newsfirstkannada.com

RAIN ALERT: ಬೆಂಗಳೂರಿನ ಹಲವೆಡೆ ಇಂದು ಬೇಸಿಗೆ ಮಳೆ; ರಾಜ್ಯದಲ್ಲಿ ಗುಡುಗು, ಮಿಂಚಿನ ವರ್ಷಧಾರೆ

Share :

Published April 19, 2024 at 1:57pm

    ರಾಜ್ಯ ಹವಾಮಾನದ ವರದಿಯಲ್ಲಿ ಬೆಂಗಳೂರಿಗರಿಗೆ ಗುಡ್‌ನ್ಯೂಸ್

    ಬೆಂಗಳೂರು ನಗರದ ಹಲವೆಡೆ ಇಂದು ಬೇಸಿಗೆ ಮಳೆಯ ದರ್ಶನದ ಎಚ್ಚರಿಕೆ

    ಅಧಿಕ ಬೇಸಿಗೆ ಕಾಲ ಎದುರಾಗಿದ್ದ ಉದ್ಯಾನನಗರಿಗೆ ಕೊನೆಗೂ ನಿಟ್ಟುಸಿರು

ಬಿರು ಬಿಸಿಲು, ಬೇಸಿಗೆಯ ಬಿಸಿಗೆ ಬೆಂದು ಹೋಗಿದ್ದ ಬೆಂಗಳೂರು ಕೊನೆಗೂ ಕೂಲ್ ಆಗುವ ಮುನ್ಸೂಚನೆ ಸಿಕ್ಕಿದೆ. ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಜನರು ಮಳೆಗಾಗಿ ಕಾಯುತ್ತಿದ್ದಾರೆ. ಈ ಬಾರಿ ಅಧಿಕ ಬೇಸಿಗೆ ಕಾಲ ಎದುರಾಗಿದ್ದ ಉದ್ಯಾನನಗರಿಗೆ ಇಂದು ಸಂತಸದ ಸುದ್ದಿ ಸಿಕ್ಕಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು ತಂಪಾದ ವಾತಾವರಣ ಕಂಡು ಬಂದಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ರಾಜ್ಯದ ಹವಾಮಾನದ ವರದಿ ಬಿಡುಗಡೆ ಮಾಡಿದೆ. ರಾಜ್ಯದ ಹವಾಮಾನದ ವರದಿಯಲ್ಲಿ ಇಂದು ಬಿಬಿಎಂಪಿ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದ ಹಲವೆಡೆ ಇಂದು ಬೇಸಿಗೆ ಮಳೆಯ ದರ್ಶನವಾಗುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಇಂದು ಮತ್ತು ನಾಳೆ ಬೇಸಿಗೆ ಮಳೆಯ ಸಿಂಚನದ ಜೊತೆಗೆ ರಾಜ್ಯಾದ್ಯಂತ ಅಲ್ಲಲ್ಲಿ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ: RAIN Alert: ಇಂದಿನಿಂದ 5 ದಿನ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆ.. ಎಲ್ಲೆಲ್ಲಿ ವರುಣಾರ್ಭಟ?

ಏಪ್ರಿಲ್ 19 ಅಂದ್ರೆ ಇಂದಿನಿಂದ ಏಪ್ರಿಲ್ 21ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಪ್ರಮುಖವಾಗಿ ಬೆಳಗಾವಿ, ಅಥಣಿ ಭಾಗದಲ್ಲಿ ಇಂದು ಅತ್ಯಧಿಕ ಮಳೆ ಸುರಿಯಲಿದೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RAIN ALERT: ಬೆಂಗಳೂರಿನ ಹಲವೆಡೆ ಇಂದು ಬೇಸಿಗೆ ಮಳೆ; ರಾಜ್ಯದಲ್ಲಿ ಗುಡುಗು, ಮಿಂಚಿನ ವರ್ಷಧಾರೆ

https://newsfirstlive.com/wp-content/uploads/2023/10/Bangalore-Rain.jpg

Load More