newsfirstkannada.com

ಮಾಜಿ CM ಮೊಯ್ಲಿಗೆ ಮುಖಭಂಗ; ಕಾಂಗ್ರೆಸ್​ಗೆ ಕರ್ನಾಟಕದ ಆ ಒಂದು ಕ್ಷೇತ್ರ ಮಾತ್ರ ಕಗ್ಗಂಟಾಗಿಯೇ ಉಳಿದಿದೆ..!

Share :

Published March 30, 2024 at 7:51am

Update March 30, 2024 at 7:52am

    ಸುಧಾಕರ್​ ವಿರುದ್ಧ ರಕ್ಷಾ ರಾಮಯ್ಯಗೆ ಮಣೆಹಾಕಿದ ಕಾಂಗ್ರೆಸ್​ ಹೈಕಮಾಂಡ್​​

    ಮುನಿಯಪ್ಪ- ರಮೇಶ್​ಕುಮಾರ್​ ಬಣದ ಮಧ್ಯೆ ಟಿಕೆಟ್​ಗಾಗಿ ಭಾರೀ ಪೈಪೋಟಿ

    ರಾಜ್ಯದಲ್ಲಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿರುವ ಕಾಂಗ್ರೆಸ್​ ಹೈಕಮಾಂಡ್​​

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 3 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬಾಕಿ ಉಳಿದಿದ್ದ 4 ಕ್ಷೇತ್ರಗಳ ಪೈಕಿ ಚಾಮರಾಜನಗರ, ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿದ್ದು, ಬಣ ಬಂಡಾಯದ ಕಾರಣ ಕೋಲಾರ ಕ್ಷೇತ್ರವನ್ನ ಹೈಕಮಾಂಡ್​​ ವೇಟಿಂಗ್​​ ಲಿಸ್ಟ್​​ನಲ್ಲಿಟ್ಟಿದೆ.

ಈ ಬಾರಿಯ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಕರ್ನಾಟಕದ 3ನೇ ಪಟ್ಟಿ ಬಿಡುಗಡೆ ಮಾಡಿದೆ. ನಾಲ್ಕು ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದ್ದ ಕಾಂಗ್ರೆಸ್​​​ ಸದ್ಯ 3 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿದೆ. ಆದ್ರೆ ಕೋಲಾರದಲ್ಲಿ ಬಂಡಾಯ ಶಮನವಾಗದ ಕಾರಣ ಪೆಂಡಿಂಗ್​​ ಇರಿಸಲಾಗಿದೆ.

ಬಂಡಾಯ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್​​!

ನಿರೀಕ್ಷೆಯಂತೆ ಬಳ್ಳಾರಿ ಲೋಕಸಭಾ ಟಿಕೆಟ್ ಸಂಡೂರು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ತುಕರಾಂ ಅವರಿಗೆ ನೀಡಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿದ್ದರಾಮಯ್ಯನವರ ಆಪ್ತ ಸಚಿವ ಹೆಚ್​.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್​ಬೋಸ್​ಗೆ ಮಣೆ ಹಾಕಲಾಗಿದೆ. ಇನ್ನೋರ್ವ ಸಿಎಂ ಆಪ್ತ ಮಾಜಿ ಸಚಿವ ಎಂ.ಆರ್.ಸೀತಾರಾಂ ಪುತ್ರ ರಕ್ಷಾರಾಮಯ್ಯಗೆ ಚಿಕ್ಕಬಳ್ಳಾಪುರ ಟಿಕೆಟ್ ನೀಡಲಾಗಿದೆ.

ಟಿಕೆಟ್​​ ಆಸೆಯಲ್ಲಿದ್ದ ಮಾಜಿ ಸಿಎಂ ಮೊಯ್ಲಿಗೆ ಮುಖಭಂಗ!

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್​ ಭಾರೀ ಕಗ್ಗಂಟಾಗಿತ್ತು.. ಮಾಜಿ ಸಿಎಂ ಮೊಯ್ಲಿ, ಮಾಜಿ ಸಚಿವ ಶಿವಶಂಕರರೆಡ್ಡಿ, ಯುವ ಕಾಂಗ್ರೆಸ್​ನ ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಇತ್ತು. ಸ್ಥಳೀಯ ನಾಯಕರ ವಿರೋಧದ ನಡುವೆ ಸಿಎಂ ಆಶೀರ್ವಾದ, ಹೈಕಮಾಂಡ್ ಅಂತಿಮವಾಗಿ ರಕ್ಷಾ ರಾಮಯ್ಯಗೆ ಮಣೆಹಾಕಿದೆ. ಇದರಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿಗೆ ಮುಖಭಂಗವಾಗಿದೆ.

