newsfirstkannada.com

ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ದಿನಾಂಕ ಫಿಕ್ಸ್​.. ಯಾವಾಗ..?

Share :

Published June 5, 2024 at 1:46pm

    ಅಂದುಕೊಂಡಷ್ಟು ಕ್ಷೇತ್ರಗಳನ್ನು ಗೆಲ್ಲುವಲ್ಲಿ ಎಡವಿದ ಬಿಜೆಪಿ

    ಮಹತ್ವದ ಸಭೆ ಹಿನ್ನೆಲೆ ದೆಹಲಿಗೆ ತೆರಳುತ್ತಿರೋ ನಾಯಕರು

    NDA ಮೈತ್ರಿಕೂಟಗಳ ಜೊತೆ ಸರ್ಕಾರ ರಚಿಸಲಿರೋ ಮೋದಿ

ನವದೆಹಲಿ: 18ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಜೂನ್ 8 ರಂದು ನರೇಂದ್ರ ಮೋದಿಯವರು 3ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್​ಡಿಎ ಸರ್ಕಾರ ರಚನೆ ಮಾಡುವಷ್ಟು ಬಹುಮತ ಪಡೆದುಕೊಂಡಿದೆ. ಜೂನ್​ 8 ರಂದು ಶನಿವಾರ ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನರೇಂದ್ರ ಮೋದಿಯವರು ಪ್ರಮಾಣವಚನ ತೆಗೆದುಕೊಂಡು ಪ್ರಧಾನಿ ಹುದ್ದೆಗೆ ಮತ್ತೊಮ್ಮೆ ಏರಲಿದ್ದಾರೆ. ಎನ್​ಡಿಎ ಮೈತ್ರಿಕೂಟಗಳ ಜೊತೆ ಸೇರಿ ಮೋದಿ ಸರ್ಕಾರ ರಚನೆ ಮಾಡಲಿದ್ದಾರೆ. 2014, 2019ರಲ್ಲಿ 2 ಬಾರಿ ಪ್ರಧಾನಿ ಆಗಿದ್ದ ಮೋದಿ ಈ ಬಾರಿ 2024ರಲ್ಲೂ ಪ್ರಧಾನಿಯಾದರೆ 3ನೇ ಬಾರಿಗೆ ದೇಶದ ಅತ್ಯುನ್ನತ ಸ್ಥಾನ ಸ್ವೀಕಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಫೈರಿ ಬ್ಯಾಟರ್​​ನಿಂದ ತಂಡಕ್ಕೆ ಬಿಗ್​ ಬೂಸ್ಟ್.. ಪ್ಲೇಯಿಂಗ್​- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?

ದೆಹಲಿಯಲ್ಲಿ ನಡೆಯುವ ಎನ್​ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ಈಗಾಗಲೇ ಆಂಧ್ರದ ಟಿಡಿಪಿ ಮುಖ್ಯಸ್ಥ ಎನ್​ ಚಂದ್ರಬಾಬು ನಾಯ್ಡು, ಬಿಹಾರ ಸಿಎಂ ನಿತೀಶ್ ಕುಮಾರ್, ಆರ್​ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖರು ದೆಹಲಿ ವಿಮಾನವನ್ನು ಹತ್ತಿದ್ದಾರೆ. ಸಭೆಯಲ್ಲಿ ಪಾಲ್ಗೊಂಡು ಕೇಂದ್ರದಲ್ಲಿ ಸರ್ಕಾರ ರಚನೆ ಬಗ್ಗೆ ಮಹತ್ವ ಚರ್ಚೆ ಮಾಡಲಿದ್ದಾರೆ. ಈ ಬಾರಿ ಉಪಪ್ರಧಾನಿ ಹುದ್ದೆ ಕೂಡ ರಚನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಏನೆಲ್ಲ ಚರ್ಚೆ ಆಗಲಿದೆ ಎನ್ನುವುದು ಕಾದು ನೋಡಬೇಕಿದೆ.

ಇದನ್ನೂ ಓದಿ: ನಂಬಿಕೆ ಉಳಿಸಿಕೊಂಡ ವಿಜಯೇಂದ್ರ.. ಕಾಂಗ್ರೆಸ್​ ಕಟ್ಟಿ ಹಾಕುವಲ್ಲಿ ಯಶಸ್ವಿ ಆಗಿದ್ದು ಹೇಗೆ..?

ಈ ಬಾರಿ ವಿಶ್ವದ ಅತಿ ದೊಡ್ಡ ಲೋಕಸಭಾ ಚುನಾವಣೆಯನ್ನು 7 ಹಂತಗಳಲ್ಲಿ ಮುಕ್ತಾಯಗೊಂಡಿದೆ. ಮತ ಎಣಿಕೆ ಮುಕ್ತಾಯವಾಗಿದ್ದು ಎನ್​ಡಿಎ 292, ಇಂಡಿಯಾ ಕೂಟ 233 ಹಾಗೂ ಇತರೆ ಪಕ್ಷದವರು 18 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. ಜೊತೆಗೆ ಪ್ರಧಾನಿ ಮೋದಿಯವರು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ 1,52,513 ಮತಗಳ ಅಂತರದಿಂದ 3ನೇ ಬಾರಿಗೆ ಗೆಲುವು ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ದಿನಾಂಕ ಫಿಕ್ಸ್​.. ಯಾವಾಗ..?

https://newsfirstlive.com/wp-content/uploads/2024/06/PM_MODI.jpg

Load More