newsfirstkannada.com

ಕಾಂಗ್ರೆಸ್‌ ಪಕ್ಷಕ್ಕೆ ಬಿಗ್‌ ಶಾಕ್‌; 2019ರಂತೆ ದೂರವಾದ ಮತ್ತೊಬ್ಬ ಚುನಾವಣಾ ತಂತ್ರಗಾರ? ಏನಾಯ್ತು?

Share :

Published January 12, 2024 at 9:52pm

Update January 12, 2024 at 10:38pm

  ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ರೂವಾರಿ

  2024ರ ಲೋಕಸಭಾ ಚುನಾವಣಾ ತಂತ್ರಗಾರಿಕೆಯಿಂದ ದೂರ

  2019ರಿಂದ ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ ಪಕ್ಷದೊಂದಿಗೆ ಅಂತರ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿರುವಾಗ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬದಲಾವಣೆಯಾಗಿದೆ. ಕರ್ನಾಟಕ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ರೂವಾರಿ ಸುನೀಲ್ ಕನ್ನುಗೋಲು ಅವರು ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ಎನ್‌ಡಿಟಿವಿ ವರದಿಯ ಪ್ರಕಾರ ಚುನಾವಣಾ ಕಾರ್ಯತಂತ್ರ ಸುನೀಲ್ ಕನ್ನುಗೋಲು ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯತಂತ್ರದಿಂದ ದೂರ ಸರಿಯಲು ಮುಂದಾಗಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ ಕಾಂಗ್ರೆಸ್‌ ಚುನಾವಣಾ ಕಾರ್ಯತಂತ್ರ ಆಗಿರುವ ಸುನೀಲ್ ಕನ್ನುಗೋಲು ಅವರು ಇಷ್ಟು ದಿನ 2024ರ ಟಾಸ್ಕ್ ಫೋರ್ಸ್‌ನ ಭಾಗವಾಗಿದ್ದರು. ಆದ್ರೀಗ 2024ರ ಲೋಕಸಭಾ ಚುನಾವಣಾ ಕಾರ್ಯತಂತ್ರದಿಂದ ದೂರ ಸರಿದಿದ್ದಾರೆ. ಆದರೆ ಇದೇ ವರ್ಷ ಎದುರಾಗುವ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸಲು ನಿರ್ಧರಿಸಿದ್ದಾರಂತೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸುನೀಲ್ ಕನ್ನುಗೋಲು ಅವರ ಅನುಪಸ್ಥಿತಿಯಲ್ಲಿ ತಂತ್ರಗಾರಿಕೆಯನ್ನ ಮಾಡುವ ಸಾಧ್ಯತೆ ಇದೆ. ಇದರಿಂದ ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಸ್ವಲ್ಪ ಹಿನ್ನಡೆಯಾಗಲಿದೆ ಎನ್ನಲಾಗಿದೆ. ಲೋಕಸಭಾ ಚುನಾವಣೆ ಬಳಿಕ ಹರಿಯಾಣ, ಮಹಾರಾಷ್ಟ್ರದಲ್ಲಿ ಎಲೆಕ್ಷನ್ ಎದುರಾಗಲಿದೆ. ಇನ್ನು 6-7 ತಿಂಗಳಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯಲ್ಲಿ ಸುನೀಲ್ ಕನ್ನುಗೋಲು ಅವರು ಕರ್ನಾಟಕ, ತೆಲಂಗಾಣದಲ್ಲಿ ಗೆದ್ದ ತಂತ್ರಗಾರಿಕೆಯನ್ನು ಯೋಜಿಸಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ಲೋಕ’ ಗೆಲ್ಲಲು ಬಿಜೆಪಿ ಸರಣಿ ಸಭೆ; ಕಾಂಗ್ರೆಸ್​ ವಾರ್​​ ರೂಮ್​​ನಲ್ಲಿ ರಾಜ್ಯದ ಸಚಿವರಿಗೆ ಸೇಂಥಿಲ್ ಪಾಠ..!

ಪ್ರಶಾಂತ್ ಕಿಶೋರ್ ದೂರವಾದ ಬಳಿಕ ಏನಾಯ್ತು? 
2012 ರಲ್ಲಿ ಗುಜರಾತ್ ಸಿಎಂ ಆಗಿದ್ದಾಗ ನರೇಂದ್ರ ಮೋದಿ ಅವರೊಂದಿಗೆ ಚುನಾವಣಾ ಕಾರ್ಯತಂತ್ರ ಪ್ರಶಾಂತ್ ಕಿಶೋರ್ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಬಿಜೆಪಿ ಬಿಟ್ಟು ಬಂದ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮಿತ್ರ ಪಕ್ಷಗಳೊಂದಿಗೆ ತಂತ್ರಗಾರಿಕೆಯನ್ನು ರೂಪಿಸಿದರು. 2019ರಲ್ಲಿ ಕಾಂಗ್ರೆಸ್‌ ಪಕ್ಷದೊಂದಿಗೆ ಮೂಡಿದ ಭಿನ್ನಾಭಿಪ್ರಾಯಗಳಿಂದ ಪ್ರಶಾಂತ್ ಕಿಶೋರ್ ದೂರವಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಇದೀಗ 2024ರ ಚುನಾವಣೆಯಲ್ಲೂ 2019ರಲ್ಲಿ ಆದಂತ ಹಿನ್ನಡೆ ಕಾಂಗ್ರೆಸ್‌ಗೆ ಎದುರಾಗುವ ಸಾಧ್ಯತೆ ಇದೆ. ಪ್ರಶಾಂತ್ ಕಿಶೋರ್ ಬಳಿಕ ಸುನೀಲ್ ಕನ್ನುಗೋಲು ಅವರು ಕಾಂಗ್ರೆಸ್ ಪಕ್ಷದ ಪ್ರಚಾರದಿಂದ ದೂರ ಸರಿಯಲು ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್‌ ಪಕ್ಷಕ್ಕೆ ಬಿಗ್‌ ಶಾಕ್‌; 2019ರಂತೆ ದೂರವಾದ ಮತ್ತೊಬ್ಬ ಚುನಾವಣಾ ತಂತ್ರಗಾರ? ಏನಾಯ್ತು?

https://newsfirstlive.com/wp-content/uploads/2024/01/Rahul-Gandhi-PM-Modi.jpg

Load More