ಟೀಮ್ ಇಂಡಿಯಾ ದಾನ ಶೂರ ಕರ್ಣ ಕೊಹ್ಲಿ
ಆಟವಷ್ಟೇ ಅಲ್ಲ, ಕೊಹ್ಲಿಯ ಹೃದಯವೂ ಶ್ರೀಮಂತ..!
ಸುಮಿತ್ ನಗಾಲ್ಗೆ ಸಹಾಯ ಹಸ್ತ ಚಾಚಿದ ವಿರಾಟ್
ಎಡಗೈಯಲ್ಲಿ ಕೊಟ್ಟಿದ್ದು ಬಲಗೈಯಲ್ಲಿ ಗೊತ್ತಾಗಬಾರದು ಅಂತಾರೆ. ಇದೇ ರೀತಿಯಲ್ಲಿ ಓರ್ವ ಟೆನಿಸ್ ಸ್ಟಾರ್ಗೆ ಕೊಹ್ಲಿ ಸಂಕಷ್ಟದಲ್ಲಿ ನೆರವಾಗಿದ್ದಾರೆ. ವಿರಾಟ್ ಮಾಡಿದ ಸಹಾಯ ಇಂದು ಯುವ ಟೆನಿಸ್ ಆಟಗಾರರನ್ನ ಬದುಕನ್ನ ಬದಲಿಸಿದೆ. ಆಸ್ಟ್ರೇಲಿಯಾ ಓಪನ್ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾನೆ.
ವಿರಾಟ್ ಕೊಹ್ಲಿ.. ಬಣ್ಣಿಸಿದಷ್ಟು ಮುಗಿಯಲಾರದ ವ್ಯಕ್ತಿತ್ವ. ಆನ್ ಫೀಲ್ಡ್ ಸಾಧನೆ, ಆಫ್ ದಿ ಫೀಲ್ಡ್ ಸರಳ ನಡೆ ಎಂತವರಿಗೂ ಸ್ಫೂರ್ತಿ. ಸದಾ ಆಟ, ಫನ್ ಅಂಡ್ ಅಗ್ರೆಸ್ಸಿವ್ ನಡೆಯಿಂದ ಹೆಚ್ಚು ಸದ್ದು ಮಾಡುವ ಕಿಂಗ್ ಕೊಹ್ಲಿ ಫಸ್ಟ್ ಟೈಮ್ ಬೇರೆ ವಿಚಾರದಿಂದ ಸುದ್ದಿಯಾಗಿದ್ದಾರೆ. ಇದು ಬಹುಶಃ ಕೊಹ್ಲಿಯ ಇನ್ನೊಂದು ಮುಖವೆಂದ್ರು ತಪ್ಪಲ್ಲ. ತಾನು ಬೆಳೆದು ತನ್ನವರನ್ನ ಬೆಳೆಸುವ ವಿರಾಟನ ಹೃದಯ ಶ್ರೀಮಂತಿಕೆ ಇದೀಗ ಅನಾವರಣಗೊಂಡಿದೆ.
ಟೆನಿಸ್ ಆಟಗಾರನ ಪಾಲಿಗೆ ಕರ್ಣನಾದ ಕೊಹ್ಲಿ..!
ಸುಮಿತ್ ನಗಾಲ್. ಭಾರತದ ಖ್ಯಾತ ಟೆನಿಸ್ ತಾರೆ. ಗ್ರ್ಯಾನ್ ಸ್ಲಾಮ್ನಲ್ಲಿ ಹೊಸ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. 26 ವರ್ಷದ ನಗಾಲ್ ಆಸ್ಟ್ರೇಲಿಯನ್ ಓಪನ್ನಲ್ಲಿ ಕಜಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ವಿರುದ್ಧ 6-4, 6-2,7-6 ಸೆಟ್ಗಳಿಂದ ಜಯ ಗಳಿಸಿ ಹೊಸ ಭಾಷ್ಯ ಬರೆದಿದ್ದಾರೆ. ಗ್ರ್ಯಾನ್ ಸ್ಲಾಮ್ನಲ್ಲಿ ಸೀಡ್ ಆಟಗಾರನ ವಿರುದ್ಧ 35 ವರ್ಷಗಳ ಬಳಿಕ ವಿಜಯ ಪತಾಕೆ ಹಾರಿಸಿದ್ದಾರೆ. ನಗಾಲ್ರ ಮಹತ್ವದ ಸಾಧನೆಯನ್ನ ಇಡೀ ದೇಶವೇ ಕೊಂಡಾಡ್ತಿದೆ. ಇದೇ ನಗಾಲ್ ಯಶಸ್ವಿ ಯಾತ್ರೆ ಹಿಂದೆ ದೊಡ್ಡ ಸ್ಟ್ರಗಲ್ ಇದೆ. ಹಿಂದೆ ನಗಾಲ್ ಆರ್ಥಿಕವಾಗಿ ಪೆಟ್ಟು ತಿಂದು ಜರ್ಝರಿತನಾಗಿದ್ರು. ಸಹಾಯಕ್ಕಾಗಿ ಅಂಗಲಾಚಿದ್ರು. ಆಗ ನಗಾಲ್ ನೆರವಿಗೆ ಬಂದಿದ್ದೆ ವಿರಾಟ್ ಕೊಹ್ಲಿ.
