 ಸಾವಿರ ಮಕ್ಕಳ ಆಡಿಷನ್ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಸುಹಾನಿ ಮೊದಲ ಸ್ಥಾನ ಪಡೆದರು. ಸುಹಾನಿ ವಿದ್ಯಾಭ್ಯಾಸ ಮುಗಿಸಿದ ನಂತರ ಮಾಡೆಲಿಂಗ್‌ಗೆ ಹೋಗಲು ಬಯಸಿದ್ದಳು. ಆಕೆಗೆ ಅಮೀರ್ ಖಾನ್ ಜೊತೆ ಉತ್ತಮ ಬಾಂಧವ್ಯ ಇತ್ತು. ಅಮೀರ್ ಖಾನ್ ಯಾವಾಗಲೂ ಆಕೆಗೆ ಕರೆ ಮಾಡುತ್ತಿದ್ದರು. ಇತ್ತೀಚೆಗೆ ಅವರ ಮಗಳ ಮದುವೆಗೆ ಆಹ್ವಾನ ನೀಡಿದ್ದರು. ಸುಹಾನಿ ಗಾಯಗೊಂಡಿದ್ದರಿಂದ ವೈದ್ಯರು ಆಕೆಗೆ ಪ್ರಯಾಣ ಮಾಡಬಾರದು ಎಂದು ಹೇಳಿದ್ದರು. ಸುಹಾನಿ ಅವರ ಕಾಲಿನಲ್ಲಿ ಮೂಳೆ ಮುರಿದಿತ್ತು. ಇದರಿಂದ ಹಲವೆಡೆ ಚಿಕಿತ್ಸೆ ಪಡೆದರೂ ಆಕೆಗಿದ್ದ ನಿಜವಾದ ಕಾಯಿಲೆ ಪತ್ತೆ ಆಗಲಿಲ್ಲ. ನನ್ನ ಮಗಳು ಓದುವುದರಲ್ಲೂ ಮುಂದಿದ್ದಳು ಎಂದು ಕಣ್ಣೀರು ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ದಂಗಲ್ ಗರ್ಲ್’ ಸುಹಾನಿ ಬಲಿ ಪಡೆದ ಆ ಅಪರೂಪದ ಕಾಯಿಲೆ ಯಾವುದು? ಅದರ ಲಕ್ಷಣಗಳು ಏನೇನು?

https://newsfirstlive.com/wp-content/uploads/2024/02/SUHANI.jpg

Load More