/newsfirstlive-kannada/media/post_attachments/wp-content/uploads/2024/05/Manish-Pandey-Mayank.jpg)
ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಐಪಿಎಲ್ ಫೈನಲ್​​ ಪಂದ್ಯದಲ್ಲಿ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಮುಖಾಮುಖಿ ಆಗುತ್ತಿವೆ.
ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಕ್ಯಾಪ್ಟನ್​​ ಪ್ಯಾಟ್​ ಕಮಿನ್ಸ್​​​ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶ್ರೇಯಸ್​ ಅಯ್ಯರ್​ ನಾಯಕತ್ವದ ಕೆಕೆಆರ್​​ ಬೌಲಿಂಗ್​ ಮಾಡಲಿದೆ. ಈ ಪಂದ್ಯಕ್ಕೆ ಹೈದರಾಬಾದ್​​ ತಂಡದಲ್ಲಿ ಸಮದ್​ ಬದಲಿಗೆ ಶಬಾಜ್​​ ಬಂದಿದ್ದಾರೆ ಎಂದು ಪ್ಯಾಟ್​ ಕಮಿನ್ಸ್​ ಹೇಳಿದ್ದಾರೆ.
ಇನ್ನೊಂದೆಡೆ ಶ್ರೇಯಸ್​ ಅಯ್ಯರ್​​ ನಮಗೂ ಚೇಸಿಂಗ್​ ಬೇಕಿತ್ತು. ಫಸ್ಟ್​ ಬೌಲಿಂಗ್​​ ಮಾಡುವ ಪ್ಲಾನ್​​ ನಮ್ಮದು ಇದೆ. ನಾವು ಸೇಮ್​ ಟೀಮ್​ ಜತೆಗೆ ಹೋಗಲಿದ್ದೇವೆ. ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಹಾಗಾಗಿ ಎರಡು ತಂಡಗಳಿಗೂ ಬೇಕಾದಂತೆ ಗೇಮ್​​ ನಡೆಯುತ್ತಿದೆ.
ಕೆಕೆಆರ್ ಸುನಿಲ್ ನರೈನ್ ಅವರ ಆರಂಭಿಕ ಜೊತೆಗಾರ ಫಿಲಿಪ್ ಸಾಲ್ಟ್ ಅವರನ್ನು ಕಳೆದುಕೊಂಡಿದೆ. ಫಿಲಿಪ್​ ಸಾಲ್ಟ್​ ಅಂತಾರಾಷ್ಟ್ರೀಯ ಕರ್ತವ್ಯಕ್ಕಾಗಿ ತಮ್ಮ ತವರು ಇಂಗ್ಲೆಂಡ್‌ಗೆ ಮರಳಿದ್ದಾರೆ. ಇದು ಕೆಕೆಆರ್​ಗೆ ಆಘಾತದ ಸುದ್ದಿಯಾಗಿದೆ. ಎರಡು ತಂಡಗಳಲ್ಲೂ ಕನ್ನಡಿಗರಿಗೆ ಅವಕಾಶ ನೀಡಿಲ್ಲ, ಮಯಾಂಕ್​​ ಮತ್ತು ಮನೀಶ್​ ಪಾಂಡೆ ಅವರನ್ನು ಬೆಂಚ್​ ಕಾಯಿಸಲಾಗಿದೆ.
ಉಭಯ ತಂಡಗಳ ಪ್ಲೇಯಿಂಗ್​ ಎಲೆವೆನ್​​ ಹೀಗಿದೆ..!
ಕೆಕೆಆರ್​​​: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ವೈಭವ್​ ಅರೋರಾ, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
ಹೈದರಾಬಾದ್​​​: ಟ್ರಾವೀಸ್​ ಹೆಡ್​​, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ, ರಾಹುಲ್ ತ್ರಿಪಾಠಿ, ಹೆನ್ರಿಚ್ ಕ್ಲಾಸೆನ್, ಏಡನ್​ ಮರ್ಕ್ರಮ್​​, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಜಯದೇವ್​ ಉನಾದ್ಕಟ್​, ಟಿ ನಟರಾಜನ್.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us