newsfirstkannada.com

ಎಲ್ಲಾ ದಾಖಲೆ ಉಡೀಸ್​​; ಬರೋಬ್ಬರಿ 288 ರನ್​ ಬಿಗ್​ ಟಾರ್ಗೆಟ್​​; ಗೆಲ್ಲುತ್ತಾ ಆರ್​​​ಸಿಬಿ?

Share :

Published April 15, 2024 at 9:39pm

Update April 15, 2024 at 9:41pm

    ಇಂದು ಆರ್​​ಸಿಬಿ, ಸನ್​ರೈಸರ್ಸ್​ ಹೈದರಾಬಾದ್​​​​ ಹೈವೋಲ್ಟೇಜ್​​​​​ ಪಂದ್ಯ

    ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ ಹೈದರಾಬಾದ್​ ಸ್ಟಾರ್​ ಬ್ಯಾಟರ್ಸ್​​!

    ಬೆಂಗಳೂರಿಗೆ ಸನ್​ರೈಸರ್ಸ್​ ಹೈದರಾಬಾದ್​ ಬರೋಬ್ಬರಿ 288 ರನ್​​ ಟಾರ್ಗೆಟ್

ಇಂದು ಇಂಡಿಯನ್​​ ಪ್ರೀಮಿಯರ್​​ ಲೀಗ್​​ 17ನೇ ಸೀಸನ್​​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸನ್​ರೈಸರ್ಸ್​ ಹೈದರಾಬಾದ್ ಬರೋಬ್ಬರಿ 288 ರನ್​ ಬೃಹತ್​​ ಟಾರ್ಗೆಟ್​ ಕೊಟ್ಟಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣ ನಡೆಯುತ್ತಿರೋ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ನಿಗದಿತ 20 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 287 ರನ್​ ಕಲೆ ಹಾಕಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಹೈದರಾಬಾದ್​​ ಪರ ಓಪನರ್​ ಆಗಿ ಬಂದ ಟ್ರಾವಿಸ್​ ಹೆಡ್​ ಆರ್​​​ಸಿಬಿ ಬೌಲರ್​ಗಳ ಬೆಂಡೆತ್ತಿದ್ರು. ತಾನು ಎದುರಿಸಿ ಕೇವಲ 41 ಬಾಲ್​ನಲ್ಲಿ ಬರೋಬ್ಬರಿ 9 ಫೋರ್​​, 8 ಭರ್ಜರಿ ಸಿಕ್ಸರ್​ ಸಮೇತ 102 ರನ್​ ಸಿಡಿಸಿದ್ರು. 2024 ಐಪಿಎಲ್​ ಸೀಸನ್​ನಲ್ಲಿ ಅತೀ ವೇಗದ ಅದ್ಭುತ ಶತಕ ಸಿಡಿಸೋ ಮೂಲಕ ದಾಖಲೆ ಬರೆದ್ರು. ಇವರ ಸ್ಟ್ರೈಕ್​ ರೇಟ್​ 260 ಇತ್ತು. ಇಡೀ ಐಪಿಎಲ್​ನಲ್ಲೇ ವೇಗದ ಶತಕ ಸಿಡಿಸಿದ 4ನೇ ಬ್ಯಾಟರ್​ ಎನಿಸಿಕೊಂಡರು.

ಇನ್ನು ಅಭಿಶೇಕ್​ ಶರ್ಮಾ 22 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 34 ರನ್​ ಸಿಡಿಸಿದ್ರು. ಕ್ಲಾಸೆನ್​ 7 ಸಿಕ್ಸರ್​​, 3 ಫೋರ್​ನೊಂದಿಗೆ 67 ರನ್​ ಗಳಿಸೋ ಮೂಲಕ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಏಡನ್​ ಮರ್ಕ್ರಮ್​ 2 ಫೋರ್​, 2 ಸಿಕ್ಸರ್​ ಜತೆಗೆ 32 ಮತ್ತು ಅಬ್ದುಲ್​ ಸಮದ್​​ ಕೇವಲ 10 ಬಾಲ್​ನಲ್ಲಿ 37 ರನ್​ ಸಿಡಿಸಿದ್ರು. 3 ಸಿಕ್ಸರ್​​, 4 ಫೋರ್​ ಚಚ್ಚಿದ್ರು.

ಇದನ್ನೂ ಓದಿ: 8 ಭರ್ಜರಿ ಸಿಕ್ಸರ್​​.. 9 ಫೋರ್​​.. RCB ವಿರುದ್ಧ 39 ಬಾಲ್​ನಲ್ಲಿ ಶತಕ ಸಿಡಿಸಿ ದಾಖಲೆ ಬರೆದ ಸ್ಟಾರ್​ ಪ್ಲೇಯರ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಎಲ್ಲಾ ದಾಖಲೆ ಉಡೀಸ್​​; ಬರೋಬ್ಬರಿ 288 ರನ್​ ಬಿಗ್​ ಟಾರ್ಗೆಟ್​​; ಗೆಲ್ಲುತ್ತಾ ಆರ್​​​ಸಿಬಿ?

https://newsfirstlive.com/wp-content/uploads/2024/04/SRH_12.jpg

Load More