ಇಬ್ಬರ ನಡುವೆ ಮೂರನೇ ವ್ಯಕ್ತಿಗೆ ಟಿಕೆಟ್​ ಜಾಕ್​ಪಾಟ್​​!

ಇನ್ನು, ಕೋಲಾರ ಟಿಕೆಟ್ ಕಾಂಗ್ರೆಸ್​ನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಸಚಿವ ಮುನಿಯಪ್ಪ ಮತ್ತು ರಮೇಶ್​ಕುಮಾರ್​ ಬಣದ ಮಧ್ಯೆ ಟಿಕೆಟ್​ಗಾಗಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ಮಧ್ಯೆ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್​ ಅಂತಿಮವಾಗಿದೆ ಎನ್ನುವ ಸುದ್ದಿ ಬಳಿಕ ರಾಜೀನಾಮೆ ಪ್ರಹಸನಕ್ಕೂ ರಾಜ್ಯ ರಾಜಕೀಯ ಸಾಕ್ಷಿ ಆಯ್ತು. ಈ ಎಲ್ಲ ಕಾರಣಕ್ಕೆ ಕೋಲಾರ ಕ್ಷೇತ್ರ ಪೆಂಡಿಂಗ್​​ ಇರಿಸಲಾಗಿದೆ.

ಇದನ್ನೂ ಓದಿ: ಹಮಾಸ್‌ ಉಗ್ರರು ಯುವತಿ ನಗ್ನ ಮೆರವಣಿಗೆ ಮಾಡಿದ್ದ ಫೋಟೋಗೆ ಪ್ರಶಸ್ತಿ; ಇಸ್ರೇಲಿಗರ ಭಾರೀ ಆಕ್ರೋಶ

ಒಂದ್ವೇಳೆ ಮುನಿಯಪ್ಪ ಅಳಿಯನಿಗೆ ಟಿಕೆಟ್​​​ ನೀಡಿದ್ರೆ ರಮೇಶ್​ಕುಮಾರ್​ ಬಣ ಎಲೆಕ್ಷನ್​​​​ನಿಂದ ದೂರ ಉಳಿಯುವ ಆತಂಕ ಕಾಂಗ್ರೆಸ್​​ಗೆ ಕಾಡ್ತಿದೆ. ರಮೇಶ್​ಕುಮಾರ್​​ ಬಣಕ್ಕೆ ಟಿಕೆಟ್​​ ಕೊಟ್ರೆ, ಮುನಿಯಪ್ಪ ಬಣ ಮುನಿಸಿಕೊಳ್ಳಲಿದೆ. ಹೀಗಾಗಿ ಇಬ್ಬರ ನಡುವೆ 3ನೇ ಅಭ್ಯರ್ಥಿಯ ಹುಡುಕಾಟ ನಡೆಯುತ್ತಿದೆ. ಹೀಗಾಗಿ ಕೋಲಾರ ಟಿಕೆಟ್ ಯಾರಿಗೆ ಅನ್ನೋದು ನಾಮಪತ್ರ ಸಲ್ಲಿಕೆ ಕೊನೆ ದಿನ ಪ್ರಕಟ ಮಾಡುವ ಸಾಧ್ಯತೆಯೂ ಇದೆ.

ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್​​​ ಎಂಬ ಕುತೂಹಲ ಮುಂದುವರೆದಿದೆ.. ಕ್ಷೇತ್ರದಲ್ಲಿ ಬಂಡಾಯ ಹೆಚ್ಚದಾದ ಹಿನ್ನೆಲೆ ಎಡಗೈ ಅಥವಾ ಬಲಗೈ ಸಮುದಾಯದಲ್ಲಿ ಯಾರಿಗೆ ಮಣೆ ಹಾಕೋದು ಅನ್ನೋದೆ ಹೈಮಾಂಡ್​ಗೆ ಚಿಂತೆ ಆಗಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ 9ನೇ ಪಟ್ಟಿ ಪ್ರಕಟಿಸಿದೆ.. ಕರ್ನಾಟಕದ ಮೂರು ಕ್ಷೇತ್ರ ಘೋಷಿಸಿದ್ದು, 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಿದಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾಜಿ CM ಮೊಯ್ಲಿಗೆ ಮುಖಭಂಗ; ಕಾಂಗ್ರೆಸ್​ಗೆ ಕರ್ನಾಟಕದ ಆ ಒಂದು ಕ್ಷೇತ್ರ ಮಾತ್ರ ಕಗ್ಗಂಟಾಗಿಯೇ ಉಳಿದಿದೆ..!

https://newsfirstlive.com/wp-content/uploads/2024/03/VEERAPPA-MOILY.jpg

Load More