/newsfirstlive-kannada/media/post_attachments/wp-content/uploads/2024/04/VIRAT-KOHLI-8.jpg)
ಒಳ್ಳೆ ಟೈಮ್​​​​ನಲ್ಲಿ ಎಲ್ಲರು ಜೊತೆಗಿರ್ತಾರೆ. ಅದರಲ್ಲೇನೂ ವಿಶೇಷ ಅನ್ನಿಸಲ್ಲ. ಟಫ್​ ಟೈಮ್​​ ಜೊತೆಗೆ ನಿಂತಾಗಲೇ ಆ ಸಂಬಂಧ ತುಂಬಾ VALID ಅನ್ನಿಸೋದು. ಸ್ಟ್ರೈಕ್​ರೇಟ್ ವಿಚಾರವಾಗಿ ಕಿಂಗ್ ಕೊಹ್ಲಿಯನ್ನ ಹಲವರು ಮನಬಂದಂತೆ ಟೀಕಿಸ್ತಿದ್ದಾರೆ.
ಟಿ20 ವಿಶ್ವಕಪ್​​​ ತಂಡದಲ್ಲಿ ಕಿಂಗ್ ಕೊಹ್ಲಿ ಸ್ಥಾನದ ವಿಚಾರ ಮತ್ತೊಮ್ಮೆ ಹಾಟ್​​​​ ಟಾಪಿಕ್ ಆಗಿದೆ. ವಿರಾಟ್​​ ಕೊಹ್ಲಿಯನ್ನ ಆಯ್ಕೆ ಮಾಡಬೇಕಾ? ಬೇಡ್ವಾ? ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕೊಹ್ಲಿಯ ಸ್ಲೋ ಸ್ಟ್ರೈಕ್​ರೇಟ್​ ಟೀಕಾಕಾರಿಗೆ ಆಹಾರವಾಗಿದೆ.
ಇದನ್ನೂ ಓದಿ: ಟಿ-20 ವಿಶ್ವಕಪ್​​ನಲ್ಲಿ ಯಾರಿಗೆಲ್ಲ ಸ್ಥಾನ ಸಿಗಬಹುದು? ಸಂಭವನೀಯ ಆಟಗಾರರ ಪಟ್ಟಿ ಇಲ್ಲಿದೆ
/newsfirstlive-kannada/media/post_attachments/wp-content/uploads/2024/04/Kohli_Fifty1.jpg)
ಐಪಿಎಲ್​ನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ನಿನ್ನೆಯೂ ಕೂಡ ಸಾಲಿಡ್​ ಪ್ರದರ್ಶನ ನೀಡಿದ್ರು. ಆದ್ರೂ ಕೂಡ ಸನ್​ರೈಸರ್ಸ್​ ಹೈದ್ರಾಬಾದ್​ ಎದುರಿನ ಇನ್ನಿಂಗ್ಸ್​ ಉದಾಹರಣೆಯಾಗಿ ಇಟ್ಟುಕೊಂಡು ಕೊಹ್ಲಿ ಸ್ಲೋ ಬ್ಯಾಟಿಂಗ್​​ ಶೈಲಿಯನ್ನ ಹಲವರು ಟೀಕಿಸ್ತಿದ್ದಾರೆ. ಅದ್ರಲ್ಲೂ ಸನ್​ರೈಸರ್ಸ್​​ ಹೈದ್ರಾಬಾದ್​ ಎದುರು ಆಡಿದ ನಿಧಾನಗತಿಯ ಬ್ಯಾಟಿಂಗ್​ನ ಉದಾಹರಣೆಯಾಗಿ ಇಟ್ಟುಕೊಂಡು ಟೀಮ್ ಇಂಡಿಯಾ ದಿಗ್ಗಜ ಹಾಗೂ ಕಾಮೆಂಟೇಟರ್​ ಸುನೀಲ್ ಗವಾಸ್ಕರ್ ಕೂಡ ಕಟುವಾಗಿ ಟೀಕಿಸಿದ್ದಾರೆ.
ಸಿಂಗಲ್ಗಳಷ್ಟೇ ಕಾಣಿಸಿದ್ವು
ವಿರಾಟ್ ಕೊಹ್ಲಿ ಟಚ್ ಕಳೆದುಕೊಂಡಂತೆ ಕಾಣ್ತಿದ್ರು. ನನ್ನ ಪ್ರಕಾರ 31-32ರಿಂದ ಔಟಾಗುವವರೆಗೆ ಬೌಂಡರಿಯನ್ನೆ ಬಾರಿಸಲಿಲ್ಲ. ಕೊಹ್ಲಿ ಇನ್ನಿಂಗ್ಸ್ನಲ್ಲಿ ಸಿಂಗಲ್, ಸಿಂಗಲ್ ಮತ್ತು ಸಿಂಗಲ್ ಅಷ್ಟೇ ಕಾಣಿಸಿದವು. 14-15ನೇ ಓವರ್ನಲ್ಲಿ ಸ್ಟ್ರೈಕ್ರೇಟ್ ಕೇವಲ 118 ಇತ್ತು -ಸುನೀಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ಸುನಿಲ್​ ಗವಾಸ್ಕರ್​ ಮಾತ್ರವಲ್ಲ.. ವಿರಾಟ್​ ಕೊಹ್ಲಿ ಸ್ಟ್ರೈಕ್​ರೇಟ್​​ ಅನ್ನ ಹಲವರು ಟೀಕಿಸ್ತಿದ್ದಾರೆ. ಕೊಹ್ಲಿ ಟಿ20 ಕ್ರಿಕೆಟ್​​ಗೆ ಸೂಟ್​ ಆಗಲ್ಲ. ಅವರು ಆಕ್ರಮಣಕಾರಿ ಆಗಿ ಆಡ್ಬೇಕು ಅಂತೆಲ್ಲಾ ಹೇಳ್ತಿದ್ದಾರೆ.
ಇದನ್ನೂ ಓದಿ:‘ಬಾರೋ ಬಾರೋ ಮಳೆರಾಯ..’ 48 ಗಂಟೆಯಲ್ಲಿ ತಂಪೆರೆಯಲಿದೆ ಮಳೆ..! ಎಲ್ಲೆಲ್ಲಿ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us