ಸುನಿತಾ ವಿಲಿಯಮ್ಸ್​ ಬಗ್ಗೆ NASA ಕಳವಳ.. ಬೇರೆಯದ್ದೇ ಕತೆ ಹೇಳ್ತಿದೆ ಈ ಫೋಟೋ..

author-image
Ganesh
Updated On
ಸುನಿತಾ ವಿಲಿಯಮ್ಸ್​ ಬಗ್ಗೆ NASA ಕಳವಳ.. ಬೇರೆಯದ್ದೇ ಕತೆ ಹೇಳ್ತಿದೆ ಈ ಫೋಟೋ..
Advertisment
  • ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಫೋಟೋ ಬಿಡುಗಡೆ
  • ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದ ಪೋಟೋ
  • ಸುನಿತಾ ವಿಲಿಯಮ್ಸ್​ ಭೂಮಿಗೆ ವಾಪಸ್ ಆಗೋದು ಯಾವಾಗ?

ಬಾಹ್ಯಾಕಾಶಕ್ಕೆ ಹೋದ ದಿನದಿಂದ ಸುನಿತಾ ವಿಲಿಯಮ್ಸ್​ ಸುದ್ದಿಯಲ್ಲಿದ್ದಾರೆ. ಆಗ ಬರ್ತಾರೆ ಈಗ ಬರ್ತಾರೆ ಅಂತ ಸುದ್ದಿಯಲ್ಲಿದ್ದ ಗಗನಯಾತ್ರಿಗಳು ಬಳಿಕ ಬರೋದೇ ಇಲ್ಲ ಅಂತ ಆತಂಕ ನಿರ್ಮಾಣವಾಗಿತ್ತು. ಅದೆಲ್ಲ ನಿವಾರಣೆ ಆಯ್ತು ಅನ್ನುವಾಗಲೇ ಹೊಸ ಸಂಕಷ್ಟ ಶುರುವಾಗಿದೆ.

ಹದಗೆಟ್ಟ ಆರೋಗ್ಯ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್ ವಿಲ್ಮೋರ್ ಅವರ ಈ ಪೋಟೋಗಳನ್ನು ನೋಡಿ ಸ್ವತಃ ನಾಸಾ ದಿಗ್ಭ್ರಮೆಯಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿರೋ ಬಗ್ಗೆ ದೊಡ್ಡ ಅನುಮಾನ ಹುಟ್ಟಿದೆ. ಬಾಹ್ಯಾಕಾಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕಾಲ ವಾಸ ಮಾಡುತ್ತಿರುವುದರಿಂದ ಸುನಿತಾ ವಿಲಿಯಮ್ಸ್‌ ತೂಕ ಕಳೆದುಕೊಂಡಿದ್ದು ಅಪೌಷ್ಟಿಕತೆಯಿಂದ ಆರೋಗ್ಯವೂ ಹದಗೆಟ್ಟಂತಿದೆ. ರಿಲೀಸ್​ ಆಗಿರುವ ಸುನಿತಾ ವಿಲಿಯಮ್ಸ್‌ ಹೊಸ ಫೋಟೋಗಳಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಇದನ್ನೂ ಓದಿ:ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್​ ಪತಿ?

publive-image

ಸುನಿತಾ ವಿಲಿಯಮ್ಸ್​ಗೆ ಅನಾರೋಗ್ಯ

  • ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಫೋಟೋ ಬಿಡುಗಡೆ
  • ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಗಂಭೀರ ಚರ್ಚೆ ಹುಟ್ಟುಹಾಕಿದ ಪೋಟೋ
  • ಸುನಿತಾ ಹಾಗೂ ವಿಲ್ಮೋರ್ ಇಬ್ಬರ ಮುಖದಲ್ಲೂ ಯಾವ ಲವಲವಿಕೆ ಇಲ್ಲ
  • ಹೆಚ್ಚಿನ ಕಾಲ ಬಾಹ್ಯಾಕಾಶದಲ್ಲಿ ಉಳಿದ ಕಾರಣ ದೇಹರಚನೆ ಸಂಪೂರ್ಣ ಬದಲು
  • ಸುನೀತಾ ವಿಲಿಯಮ್ಸ್‌ ಹಾಗೂ ಬಚ್‌ ವಿಲ್ಮೋರ್‌ ತೂಕ ಕಳೆದುಕೊಂಡು ದೃಶ್ಯ
  • 8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನಿತಾ ಹಾಗೂ ವಿಲ್ಮೋರ್‌
  • ಬೋಯಿಂಗ್‌ ಸ್ಟಾರ್‌ಲೈನರ್‌ ನೌಕೆಯಲ್ಲಿ ಸಮಸ್ಯೆ, 150ಕ್ಕೂ ಅಧಿಕ ದಿನ ಲಾಕ್​
  • ಗಗನಯಾತ್ರಿಗಳು ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ 2.5 ಗಂಟೆಗಳ ಕಾಲ ವ್ಯಾಯಾಮ

ಸುನಿತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ನಾಸಾ ಕಳವಳ!

ಸುನಿತಾ ವಿಲಿಯಮ್ಸ್‌ ಆರೋಗ್ಯದ ಬಗ್ಗೆ ನಾಸಾ ಕಳವಳ ವ್ಯಕ್ತಪಡಿಸಿದೆ. ಅವರ ಕೆನ್ನೆಗಳು ಗುಳಿಬಿದ್ದಿವೆ, ಬಹಳಷ್ಟು ತೂಕ ಕಳೆದುಕೊಂಡಿದ್ದಾಳೆ ಎಂದು ವಿವರಿಸಿದೆ. ಮೂಳೆಗಳ ಮೇಲೆ ಚರ್ಮ ಇರಿಸಿದಂತೆ ಕಾಣುತ್ತಿದ್ದಾಳೆ ಎಂದು ನಾಸಾ ಉದ್ಯೋಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO

publive-image

ಒಟ್ಟಾರೆ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್‌ ಅವರ ಫೋಟೋ ದೊಡ್ಡ ಕಳವಳಕ್ಕೆ ಕಾರಣವಾಗಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ಸಿಲುಕಿರುವ ಗಗನಯಾತ್ರಿಗಳ ಆರೋಗ್ಯದ ಬಗ್ಗೆ ವೈದ್ಯರು ಮಾತ್ರವಲ್ಲದೇ ಜನಸಮಾನ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ನಡುವೆ ಗೊತ್ತಾಗಿದ್ದೇನಂದ್ರೆ 2025ರಲ್ಲಿ ಇಬ್ಬರನ್ನು ಭೂಮಿಗೆ ವಾಪಾಸ್ ಕರೆತರುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment