newsfirstkannada.com

ಹುಚ್ಚೇಗೌಡ್ರು ಸೊಸೆಯಾಗಿ ನನ್ನ ಸಾಧನೆ ಏನು ಅಂದ್ರೆ.. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು

Share :

Published April 3, 2024 at 1:52pm

    ಹುಚ್ಚೇಗೌಡರ ಸೊಸೆಯಾಗಿ ಸಾಧನೆ ಏನು ಅನ್ನೋರಿಗೆ ತಿರುಗೇಟು

    ಮಂಡ್ಯದ ಋಣ, ಮಂಡ್ಯ ಜನರನ್ನ ಎಂದೆಂದಿಗೂ ಬಿಡೋದಿಲ್ಲ

    ಈ ಮಣ್ಣಿನ ಸೊಸೆ ಎನ್ನುವ ಸ್ಥಾನ ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಬೆಂಬಲಿಗರ ಜೊತೆ ಸಭೆ ಮಾಡಿದ ಬಳಿಕ ತನ್ನ ಅಂತಿಮ ನಿರ್ಧಾರ ಹೇಳಿದ್ದಾರೆ. ಕಳೆದ 5 ವರ್ಷದಲ್ಲಿ ಮಂಡ್ಯ ಸಂಸದೆ, ಹುಚ್ಚೇಗೌಡರ ಸೊಸೆಯಾಗಿ ಮಾಡಿದ ಸಾಧನೆ ಏನು ಅನ್ನೋರಿಗೆ ಸುಮಲತಾ ಅಂಬರೀಶ್ ಅವರು ತಿರುಗೇಟು ಕೊಟ್ಟಿದ್ದಾರೆ.

ಮಂಡ್ಯದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸುಮಲತಾ ಅಂಬರೀಶ್ ಅವರು ಬಿಜೆಪಿ ಪಕ್ಷವನ್ನು ಇನ್ನೊಂದು ವಾರದಲ್ಲಿ ಸೇರುತ್ತೇನೆ. ಪಕ್ಷದ ಆದೇಶ, ಸೂಚನೆ ಮಾಡಿದ್ರೆ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸೋ ಮಾತನಾಡಿದ್ದಾರೆ. ನಾನು ಈ‌ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ. ಆದರೆ ಮಂಡ್ಯ ಬಿಟ್ಟು ನಾನು‌ ಹೋಗಲ್ಲ. ಪಕ್ಷೇತರವಾಗಿ ಸ್ಪರ್ಧಿಸಲ್ಲ ಎಂದು ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.

ತಮ್ಮ ಭಾಷಣದ ವೇಳೆ ಸಂಸದೆ ಸುಮಲತಾ ಅಂಬರೀಶ್ ಅವರು ಸಂಸದೆಯಾಗಿ ನಿಮಗೆ ನಾನು ಪರಿಚಯ ಆಗಲಿಲ್ಲ. ಅಂಬರೀಶ್ ಪತ್ನಿಯಾಗಿ, ಮಂಡ್ಯ ಸೊಸೆಯಾಗಿ‌ ನಿಮಗೆ ಪರಿಚಯ. ನೀವು ನನಗೆ ತಾಯಿ ಸ್ಥಾನ ಕೊಟ್ಟೀದ್ದೀರಾ. ತಾಯಿಯಿಂದ ಮಕ್ಕಳನ್ನು ದೂರ ಮಾಡಲು ಆಗಲ್ಲ. ಮಂಡ್ಯದ ಋಣ, ಮಂಡ್ಯ ಜನರನ್ನ ಎಂದೆಂದಿಗೂ ಬಿಡೋದಿಲ್ಲ. ಈ ಪ್ರೀತಿ ಆಶೀರ್ವಾದ ಹೀಗೆ ಇರಲಿ. ಮುಂದಿನದಿನಗಳಲ್ಲಿ ನನ್ನ ಎಲ್ಲಾ ಪ್ರಯತ್ನಗಳಲ್ಲೂ ಜೊತೆಯಲ್ಲಿರಿ ಎಂದು ಮನವಿ ಮಾಡಿಕೊಂಡರು.

