newsfirstkannada.com

ಫುಟ್​ಬಾಲ್​ಗೆ ವಿದಾಯ ಹೇಳಿದ ಟೀಂ ಇಂಡಿಯಾದ ಸುನಿಲ್ ಛೆಟ್ರಿ.. ವಿಡಿಯೋದಲ್ಲಿ ದಂತಕತೆ ಭಾವುಕ

Share :

Published May 16, 2024 at 11:30am

Update May 16, 2024 at 11:43am

    ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ನಿವೃತ್ತಿ

    ಭಾರತೀಯ ಫುಟ್ಬಾಲ್ ತಂಡದ ನಾಯಕರಾಗಿರುವ ಛೆಟ್ರಿ

    ವಿಶ್ವಕಪ್ ಅರ್ಹತಾ ಪಂದ್ಯವೇ ಅವರ ಕೊನೆಯ ಪಂದ್ಯ

ಭಾರತೀಯ ಫುಟ್ಬಾಲ್ ತಂಡದ ನಾಯಕ, ದಂತಕತೆ ಸುನಿಲ್ ಛೆಟ್ರಿ ನಿವೃತ್ತಿ ಘೋಷಿಸಿದ್ದಾರೆ. ಕುವೈತ್ ವಿರುದ್ಧ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಭಾರತ ಮತ್ತು ಕುವೈತ್ ನಡುವಿನ ವಿಶ್ವಕಪ್ ಅರ್ಹತಾ ಪಂದ್ಯ ಜೂನ್ 6 ರಂದು ನಡೆಯಲಿದೆ. ಇದು ಭಾರತದ ದಂತಕಥೆಗೆ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

ಸುನಿಲ್ ಛೆಟ್ರಿ ಅವರ ಅಂತಾರಾಷ್ಟ್ರೀಯ ಫುಟ್​ಬಾಲ್ ವೃತ್ತಿಜೀವನ ಅದ್ಭುತವಾಗಿದೆ. 39 ವರ್ಷದ ಈ ಅನುಭವಿ.. ಭಾರತ ಪರ 145 ಪಂದ್ಯಗಳನ್ನು ಆಡಿದ್ದಾರೆ. 20 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 93 ಗೋಲುಗಳನ್ನು ಗಳಿಸಿದ್ದಾರೆ. ತಮ್ಮ ನಿವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ಸುಮಾರು 9 ನಿಮಿಷದ ವಿಡಿಯೋ ಶೇರ್ ಮಾಡಿರುವ ಅವರು, ತುಂಬಾ ಭಾವುಕರಾಗಿದ್ದಾರೆ. ವೀಡಿಯೋ ಶೀರ್ಷಿಕೆಯಲ್ಲಿ ನಾನು ನಿಮಗೆ ಏನೋ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಆರ್​ಸಿಬಿಗೆ ಹಿನ್ನಡೆ ಮೇಲೆ ಹಿನ್ನಡೆ.. ಇಷ್ಟಕ್ಕೆಲ್ಲ ಕಾರಣ ಆ 1 ರನ್​, ಆ 1 ಸೋಲು..!

ಛೆಟ್ರಿ ತುಂಬಾ ಭಾವುಕ
ಈ ವಿಡಿಯೋದಲ್ಲಿ ಸುನಿಲ್ ಛೆಟ್ರಿ ತುಂಬಾ ಭಾವುಕರಾಗಿ ಕಾಣ್ತಿದ್ದಾರೆ. ತಮ್ಮ ಚೊಚ್ಚಲ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಕೋಚ್ ಸುಖಿ ಸರ್ ಬಗ್ಗೆ ಮಾತನಾಡಿದ್ದಾರೆ. ಸುನಿಲ್ ಛೆಟ್ರಿಯ ಮೊದಲ ಪಂದ್ಯದಲ್ಲಿ ಸುಖಿ ಸರ್ ಕೋಚ್ ಆಗಿದ್ದರು. ಚೊಚ್ಚಲ ಪಂದ್ಯದ ಎಮೋಷನಲ್ ವಿವರಿಸಲು ಸಾಧ್ಯವಿಲ್ಲ. ಆ ಪಂದ್ಯದಲ್ಲಿಯೇ ಮೊದಲ ಗೋಲು ಗಳಿಸಿದ್ದೆ. ಟೀಂ ಇಂಡಿಯಾದ ಜೆರ್ಸಿ ತೊಟ್ಟಾಗ ಅದೊಂದು ವಿಭಿನ್ನ ಭಾವನೆ, ಆ ದಿನ ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಕಳೆದ 19 ವರ್ಷಗಳಲ್ಲಿ ನನಗೆ ನೆನಪಿರುವ ವಿಷಯಗಳೆಂದರೆ ಆಟದಲ್ಲಿನ ಜವಾಬ್ದಾರಿ, ಒತ್ತಡ ಮತ್ತು ಅಪಾರ ಸಂತೋಷ ಎಂದಿದ್ದಾರೆ.

ಇದನ್ನೂ ಓದಿ:ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ಪ್ರಾಣಬಿಟ್ಟ ಜಿಮ್ ಟ್ರೈನರ್.. ಹೆದರಿಸಲು ಹೋಗಿ ಜೀವ ಹೋಯ್ತು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಫುಟ್​ಬಾಲ್​ಗೆ ವಿದಾಯ ಹೇಳಿದ ಟೀಂ ಇಂಡಿಯಾದ ಸುನಿಲ್ ಛೆಟ್ರಿ.. ವಿಡಿಯೋದಲ್ಲಿ ದಂತಕತೆ ಭಾವುಕ

https://newsfirstlive.com/wp-content/uploads/2024/05/SUNIL-CHETTRY-2.jpg

Load More