newsfirstkannada.com

ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್​ ಪತಿ?

Share :

Published September 15, 2024 at 11:11am

    ಮೈಕೆಲ್​ ಜೆ ವಿಲಿಯಮ್ಸ್ ಪ್ರೀತಿಗೆ ಬಿದ್ದ ಸುನಿತಾ ವಿಲಿಯಮ್ಸ್​

    ಭಗವದ್ಗೀತೆಯನ್ನು ಪಾಲಿಸುತ್ತಿದ್ದಾರಾ ಮೈಕೆಲ್​ ಜೆ ವಿಲಿಯಮ್ಸ್?

    ಸುನಿತಾ ವಿಲಿಯಮ್ಸ್ ಪ್ರೀತಿಸಿ ಕೊನೆಗೆ ಮದುವೆಯಾದ ಮೈಕೆಲ್

ಸುನಿತಾ ವಿಲಿಯಮ್ಸ್​ ಕಳೆದ ಮೂರು ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಅಲ್ಲೇ ಬಾಕಿಯಾಗಿದ್ದಾರೆ. 2025ರ ವೇಳೆಗೆ ಅವರು ಭೂಮಿಗೆ ಹಿಂತಿರುಗಲಿದ್ದಾರೆ. ಸದ್ಯ ಸುನಿತಾ ವಿಲಯಮ್ಸ್​ ಬರುವಿಕೆಗಾಗಿ ಪ್ರಪಂಚದಾದ್ಯಂತ ಜನರು ಕಾಯುತ್ತಿದ್ದಾರೆ. ದೇವರ ಬಳಿ ಸುರಕ್ಷಿತವಾಗಿ ಬರಲಿ ಎಂದು ಬೇಡುತ್ತಿದ್ದಾರೆ.

ಸುನಿತಾ ವಿಲಿಯಮ್ಸ್​ ಭಾರತೀಯ ಮೂಲದವರು. ನೌಕಾಪಡೆಯಲ್ಲಿ ತರಬೇತಿ ಪೈಲಟ್​ ಆಗಿದ್ದರು. ಆದರೆ ನಿವೃತ್ತಿಯ ಸಮಯದಲ್ಲಿ ಕ್ಯಾಪ್ಟನ್​ ಹುದ್ದೆಗೇರಿದರು. ಇದಾದ ಬಳಿಕ ನಾಸಾದತ್ತ ಮುಖ ಮಾಡಿದ ಅವರು 2006ರಲ್ಲಿ ಮೊದಲ ಬಾಹ್ಯಾಕಾಶ ಕಾರ್ಯಚರಣೆ ಪ್ರಾರಂಭಿಸಿದರು. 2007ರಲ್ಲಿ ಅದು ಕೊನೆಗೊಂಡಿತು. ಅಂದಹಾಗೆಯೇ ಸುನಿತಾ ವಿಲಿಯಮ್ಸ್​​ ಹೆಸರಿನಲ್ಲಿ ನಾಲ್ಕು ದಾಖಲೆಗಳಿವೆ. ಸದ್ಯ ಅವರ ವೃತ್ತಿಪರ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ವೈಯ್ಯಕ್ತಿಕ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಈ ಕುರಿತಾಗಿ ಇಂಟ್ರೆಸ್ಟಿಂಗ್​ ಮಾಹಿತಿ ಇಲ್ಲಿದೆ.

ಸುನಿತಾರವರು ನಾಸಾ ಸೇರುವ ಮುನ್ನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಹೆಲಿಕಾಪ್ಟರ್​ ಹಾರಿಸುತ್ತಿದ್ದರು. ಈ ವೇಳೆ ಮೈಕೆಲ್​ ಜೆ ವಿಲಿಯಮ್ಸ್ ಅವರ ಪರಿಚಯವಾಗುತ್ತದೆ. ಆರಂಭದಲ್ಲಿ ಇಬ್ಬರು ಸ್ನೇಹಿತರಂತಿದ್ದ ಇವರು ಬಳಿಕ ಪ್ರೀತಿಸಿ ಮದುವೆಯಾಗಲು ನಿರ್ಧರಿಸುತ್ತಾರೆ. ನಿರ್ಧಾರದಂತೆ ಫೆಡರಲ್​ ಮಾರ್ಷಲ್​​ ಮತ್ತು ಮಾಜಿ ಹೆಲಿಕಾಪ್ಟರ್​ ಕ್ಯಾಪ್ಟನ್​​​ ಮೈಕೆಲ್​ ಜೆ ವಿಲಿಯಮ್ಸ್​ ಅವರನ್ನು ಸುನಿತಾ ವರಿಸುತ್ತಾರೆ.

