newsfirstkannada.com

‘ಅಕ್ಕ’ ಅಂದ ಮೇಲೆ ಸೈಲೆಂಟ್ ಆದ್ರಾ ರೆಬೆಲ್ ಲೇಡಿ.. ಮಂಡ್ಯದಲ್ಲಿ ಸುಮಲತಾ ಮುಂದಿನ ನಡೆ ಏನು?

Share :

Published March 17, 2024 at 8:03am

  ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ಸದ್ಯ ನಿಗೂಢ

  ಸೂಪರ್ ಆ್ಯಕ್ಟೀವ್‌ ಆಗಿದ್ದ ರೆಬೆಲ್ ದಿಢೀರ್ ಸೈಲೆಂಟ್ ಆಗಿದ್ದು ಯಾಕೆ?

  ಬೆಂಬಲಿಗರಿಗೆ ಸಭೆ ಬಗ್ಗೆ ಮಾಹಿತಿ ನೀಡದೆ ಕುತೂಹಲ ಹೆಚ್ಚಿಸಿದ ಸಂಸದೆ

ಮಂಡ್ಯ ರಾಜಕೀಯದ ಗಣಿತವೇ ಬೇರೆ. ಒಂದೊಂದು ಚುನಾವಣೆಯಲ್ಲೂ ಮಂಡ್ಯ ಮತದಾರರ ಲೆಕ್ಕಾಚಾರ ಡಿಫರೆಂಟ್ ಆಗಿರುತ್ತೆ. 2019ರ ಲೋಕಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯ ಈ ಬಾರಿಯೂ ಅಷ್ಟೇ ಕುತೂಹಲ ಮೂಡಿಸಿದೆ. ಸಂಸದೆ ಸುಮಲತಾ ಅವರು ಆ್ಯಕ್ಟೀವ್ ಆಗಿದ್ದಾಗ ಜೆಡಿಎಸ್ ನಾಯಕರು ಸೈಲೆಂಟ್ ಆಗಿದ್ದರು. ಈಗ ದಳಪತಿಗಳು ಮಂಡ್ಯ ಜಿಲ್ಲೆಯಲ್ಲಿ ಆ್ಯಕ್ಟೀವ್ ಆಗ್ತಿದ್ದಂತೆ ಸುಮಲತಾ ಅಂಬರೀಶ್ ಸೈಲೆಂಟ್ ಆಗುವ ಮೂಲಕ ಸಸ್ಪೆನ್ಸ್ ಹೆಚ್ಚಿಸಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ರಾಜಕೀಯ ನಡೆ ಸದ್ಯ ನಿಗೂಢವಾಗಿದೆ. ಬಿಜೆಪಿ, ಜೆಡಿಎಸ್ ಮಧ್ಯೆ ಸೀಟು ಹಂಚಿಕೆ ಫೈನಲ್ ಆಗಿದ್ದು, ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪುವುದು ಪಕ್ಕಾ ಆಗಿದೆ. ಇದೀಗ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತಾರಾ ಅಥವಾ ಮೈತ್ರಿ ಧರ್ಮ ಪಾಲಿಸುತ್ತಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನ ಮಂಡ್ಯದಲ್ಲಿ ಜೆಡಿಎಸ್ ನಾಯಕರು ಸೈಲೆಂಟ್ ಆಗಿದ್ದರು. ಆದರೆ ಸುಮಲತಾ ಅಂಬರೀಶ್ ಅವರು ಸೂಪರ್ ಆ್ಯಕ್ಟೀವ್‌ ಆಗಿ ಜೆಡಿಎಸ್ ನಾಯಕರಿಗೆ ಆತಂಕ ಸೃಷ್ಟಿಸಿದ್ದರು. ಪದೇ ಪದೆ ಮಂಡ್ಯ ಜಿಲ್ಲೆಯ ಪ್ರವಾಸ ಕೈಗೊಂಡು ಸಂಸದೆ ಸುಮಲತಾ ಅವರು ಅಚ್ಚರಿ ಮೂಡಿಸಿದ್ದರು. ತನಗೆ ಮಂಡ್ಯ ಬಿಜೆಪಿ ಟಿಕೆಟ್ ಸಿಗುತ್ತೆ ಎನ್ನುತ್ತಿದ್ದ ಸುಮಲತಾ ಅವರು ಬೆಂಬಲಿಗರು, ಆಪ್ತರ ಸಭೆ ನಡೆಸುವುದಾಗಿ ತಿಳಿಸಿದ್ದರು.

ಇದೀಗ ಬದಲಾದ ಮೈತ್ರಿ ಪಕ್ಷದ ಲೆಕ್ಕಾಚಾರದಲ್ಲಿ ಮಂಡ್ಯದಿಂದ ಜೆಡಿಎಸ್ ನಾಯಕರು ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಸುಮಲತಾ ಅವರನ್ನ ಅಕ್ಕ ಎಂದು ಕರೆದು ಎಲ್ಲರೂ ಶಾಕ್ ಆಗುವಂತೆ ಮಾಡಿದ್ದರು. ಇದಾದ ಮೇಲೆ ಸಂಸದೆ ಸುಮಲತಾ ಅಂಬರೀಶ್ ಅವರು ಮೌನಕ್ಕೆ ಜಾರಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಜೊತೆ HDK ಫೈನಲ್ ಮೀಟಿಂಗ್‌.. ಜೆಡಿಎಸ್‌ಗೆ ಮತ್ತೊಂದು ಬಿಗ್ ಆಫರ್; ಏನದು?

ಮಂಡ್ಯದಲ್ಲಿ ಸದ್ಯ ಸುಮಲತಾ ಆಪ್ತರು, ಬೆಂಬಲಿಗರಲ್ಲಿ ಗೊಂದಲ ಮನೆ ಮಾಡಿದೆ. ಚುನಾವಣೆ ದಿನಾಂಕ ಘೋಷಣೆ ಆದ್ರೂ ಬೆಂಬಲಿಗರಿಗೆ ಸಭೆ ಬಗ್ಗೆ ರೆಬೆಲ್‌ ಲೇಡಿ ಮಾಹಿತಿ ನೀಡಿಲ್ಲ. ಸುಮಲತಾ ಅವರ ಈ ಸೈಲೆಂಟ್ ಸೂತ್ರದ ಹಿಂದೆ ಸೂಕ್ತ ಸ್ಥಾನಮಾನದ ನಿರೀಕ್ಷೆ ಇರಬಹುದು ಎನ್ನಲಾಗಿದೆ. ಮುಂದಿನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾ ಅಂಬರೀಶ್ ಅವರು ತಾಳ್ಮೆಯ ಹೆಜ್ಜೆ ಇಡುತ್ತಿದ್ದಾರೆ. ಬಿಜೆಪಿ ನಾಯಕರು ಜೊತೆ ಮಾತುಕತೆ ನಡೆಸಿದ ಬಳಿಕವೇ ಸುಮಲತಾ ಅಂಬರೀಶ್ ಅವರು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಕ್ಕ’ ಅಂದ ಮೇಲೆ ಸೈಲೆಂಟ್ ಆದ್ರಾ ರೆಬೆಲ್ ಲೇಡಿ.. ಮಂಡ್ಯದಲ್ಲಿ ಸುಮಲತಾ ಮುಂದಿನ ನಡೆ ಏನು?

https://newsfirstlive.com/wp-content/uploads/2024/03/Sumalatha-HDK.jpg

Load More