newsfirstkannada.com

ಕೊಹ್ಲಿ ತಾಕತ್ತಿಗೆ ಸವಾಲ್ ಎಸೆದ ಗವಾಸ್ಕರ್​.. ನೆಕ್ಸ್ಟ್​ ಲೆವಲ್​​ಗೆ ಬಂದ ಕಿತ್ತಾಟ..!

Share :

Published June 7, 2024 at 1:23pm

Update June 7, 2024 at 1:27pm

  ಮೊದಲ ಪಂದ್ಯದಲ್ಲೇ ವಿರಾಟ್​​ ವೀರಾವೇಷ ಮಾಯ

  ವೈಫಲ್ಯ ಕಂಡ ವಿರಾಟ್​ ಕೊಹ್ಲಿಗೆ ಅಗ್ನಿ ಪರೀಕ್ಷೆ

  ನಸ್ಸೌನ ವಿಚಿತ್ರ ಪಿಚ್​, ಪಾಕಿಸ್ತಾನದ ಬಲಿಷ್ಠ ಬೌಲಿಂಗ್​

ಚಾಲೆಂಜ್​ ಅಂದ್ರೆ ಸಾಕು.. ವಿರಾಟ್​ ಕೊಹ್ಲಿ ತೊಡೆತಟ್ಟಿ ಸಜ್ಜಾಗ್ತಾರೆ. ಸವಾಲುಗಳು ಎದುರಾದಷ್ಟು ಕಿಂಗ್​ ಕೊಹ್ಲಿ, ಪುಟಿದೇದ್ದಿರುವ ಕಥೆಯನ್ನ ಇತಿಹಾಸವೇ ಹೇಳ್ತಿದೆ. ಇಂತಹ ಕಿಂಗ್​​ ಕೊಹ್ಲಿಯ ತಾಕತ್ತಿಗೆ ಇದೀಗ ಲೆಜೆಂಡ್​ ಸುನಿಲ್​ ಗವಾಸ್ಕರ್​ ಸವಾಲ್​ ಎಸೆದಿದ್ದಾರೆ. ಪಾಕ್​​ ವಿರುದ್ಧದ ಹೈವೋಲ್ಟೆಜ್​ ಕದನಕ್ಕೂ ಮುನ್ನ ರನ್​​ಮಷೀನ್​​ಗೆ ಎದುರಾಗಿರೋ ಹೊಸ ಚಾಲೆಂಜ್​ ಏನು?

T20 ವಿಶ್ವಕಪ್​ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಶುಭಾರಂಭ ಮಾಡಿದೆ. ಐರ್ಲೆಂಡ್​ ವಿರುದ್ಧ ಸುಲಭದ ಗೆಲುವು ದಾಖಲಿಸಿರೋ ರೋಹಿತ್​ ಶರ್ಮಾ ಪಡೆಯ ಕಣ್ಣು ಇದೀಗ ಮುಂದಿನ ಕದನದ ಮೇಲೆ ನೆಟ್ಟಿದೆ. ನ್ಯೂಯಾರ್ಕ್​ನ ನಸ್ಸೌ ರಣಾಂಗಣದಲ್ಲಿ ಸೂಪರ್​ ಸಂಡೇ ಮೆಗಾಫೈಟ್​ ನಡೆಯಲಿದೆ. ಇಡೀ ಕ್ರಿಕೆಟ್​ ಲೋಕವೇ ನೋಡಲು ಕಾದು ಕುಳಿತಿರೋ ಈ ಕದನದಲ್ಲಿ ಬದ್ಧವೈರಿ ಪಾಕಿಸ್ತಾನ ಪಡೆಯನ್ನ ಟೀಮ್​ ಇಂಡಿಯಾ ಎದುರಿಸಲಿದೆ. ಈ ಪಂದ್ಯಕ್ಕೂ ವಿರಾಟ್​ ಕೊಹ್ಲಿಗೆ ಹೊಸ ಸವಾಲು ಎದುರಾಗಿದೆ.

ಮೊದಲ ಪಂದ್ಯದಲ್ಲೇ ವಿರಾಟ್​​ ವೀರಾವೇಷ ಮಾಯ..!
ವಿಶ್ವಕಪ್​ ಟೂರ್ನಿಯಂತಹ ಬಿಗ್​ ಟೂರ್ನಮೆಂಟ್ ಅಂದ ಮೇಲೆ ಬಿಗ್​ ಮ್ಯಾಚ್​ ಪ್ಲೇಯರ್​ ವಿರಾಟ್​ ಕೊಹ್ಲಿ ಎಲ್ಲರ ಕಣ್ಣಿತ್ತು. ರೋಹಿತ್​ ಜೊತೆ ಇನ್ನಿಂಗ್ಸ್​​ ಆರಂಭಿಸೋದು ಕನ್​ಫರ್ಮ್​ ಆದ ಮೇಲಂತೂ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಆದ್ರೆ, ಮೊದಲ ಪಂದ್ಯದಲ್ಲಿ ವಿರಾಟ್​ ವೀರಾವೇಶ ಕಾಣಲೆ ಇಲ್ಲ. ದುರ್ಬಲ ಐರ್ಲೆಂಡ್​ ಬೌಲಿಂಗ್​ ದಾಳಿ ಎದುರು ತಿಣುಕಾಡಿದ್ರು. 5 ಎಸೆತಗಳನ್ನ ಎದುರಿಸಿ ಜಸ್ಟ್​​ 1 ರನ್​​ಗಳಿಸಿ ಔಟಾದ್ರು.

ಇದನ್ನೂ ಓದಿ:ವಿಜಯಪುರದಲ್ಲಿ ಭೀಕರ ಅಪಘಾತ.. ಲಾರಿ ಗುದ್ದಿದ ಹೊಡೆತಕ್ಕೆ ಪ್ರಯಾಣಿಕರಿದ್ದ ಬಸ್​ ಪುಡಿಪುಡಿ

ವೈಫಲ್ಯ ಕಂಡ ವಿರಾಟ್​ ಕೊಹ್ಲಿಗೆ ಅಗ್ನಿ ಪರೀಕ್ಷೆ..!
ಅಭ್ಯಾಸ ಪಂದ್ಯವನ್ನಾಡದೇ ನೇರವಾಗಿ ಅಸಲಿ ಅಖಾಡಕ್ಕಿಳಿದ ವಿರಾಟ್ ಕೊಹ್ಲಿ ಫೇಲ್​ ಆಗಿದ್ದಾರೆ. ವಿಶ್ವಕಪ್​ನಲ್ಲಿ ಮೊದಲ ಬಾರಿ ಚೇಸಿಂಗ್​ ವೇಳೆ ಅತಿ ಕಡಿಮೆ ಮೊತ್ತಕ್ಕೆ ಔಟಾದ ಕಳಪೆ ದಾಖಲೆ ಬರೆದಿದ್ದಾರೆ. ಎದುರಿಸಿದ ಐದೂ ಬಾಲ್​​ಗಳನ್ನ ಸರಿಯಾಗಿ ಜಡ್ಜ್​ ಮಾಡದ ಕೊಹ್ಲಿ, ಇದೇ ಮೈದಾನದಲ್ಲಿ ಭಾನುವಾರ ಬಲಿಷ್ಠ ಪಾಕಿಸ್ತಾನ ಪಡೆಯನ್ನ ಎದುರು ಕಾದಾಡಲಿದ್ದಾರೆ. ಅದಕ್ಕೂ ಮುನ್ನ ಲೆಜೆಂಡ್​ ಸುನಿಲ್​ ಗವಾಸ್ಕರ್​ ವಿರಾಟ್​ ಕೊಹ್ಲಿಗೆ ಸವಾಲೆಸಿದ್ದಾರೆ.

ಪಾಕ್​ ಎದುರು ಆಡಿ ತೋರಿಸಿ.. ಗವಾಸ್ಕರ್​ ಗುಡುಗು..!
ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿರುವ ವಿರಾಟ್​ ಕೊಹ್ಲಿ ಇದೀಗ ಪಾಕಿಸ್ತಾನ್​ ಎದುರು ಸಾಮರ್ಥ್ಯ ನಿರೂಪಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಐರ್ಲೆಂಡ್​ ಎದುರು ಸೋಲಿನ ಬಳಿಕ ಮಾತನಾಡಿರೋ ಲೆಜೆಂಡ್​ ಸುನಿಲ್​ ಗವಾಸ್ಕರ್​, ವಿರಾಟ್​ ಕೊಹ್ಲಿ ತಾಕತ್ತಿಗೆ ಸವಾಲೆಸೆದಿದ್ದಾರೆ. ಲೆಜೆಂಡ್​ ಆಟಗಾರರು ಒಂದು ಪಂದ್ಯದಲ್ಲಿ ಫೇಲ್​ ಆದ್ರೆ, ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡ್ತಾರೆ. ಪಾಕ್​​ ವಿರುದ್ಧದ ಪಂದ್ಯದಲ್ಲಿ ಆಡಿ ತೋರಿಸಲಿ ಅನ್ನೋ ಮಾತುಗಳನ್ನಾಡೋ ಮೂಲಕ ಪರೋಕ್ಷ ಸವಾಲು ಹಾಕಿದ್ದಾರೆ.

ಇದನ್ನೂ ಓದಿ:ಆ 4 ಖಾತೆ ಕೇಳಂಗಿಲ್ಲ ಎಂದ ಬಿಜೆಪಿ.. ಚೌಕಾಸಿ ಮಾಡಿ ಹೊಸ ಫಾರ್ಮೂಲ ಮುಂದಿಟ್ಟ ನಾಯ್ಡು..!