ಇದನ್ನೂ ಓದಿ: ISROದಲ್ಲಿ ವಿವಿಧ ಉದ್ಯೋಗಗಳಿಗೆ ಅರ್ಜಿ ಆಹ್ವಾನ.. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಮೈಕೆಲ್​ ಜೆ ವಿಲಿಯಮ್ಸ್ ಫೆಡರಲ್​ ಮಾರ್ಷಲ್​​. ಇದು ಯುನೈಟೆಡ್​​ ಸ್ಟೇನ್​ನ ಮತ್ತು ಭದ್ರತಾ ವಿಭಾಗವಾಗಿದೆ. ಇದರಲ್ಲಿ ಹೆಲಿಕಾಪ್ಟರ್​​ ಪೈಲಟ್​​ ಆಗಿ ಮೈಕೆಲ್​ ಜೆ ವಿಲಿಯಮ್ಸ್ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಆಧಾರ್ ಕಾರ್ಡ್​​ ಬಳಕೆದಾರರಿಗೆ ಬಿಗ್​ ರಿಲೀಫ್; UIDAIನಿಂದ ಮಹತ್ವದ ಮಾಹಿತಿ

ಸುನಿತಾ ಭಾರತೀಯ ಮೂಲದವಳು. ಹಿಂದೂ ಧರ್ಮವನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮೈಕೆಲ್​ ಜೆ ವಿಲಿಯಮ್ಸ್ ಯಾವುದೇ ಸಮಸ್ಯೆ ಇರಲಿಲ್ಲ. ಮಾತ್ರವಲ್ಲದೆ ಸುನಿತಾ ಭಗವದ್ಗೀತೆಯನ್ನು ಪುನರುಚ್ಚಿಸುವ ಬಗ್ಗೆಯೂ ಆಸ್ತಕಿಯಿಂದ ಮೈಕೆಲ್​ ಜೆ ವಿಲಿಯಮ್ಸ್ ಕೇಳುತ್ತಿದ್ದರು.

ಇದನ್ನೂ ಓದಿ: ಬಾಹ್ಯಾಕಾಶದಿಂದ ಸುದ್ದಿಗೋಷ್ಟಿ! ಸುನಿತಾ, ವಿಲ್ಮೋರ್ ಹೇಗೆ ಕಾಣ್ತಿದ್ದರು..? VIDEO

2007ರಲ್ಲಿ ಮೈಕೆಲ್​ ಜೆ ವಿಲಿಯಮ್ಸ್ ಅವರು ಸಬರಮತಿ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಸ್ಥಳೀಯ ಜುಲಾಸನ್​​ಗೂ ಭೇಟಿ ನೀಡುತ್ತಾರೆ. ಈ ವೇಳೆ ಭಗವದ್ಗೀತೆ ಬಗ್ಗೆ ಆಸಕ್ತಿ ಹೊಂದುತ್ತಾರೆ. ಸದ್ಯ ಅವರು ಓಂ ಧರಿಸುತ್ತಾ, ಭಗವದ್ಗೀತೆ ಪಾಲಿಸುತ್ತಾ ಬಂದಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೀತಿಸಿ ಮದ್ವೆಯಾದ ಜೋಡಿ.. ಹಿಂದೂ ಧರ್ಮವನ್ನು ಅನುಸರಿಸುತ್ತಿದ್ದಾರಾ ಸುನಿತಾ ವಿಲಿಯಮ್ಸ್​ ಪತಿ?

https://newsfirstlive.com/wp-content/uploads/2024/09/Sunita-williams.jpg

Load More