2017 ರಿಂದ ಸುಮಿತ್ ನಗಾಲ್ಗೆ ಕೊಹ್ಲಿ ನೆರವು..!
ನಗಾಲ್ ಕಷ್ಟದ ದಿನಗಳಲ್ಲಿ ಕಿಂಗ್ ಕೊಹ್ಲಿ ಜೊತೆಗೆ ನಿಂತಿದ್ದಾರೆ. ಕಳೆದ 7 ವರ್ಷಗಳಿಂದ ಟೆನಿಸ್ ಆಟಗಾರನಿಗೆ ಬೇಕಾದ ನೆರವನ್ನು ನೀಡುತ್ತಿದ್ದಾರೆ. ಇಷ್ಟು ವರ್ಷ ಸುಮ್ಮನಾಗಿದ್ದ ನಗಾಲ್ ಇದೀಗ ಕೊಹ್ಲಿಯ ನೆರವನ್ನ ಸ್ಮರಿಸಿದ್ದಾರೆ.
‘ಕೊಹ್ಲಿ ನೆರವಿಗೆ ಧನ್ಯವಾದ’
2017 ರಿಂದ ವಿರಾಟ್ ಕೊಹ್ಲಿ ಫೌಂಡೇಷನ್ ನನಗೆ ಸಹಾಯ ಮಾಡಿದೆ. ಕಳೆದೆರಡು ವರ್ಷಗಳಿಂದ ನಾನು ಚೆನ್ನಾಗಿ ಪ್ರದರ್ಶನ ನೀಡಿಲ್ಲ. ಆರ್ಥಿಕ ಸಮಸ್ಯೆ ಎದುರಿಸಿದೆ. ಒಂದು ವೇಳೆ ನನಗೆ ವಿರಾಟ್ ಕೊಹ್ಲಿ ಅವರ ನೆರವು ಸಿಗದಿದ್ದರೆ, ಏನು ಮಾಡುತ್ತಿದ್ದೇನೋ ಗೊತ್ತಿಲ್ಲ –ಸುಮಿತ್ ನಗಾಲ್, ಟೆನಿಸ್ ಆಟಗಾರ
498 ರೂಪಾಯಿಯೊಂದಿಗೆ ಕೆನಡಾ TO ಜರ್ಮನಿ ಪ್ರಯಾಣ
ಇದೊಂದು ಲೈನ್ ಸಾಕು, ನಗಾಲ್ ಯಾವ ಮಟ್ಟಿಗೆ ಆರ್ಥಿಕ ಸಮಸ್ಯೆ ಎದುರಿಸಿದ್ರು ಅನ್ನೋದಕ್ಕೆ. 2019ರ ಆರಂಭದಲ್ಲಿ ನಗಾಲ್ ಟೂರ್ನಮೆಂಟ್ ಮುಗಿಸಿ ಕೆನಡಾದಿಂದ ಜರ್ಮನಿಗೆ ತೆರಳಿದ್ರು. ಆಗ ಅವರ ಬಳಿ ಇದ್ದದ್ದು ಬರೀ 6 ಡಾಲರ್ ಮಾತ್ರ. ಅಂದ್ರೆ 498 ರನ್ ರೂಪಾಯಿ ಮಾತ್ರ. ಆಗ ಹಣ ಸಹಾಯ ಮಾಡುವಂತೆ ಮನವಿ ಮಾಡಿದ್ರು. ಇದಕ್ಕೆ ಕೊಹ್ಲಿ ಸಹಕರಿಸಿದರು ಎಂದು ನಗಾಲ್ ಹೇಳಿದ್ದಾರೆ.
