newsfirstkannada.com

‘ಪುಗಸಟ್ಟೆ ಭಾಗ್ಯಗಳಿಂದ ಮೋಸ ಹೋಗದ ಮಂಡ್ಯ ಎಂದ ಸುಮಲತಾ; ಹೆಚ್​​​ಡಿಕೆ ಬಗ್ಗೆ ಹೇಳಿದ್ದೇನು?

Share :

Published June 5, 2024 at 10:42pm

Update June 5, 2024 at 10:46pm

  ‘ದೇಶದಲ್ಲಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ’

  ’ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಥ್ಯಾಂಕ್ಸ್​​’

  ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್​​ ಪೋಸ್ಟ್​​!

ಮಂಡ್ಯ: ನಮ್ಮ ಮಂಡ್ಯದ ಜನತೆಯ ಮತಗಳು ಯಾವುದೇ ಆಮಿಷಗಳಿಗೆ ಮಾರಾಟಕ್ಕಿಲ್ಲ ಎಂಬುದನ್ನು ನಮ್ಮ ಜನತೆ ತೋರಿಸಿದ್ದಾರೆ. ಹಲವು ಆಮಿಷಗಳು, ಪುಗಸಟ್ಟೆ ಭಾಗ್ಯಗಳ ಭರವಸೆ, ಮುಂತಾದ ಅಡ್ಡದಾರಿಗಳ ಮೂಲಕ ನಮ್ಮ ಮಂಡ್ಯದ ಜನತೆಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸಿದ ನಮ್ಮ ಮಂಡ್ಯದ ಜನತೆಗೆ ಅಭಿನಂದನೆಗಳು. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡಲು, ನಮ್ಮ ಮಂಡ್ಯದ ನೂತನ ಸಂಸದರಾಗಿ ಆಯ್ಕೆಯಾದ ಶ್ರೀ ಎಚ್ ಡಿ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್​​​ ಶುಭಾಶಯಗಳು ಕೋರಿದ್ದಾರೆ.

ಇನ್ನು, 10 ವರ್ಷಗಳ ಐತಿಹಾಸಿಕ ಆಡಳಿತ, ಅಭಿವೃದ್ಧಿಯ ದಾಖಲೆಯೊಂದಿಗೆ ಭಾರತೀಯರು ಮತ್ತೊಮ್ಮೆ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿ ಸತತವಾಗಿ 3ನೇ ಬಾರಿ ಶ್ರೀ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ. ನೀವು ಪ್ರತಿ ಭಾರತೀಯ ಹೃದಯಕ್ಕೆ ಐಕ್ಯತೆಯ ಮತ್ತು ಹೆಮ್ಮೆಯ ಸಂಕೇತವಾಗಿದ್ದೀರಿ. ನಮ್ಮ ದೇಶ ಮತ್ತು ಜನತೆಯು ನಿಮ್ಮ ಮೇಲೆ ಇಟ್ಟಿರುವ ಅಚಲವಾದ ಬದ್ಧತೆ ನಿಮ್ಮ ಅಭಿವೃದ್ಧಿ ಕಾರ್ಯಗಳ ಪ್ರತಿಬಿಂಬವಾಗಿದೆ ಎಂದು ಪ್ರಧಾನಿ ಮೋದಿ ಅವರನ್ನು ಸುಮಲತಾ ಹೊಗಳಿದ್ದಾರೆ.

ಮತ್ತೊಮ್ಮೆ ಮೋದಿ ಸರ್ಕಾರ ಎಂದ ಸುಮಲತಾ!

ಫಲಿತಾಂಶ ಅತ್ಯುತ್ತಮವಾಗಿಲ್ಲದಿದ್ದರೂ, ಇದು ಕಾರ್ಯಕರ್ತರು ಹಾಗೂ ಮುಖಂಡರ ಮತ್ತಷ್ಟು ಶ್ರಮ ಹಾಗೂ ಅವಲೋಕನಕ್ಕೆ ನಾಂದಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ. ನೀವು ಅನನ್ಯವಾದ ಸ್ವಾರ್ಥವಿಲ್ಲದ ತ್ಯಾಗ, ಸಾಮಾಜಿಕ ಜೀವನ ಮತ್ತು ನಿಷ್ಠೆಗೆ ಮಾದರಿಯಾಗಿದ್ದೀರಿ. ಭಾರತವನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಸಾಗಿಸಲು ನಿಮ್ಮ ನಾಯಕತ್ವದ ಅವಶ್ಯಕತೆ ಸದಾ ನಮಗಿದೆ. ನಿಮ್ಮ ದೂರದರ್ಶಿ ಯೋಜನೆಗಳು ಈ ಮೂರನೇ ಅವಧಿಯಲ್ಲೂ ಮುಂದುವರಿಯಲಿ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ದಿನಾಂಕ ಫಿಕ್ಸ್​.. ಯಾವಾಗ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪುಗಸಟ್ಟೆ ಭಾಗ್ಯಗಳಿಂದ ಮೋಸ ಹೋಗದ ಮಂಡ್ಯ ಎಂದ ಸುಮಲತಾ; ಹೆಚ್​​​ಡಿಕೆ ಬಗ್ಗೆ ಹೇಳಿದ್ದೇನು?

https://newsfirstlive.com/wp-content/uploads/2024/01/HDK_Sumalatha.jpg

Load More