ಇದನ್ನೂ ಓದಿ: BREAKING: ನಿಜವಾಯ್ತು ನ್ಯೂಸ್ ಫಸ್ಟ್ ವರದಿ.. ಮಂಡ್ಯ ಚುನಾವಣೆಯಿಂದ ಹಿಂದೆ ಸರಿದ ಸುಮಲತಾ ಅಂಬರೀಶ್‌

ರಾಜಕೀಯ ಮಾಡಿದ್ರೆ ಮಂಡ್ಯದಲ್ಲಿ ಮಾತ್ರ ಎಂದು ನಿರ್ಧಾರ ಮಾಡಿದ್ದೇನೆ. ಅಸಂಖ್ಯಾತ ಅಂಬರೀಶ್ ಅಭಿಮಾನಿಗಳನ್ನ ಬಿಟ್ಟು ಹೋದರೆ ಮಂಡ್ಯ ಸೊಸೆ ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ಸೇರಿ ಎಂದು ಕೆಲವರು ಹೇಳಿದ್ದೀರಾ. ಸುಮಲತಾ ಅವಶ್ಯಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ಕೆಲ ನಾಯಕರು ಹೇಳಿದ್ದಾರೆ. ನನಗೆ ಗೌರವ ಇಲ್ಲದ ಕಾಂಗ್ರೆಸ್‌ಗೆ ಹೋಗಲು ಹೇಳಬೇಡಿ. ಮಂಡ್ಯದ ಗಂಡು ಅಂಬರೀಶ್ ಸ್ವಾಭಿಮಾನಿ. ಗೌರವ‌ ಇಲ್ಲದ ಕಡೆ ಹೋಗಲು ಒತ್ತಾಯ ಮಾಡಬೇಡಿ. ಇವತ್ತು ನಾನು ಸಂಸದೆ, ನಾಳೆ ಇನ್ನೊಬ್ಬರು ಆ ಜಾಗಕ್ಕೆ ಬರ್ತಾರೆ. ಆದ್ರೆ ಈ ಮಣ್ಣಿನ ಸೊಸೆ ಎನ್ನುವ ಸ್ಥಾನ ಯಾರು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯ ಮತದಾರನ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಮಂಡ್ಯ ಸೊಸೆಯಾಗಿ ಮಂಡ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎನ್ನುತ್ತಾರೆ. ಹೀಗೆ ಮಾತನಾಡುವವರಿಗೆ ನನ್ನ ಕೆಲಸಗಳೇ ಉತ್ತರ. ಮಂಡ್ಯ ಘನತೆಯನ್ನು ಇಂಡಿಯಾದಲ್ಲೇ ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ಅಂಬರೀಶ್ ಇರುವ ಜಾಗದಿಂದಲೇ ನನ್ನ ಬೆನ್ನು ತಟ್ಟುತ್ತಿದ್ದಾರೆ. ಅಂಬರೀಶ್ ಇದ್ದಲ್ಲಿಯೇ‌‌ ನನ್ನ ಬೆನ್ನು ತಟ್ಟುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಹುಚ್ಚೇಗೌಡರ ಸೊಸೆಯಾಗಿ ಮತ ಕೇಳಿದ್ದೆ. ಹುಚ್ಚೇಗೌಡ್ರು ಹೆಮ್ಮೆಯಿಂದ ಸೊಸೆಗೆ ಆಶೀರ್ವಾದ ಮಾಡ್ತಿದ್ದಾರೆ. ಹುಚ್ಚೇಗೌಡರ ಸೊಸೆಯಾಗಿ ಸ್ವಾಭಿಮಾನ‌ ಉಳಿಸಿಕೊಂಡಿದ್ದೇನೆ. ಹುಚ್ಚೇಗೌಡರ ಸೊಸೆಗೆ ಅವರು ಆಶೀರ್ವಾದ ಮಾಡುತ್ತಿದ್ದಾರೆ ಎಂಬ ನಂಬಿಕೆ ಇದೆ ಎನ್ನುತ್ತಾ ಭಾಷಣದ ವೇಳೆ ಸುಮಲತಾ ಅಂಬರೀಶ್ ಅವರು ಭಾವುಕರಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಚ್ಚೇಗೌಡ್ರು ಸೊಸೆಯಾಗಿ ನನ್ನ ಸಾಧನೆ ಏನು ಅಂದ್ರೆ.. ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು

https://newsfirstlive.com/wp-content/uploads/2024/04/Sumalatha-Ambareesh-1-1.jpg

Load More