/newsfirstlive-kannada/media/post_attachments/wp-content/uploads/2024/06/KOHLI-JAISWAL.jpg)
ಟೀಮ್ ಇಂಡಿಯಾದ ಸೂಪರ್-8 ಅಭಿಯಾನಕ್ಕೆ ಕೌಂಟ್ಡೌನ್ ಶುರುವಾಗಿದೆ. ರೋಹಿತ್ ಅಂಡ್ ಗ್ಯಾಂಗ್ನ ಸಿದ್ಧತೆ ಕೂಡ ಜೋರಾಗಿದೆ. ಇದರ ನಡುವೆ ಟೀಮ್ ಇಂಡಿಯಾಗೆ ಹೊಸ ಟೆನ್ಷನ್ ಶುರುವಾಗಿದೆ. ಇದರಿಂದ ಹೇಗಪ್ಪಾ ಪಾರಾಗೋದು ಅಂತ ದೊಡ್ಡ ಚಿಂತೆಯಾಗಿದೆ.
ಟಿ20 ವಿಶ್ವಕಪ್ ಸಂಗ್ರಾಮದಲ್ಲಿ ಟೀಮ್ ಇಂಡಿಯಾ ಆಟಗಾರರರು ಬಳಲಿದ್ದಾರಾ? ಇಂತಹ ಟಾಕ್ಸ್ ಇದೀಗ ಕೇಳಿ ಬರ್ತಿದೆ. ಈಗಾಗ್ಲೇ ರೋಹಿತ್ ಶರ್ಮಾ ಗ್ರೂಪ್ ಸ್ಟೇಜ್ನಲ್ಲಿ ಒಂದು ಸೋಲನ್ನರಿದೇ ಗ್ರ್ಯಾಂಡ್ ಆಗಿ ಸೂಪರ್-8ಗೆ ಎಂಟ್ರಿಕೊಟ್ಟಿದೆ. ಇದೇ ಹೊತ್ತಲ್ಲಿ ಭಾರತ ತಂಡದ ಆಟಗಾರರರು ಟ್ರಾವೆಲ್ನಿಂದ ಬಳಲಿದ್ದಾರಾ ಅನ್ನೋ ಬಿಸಿಸಿಐ ಚರ್ಚೆ ನಡೆಯುತ್ತಿದೆ.
ಆರು ದಿನ 3 ಮ್ಯಾಚ್.. 858 ಕಿ.ಮೀ ಜರ್ನಿ..!
ಟೀಮ್ ಇಂಡಿಯಾದ ಸೂಪರ್-8 ಅಭಿಮಾನ ನಾಳೆಯಿಂದ ಆರಂಭಗೊಳ್ಳಲಿದೆ. ಆರು ದಿನದಲ್ಲಿ ಮೂರು ಪಂದ್ಯಗಳನ್ನ ಆಡಲಿದ್ದು ಈ ಅವಧಿಯಲ್ಲಿ ಒಟ್ಟು 858 ಕಿಲೋ ಮೀಟರ್ ಪ್ರಯಾಣ ಮಾಡಲಿದೆ. ರೆಸ್ಟ್ ಅನ್ನೋದೆ ಕಮ್ಮಿ. ಫ್ಲೈಟ್ನಲ್ಲೆ ಹೆಚ್ಚು ಸಮಯ ಕಳೆಯೋದ್ರಿಂದ ಪ್ರಾಕ್ಟೀಸ್ ಹಾಗೂ ಸಿದ್ಧತೆಗೆ ಹೆಚ್ಚು ಸಮಯ ಸಿಗೋದಿಲ್ಲ. ಇದರಿಂದ ರಿಸಲ್ಟ್ ಮೇಲೆ ಪರಿಣಾಮ ಬೀರುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ:ಉಮಾಪತಿ ಹೇಳಿಕೆಯಿಂದ ದರ್ಶನ್ಗೆ ಮತ್ತೊಂದು ಸಂಕಷ್ಟ.. ಗೃಹ ಇಲಾಖೆಯಿಂದ ಶಾಕಿಂಗ್ ನಿರ್ಧಾರ..?
ಫ್ಲೋರಿಡಾ TO ಬಾರ್ಬಡೋಸ್.. 3213 ಕಿ.ಮೀ ಟ್ರಾವೆಲ್..
ಈಗಾಗ್ಲೇ ಟೀಮ್ ಇಂಡಿಯಾ ಫ್ಲೋರಿಡಾದಿಂದ ಬಾರ್ಬಡೋಸ್ಗೆ ಟ್ರಾವೆಲ್ ಮಾಡಿದೆ. ಆಟಗಾರರು 3,213 ಕಿ.ಮೀ ಫ್ಲೈಟ್ನಲ್ಲಿ ಪ್ರಯಾಣಿಸಿ ಬಳಲಿದ್ದಾರೆ. ಈ ದೈಹಿಕ ದಣಿವರಿಕೆ ನಡುವೆ ಭಾರತ ತಂಡ ಜೂನ್ 20 ರಂದು ಅಪ್ಘಾನಿಸ್ತಾನ ತಂಡವನ್ನ ಎದುರಿಸಲಿದೆ.
ಬಾರ್ಬಡೋಸ್ TO ಆಂಟಿಗುವಾ.. 495 ಕಿ.ಮೀ ಪ್ರಯಾಣ..