ಯಾರು ಈ ಸುಮಿತ್ ನಗಾಲ್..?
26 ವರ್ಷದ ನಗಾಲ್ ಮೂಲತಃ ಹರಿಯಾಣದವರು. 8ನೇ ವಯಸ್ಸಿಗೆ ಟೆನಿಸ್ ರಾಕೆಟ್ ಹಿಡಿದು ಮಹೇಶ್ ಭೂಪತಿ ಗರಡಿಯಲ್ಲಿ ಬೆಳೆದರು. ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿ 2015 ರಲ್ಲಿ ವಿಂಬಲ್ಡನ್ ಡಬಲ್ಸ್ನಲ್ಲಿ ಟ್ರೋಫಿ ಗೆದ್ದ ಚತುರ. 2020 ರ ಯುಸ್ ಓಪನ್ನಲ್ಲಿ ಗೆಲುವಿನ ಖಾತೆ ತೆರೆದಿದ್ರು. ಈಗ ಆಸ್ಟ್ರೇಲಿಯಾ ಓಪನ್ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ವಿರಾಟ್ ಕೊಹ್ಲಿ ಫೌಂಡೇಶನ್ ಅಡಿ ಅಥ್ಲಿಟ್ಸ್ ಗೆ ನೆರವು
ವಿರಾಟ್ ಕೊಹ್ಲಿ ಫೌಂಡೇಶನ್ ಸಂಸ್ಥೆಯಿಂದ ಕೊಹ್ಲಿ ಬರೀ ಸುಮಿತ್ ನಗಾಲ್ ನೆರವಿಗೆ ಮಾತ್ರ ನಿಂತಿಲ್ಲ. ಅನೇಕ ಕ್ರೀಡಾಪಟುಗಳಿಗೆ ಸಹಾಯದ ಹಸ್ತ ಚಾಚಿದ್ದಾರೆ. ಗಾಲ್ಫ್ ಪಟು ಆದಿಲ್ ಬೇಡಿ, ಟೇಬಲ್ ಟೆನಿಸ್ ಆಟಗಾರ್ತಿ ಸ್ವಸ್ವಿಕಾ ಘೋಷ್, ಬಾಕ್ಸರ್ ಸಾಕ್ಷಿ ಚೌಧರಿ, ಸ್ವಿಮ್ಮರ್ ಶಿವಾನಿ ಕಟಾರಿಯಾ, ಸ್ಕ್ವಾಷ್ ಪಟು ನೀಲ್ ಜೋಶಿ, ಬಿಲ್ಲುಗಾರ್ತಿ ದಿವ್ಯಾ ದಯಾಲ್, ಟೆನಿಸ್ ಆಟಗಾರ್ತಿ ಕರ್ಮನ್ ಕೌರ್ ಥಂಡಿಗೆ ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡಿದ್ದಾರೆ. ಒಟ್ಟಿನಲ್ಲಿ ನೇಮ್ ಆ್ಯಂಡ್ ಫೇಮ್ ಬಂದ್ಮೇಲೆ ಬಂದ ದಾರಿಯನ್ನ ಮರೆಯೋರೆ ಹೆಚ್ಚು. ಆದ್ರೆ ಕಿಂಗ್ ಕೊಹ್ಲಿ ಡಿಫರೆಂಟ್ ಅನ್ನೋದನ್ನ ಪ್ರತಿ ಹೆಜ್ಜೆ ತೋರಿಸಿದ್ದಾರೆ. ತಾನು ಓರ್ವ ಕ್ರೀಡಾಪಟುವಾಗಿ ಉಳಿದ ಕ್ರೀಡಾಪಟುಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದಕ್ಕೆ ಅಲ್ಲವೇ ಕೊಹ್ಲಿ ವಿಶ್ವದಾದ್ಯಂತ ಅಪರಿಮಿತ ಅಭಿಮಾನಿ ಬಳಗವನ್ನು ಹೊಂದಿರೋದು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್