ನಸ್ಸೌನ ವಿಚಿತ್ರ ಪಿಚ್​, ಪಾಕಿಸ್ತಾನದ ಬಲಿಷ್ಠ ಬೌಲಿಂಗ್.​.!
ಮುಂದಿನ ಪಾಕ್​ ವಿರುದ್ಧದ ಪಂದ್ಯ ವಿರಾಟ್​​ ಕೊಹ್ಲಿಗೆ ಮಾತ್ರವಲ್ಲ. ಇಡೀ ದೇಶಕ್ಕೆ ಪ್ರತಿಷ್ಟೆಯ ಪಂದ್ಯ. ವಿಶ್ವಕಪ್​ ಗೆಲುವಿಗಿಂತ ಈ ಪಂದ್ಯದ ಗೆಲುವು ಅನ್ನೋದು ಉಭಯ ತಂಡಗಳಿಗೆ ಮುಖ್ಯ. ಒತ್ತಡವಂತೂ ಇದ್ದೇ ಇರುತ್ತೆ. ಇದೆಲ್ಲವನ್ನ ಮೀರಿ ಈ ಹಿಂದೆ ಪಾಕ್​ ವಿರುದ್ಧದ ವಿಶ್ವಕಪ್​ ಪಂದ್ಯಗಳಲ್ಲಿ ವಿರಾಟ್​ ವಿರಾಟರೂಪ ದರ್ಶನ ಮಾಡಿದ್ದಾರೆ. 80+ ಸರಾಸರಿಯಲ್ಲಿ ಪಾಕ್​ ಬೌಲರ್​ಗಳನ್ನ ವಿರಾಟ್​ ಚಿಂದಿ ಉಡಾಯಿಸಿ ರನ್​ಗಳಿಸಿದ್ದಾರೆ. ಈ ಪರ್ಫಾಮೆನ್ಸ್​ ಕೊಹ್ಲಿ ಮೇಲಿನ ನಿರೀಕ್ಷೆ ಹೆಚ್ಚಿಸಿದ್ರೂ, ಈ ಬಾರಿ ಪರಿಸ್ಥಿತಿ ಬಿನ್ನವಾಗಿದೆ.

ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!

ನ್ಯೂಯಾರ್ಕ್​​ನ ನಸ್ಸೌ ಪಿಚ್​​ ವರ್ತನೆ ಬ್ಯಾಟ್ಸ್​ಮನ್​ಗಳಿಗೆ ಅರ್ಥವಾಗ್ತಿಲ್ಲ. ಕೊಹ್ಲಿ ಕೂಡ ತಿಣುಕಾಡಿದ್ದಾರೆ. ಪಾಕಿಸ್ತಾನ ಪಡೆ ಬಲಿಷ್ಠವಾದ ವೇಗದ ಬೌಲಿಂಗ್​ ದಾಳಿಯನ್ನ ಹೊಂದಿದ್ದಾರೆ. ಎಡಗೈ ವೇಗಿಗಳ ವೀಕ್​ನೆಸ್​​ ಹೊಂದಿರುವ ಕೊಹ್ಲಿಯನ್ನ ಹಣಿಯಲು ಶಾಹೀನ್​ ಶಾ ಅಫ್ರಿದಿ, ಮೊಹಮ್ಮದ್​ ಅಮೀರ್​​ರಂತಾ​ ವೇಗಿಗಳಿದ್ದಾರೆ. ಇದ್ರ ಮಧ್ಯೆ ವೈಫಲ್ಯದ ಸುಳಿಗೆ ಸಿಲುಕಿರುವ ಕೊಹ್ಲಿಗೆ, ತಾಕತ್ತಿನ ಸವಾಲು ಬೇರೆ ಎದುರಾಗಿದೆ. ಈ ಎಲ್ಲಾ ಕಾರಣಗಳಿಂದ ವಿರಾಟ್, ಸದ್ಯ​​ ಅಗ್ನಿ ಪರೀಕ್ಷೆಯ ಕಣದಲ್ಲಿದ್ದಾರೆ. ಸವಾಲುಗಳಿಗೆ ಕೊಹ್ಲಿ, ಬ್ಯಾಟ್​ನಿಂದಲೇ ಉತ್ತರ ಕೊಡ್ತಾರಾ.? ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೊಹ್ಲಿ ತಾಕತ್ತಿಗೆ ಸವಾಲ್ ಎಸೆದ ಗವಾಸ್ಕರ್​.. ನೆಕ್ಸ್ಟ್​ ಲೆವಲ್​​ಗೆ ಬಂದ ಕಿತ್ತಾಟ..!

https://newsfirstlive.com/wp-content/uploads/2024/06/VIRAT-KOHLI-12.jpg

Load More