ಗುರುವಾರ ಅಪ್ಘಾನಿಸ್ತಾನ ವಿರುದ್ಧ ಆಡುವ ಟೀಮ್ ಇಂಡಿಯಾ ಒಂದು ದಿನ ಗ್ಯಾಪ್ ಬಳಿಕ ಆಂಟಿಗುವಾಗೆ ಪ್ರಯಾಣ ಬೆಳೆಸಲಿದೆ. ಬಾರ್ಬಡೋಸ್ನಿಂದ ಆಂಟಿಗುವಾ ಬರೋಬ್ಬರಿ 495 ಕಿಲೋ ಮೀಟರ್ ಕ್ರಮಿಸಲಿದೆ. ಜೂನ್ 22 ರಂದು ಬಾಂಗ್ಲಾದೇಶ ಎದುರು ಸೆಣಸಾಡಲಿದೆ.
ಇದನ್ನೂ ಓದಿ:ಸಂಸದನ ಪುತ್ರಿಯಿಂದ BMW ಕಾರಿನಲ್ಲಿ ಬಂದು ಹಿಟ್ ಅಂಡ್ ರನ್.. ಯುವಕ ಸಾವು.. ಮತ್ತೊಂದು ಹೈಪ್ರೊಫೈಲ್ ಕೇಸ್..!
ಆಂಟಿಗುವಾ TO ಸೇಂಟ್ ಲೂಸಿಯಾ..363 ಕಿ.ಮೀ ಜರ್ನಿ..
ಆಂಟಿಗುವಾದಲ್ಲಿ ಬಾಂಗ್ಲಾವನ್ನ ಎದುರಿಸೋ ಟೀಮ್ ಇಂಡಿಯಾ ಅಲ್ಲಿಂದ ನೇರವಾಗಿ ಸೇಂಟ್ ಲೂಸಿಯಾಗೆ ಫ್ಲೈಟ್ ಏರಲಿದೆ. ಪ್ರಯಾಣದ ಅಂತರ 363 ಕಿಲೋ ಮೀಟರ್. ಇಲ್ಲಿ ಒಂದು ದಿನ ವಿಶ್ರಾಂತಿ ಪಡೆದು ಮರುದಿನ ಬಲಿಷ್ಠ ಆಸ್ಟ್ರೇಲಿಯಾ ಎದುರು ತೊಡೆ ತಟ್ಟಲಿದೆ. ಬಿಡುವಿಲ್ಲದ ಪ್ರಯಾಣದ ಬಗ್ಗೆ ಕ್ಯಾಪ್ಟನ್ ರೋಹಿತ್ ಮಾತನಾಡಿದ್ದಾರೆ. ಇದು ನಿರಂತರ ಕ್ರಿಕೆಟ್ ಅನ್ನಿಸಿದ್ರೂ ಎಲ್ಲವನ್ನ ಎದುರಿಸೋಕೆ ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ.
ಒಮ್ಮೆ ನಾವು ಮೊದಲ ಪಂದ್ಯ ಆಡಿದ್ರೆ ಉಳಿದ ಎರಡು ಪಂದ್ಯಗಳನ್ನ ಮೂರು ಅಥವಾ ನಾಲ್ಕು ದಿನಗಳ ಅಂತರದಲ್ಲಿ ಆಡುತ್ತೇವೆ. ಇದು ನಿರಂತರ ಕ್ರಿಕೆಟ್ ಅನ್ನಿಸುತ್ತೆ ನಿಜ. ಆದರೆ ನಾವು ಇದನ್ನ ಬಳಸಿಕೊಳ್ಳತ್ತೇವೆ. ಹೆಚ್ಚು ಪ್ರಯಾಣದ ಜೊತೆ ಹೆಚ್ಚು ಆಟವನ್ನ ಆಡುತ್ತೇವೆ. ಇದರಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ-ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಇದನ್ನೂ ಓದಿ:ರೋಹಿತ್ ಬದುಕು ಬದಲಿಸಿದ್ದು ಅದೊಂದು ಜಾಹೀರಾತು.. ಮ್ಯಾಗಿಮ್ಯಾನ್ ಹಿಟ್ಮ್ಯಾನ್ ಆಗಿದ್ದೇ ರೋಚಕ..!
ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಮುಂದಿನ ಒಂದು ವಾರದಲ್ಲಿ ಮ್ಯಾರಥಾನ್ ಟ್ರಾವೆಲ್ ಇದೆ. ಸಿದ್ಧತೆ ಹೆಚ್ಚು ಸಮಯ ಇಲ್ಲ. ಸಣ್ಣ ಬಿಡುವು ಪಡೆದು ಎದುರಾಳಿ ಸಂಹಾರಕ್ಕೆ ಸಜ್ಜಾಗಬೇಕಿದೆ. ಈ ಮ್ಯಾರಥಾನ್ ಟ್ರಾವೆಲ್ ಸವಾಲನ್ನು ಟೀಮ್ ಇಂಡಿಯಾ ಆಟಗಾರರು ಹೇಗೆ ನಿಭಾಯಿಸ್ತಾರೆ ಅನ್ನೊದನ್ನು ಕಾದುನೋಡೋಣ.
ಇದನ್ನೂ ಓದಿ:ಸೂಪರ್ 8ರಲ್ಲಿ ಮೂವರು ಫಿಕ್ಸ್.. ಭಾರತದ ಗೆಲುವಿಗೆ ಬೇಕೇಬೇಕು ಈ ಸ್ಪಿನ್ ಟ್ವಿನ್ಸ್ ಜೋಡಿ.. ರೋಹಿತ್ ಆಯ್ಕೆ ಏನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್