ಐಪಿಎಲ್ ಹಬ್ಬದ ಸೂಪರ್ ಸಿಕ್ಸರ್ಸ್ ಇಲ್ಲಿವೆ
ಪಠಾಣ್ ಹಾಡಿಗೆ ಶ್ರೇಯಸ್ ಬೊಂಬಾಟ್ ಡ್ಯಾನ್ಸ್
ಹೈದ್ರಾಬಾದ್ ಬಿರಿಯಾನಿ ಸವಿದ ತಿಲಕ್ ವರ್ಮಾ
ಕಿಂಗ್ ಕೊಹ್ಲಿಗೆ ಹಾಡಿನ ಗೌರವ
ಐಪಿಎಲ್ ತಂಡಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ವಿರಾಟ್ ಕೊಹ್ಲಿಗೆ ಹಾಡಿನ ಗೌರವ ಸಲ್ಲಿಸಿದೆ. ದಿಗ್ಗಜ ಕಿಂಗ್ ಕೊಹ್ಲಿ ಹಾಗೂ ಕಗಿಸೋ ರಬಾಡ ಜೊತೆಗಿರೋ ವಿಡಿಯೋವನ್ನು ರಿಲೀಸ್ ಮಾಡಿದೆ. ವೇಗಿ ಕಗಿಸೋ ರಬಾಡ ಬೌಲರ್ ಪಂಜಾಬಿ ಹಾಡಿಗೆ ಫಿದಾ ಆಗಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ದಿಗ್ಗಜ ಕೊಹ್ಲಿ ಜೊತೆ ಸಮಯ ಕಳೆಯುವುದು ಅತ್ಯುತ್ತಮ ಕ್ಷಣ ಎಂದು ಹೇಳಿಕೊಂಡಿದ್ದಾರೆ.
𝐊𝐢𝐧𝐠 𝐊𝐨𝐡𝐥𝐢 𝐰𝐚𝐫𝐠𝐚 𝐧𝐚𝐢𝐲𝐨 𝐤𝐨𝐢 𝐡𝐨𝐫 𝐚𝐞! 👑#SaddaPunjab #PunjabKings #JazbaHaiPunjabi #TATAIPL2024 #RCBvPBKS pic.twitter.com/oj1PYcUnR4
— Punjab Kings (@PunjabKingsIPL) March 26, 2024
ಪಠಾಣ್ ಹಾಡಿಗೆ ಶ್ರೇಯಸ್ ಬೊಂಬಾಟ್ ಡ್ಯಾನ್ಸ್
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಡ್ಯಾನ್ಸ್ ಪ್ರತಿಭೆ ಮತ್ತೊಮ್ಮೆ ಅನಾವರಣಗೊಂಡಿದೆ. ಸ್ಟಾರ್ ಸ್ಪೋಟ್ಸ್ನ ಕಾರ್ಯಕ್ರವೊಂದರಲ್ಲಿ ಬ್ಲಾಕ್ಬಸ್ಟರ್ ಪಠಾಣ್ ಚಿತ್ರದ ಜೂಮೆ ಜೊ ಹಾಡಿಗೆ ಅಭಿಮಾನಿಗಳ ಜೊತೆ ಸೇರಿ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಶಾರುಖ್ ಖಾನ್ರಂತೆ ಡ್ಯಾನ್ಸ್ ಮಾಡಿರೋ ಶ್ರೇಯಸ್ ಅಯ್ಯರ್ ಅವರನ್ನ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಅವರ ಡ್ಯಾನ್ಸ್ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Captain Shreyas Iyer sets the dance floor on fire with his moves on 'Jhoome Jo Pathaan'! Embracing the rhythm and spirit of the game, while paying homage to the king of Bollywood, Shah Rukh Khan. 🔥💜 #ShahRukhKhan #ShreyasIyer #KKR pic.twitter.com/UIokfD51Nl
— SHAH RUKH KHAN FANS ASSOCIATION (@Srk_bangalore) March 26, 2024
ಹೈದ್ರಾಬಾದ್ ಬಿರಿಯಾನಿ ಸವಿದ ತಿಲಕ್ ವರ್ಮಾ
ಯುವ ಬ್ಯಾಟ್ಸ್ಮನ್ ಹೈದ್ರಾಬಾದ್ ಬಿರಿಯಾನಿ ಸವಿದಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಐಪಿಎಲ್ ಪಂದ್ಯವನ್ನಾಡಲು ಹೈದ್ರಾಬಾದ್ಗೆ ಬಂದಿಳಿದಿದೆ. ಈ ವೇಳೆ ಲೋಕಲ್ ಬಾಯ್ ತಿಲಕ್ ವರ್ಮಾ ಹೈದ್ರಾಬಾದ್ ಬಿರಿಯಾನಿ ಸವಿದಿದ್ದಾರೆ. ಇವರ ಜೊತೆ ಉಳಿದ ಆಟಗಾರರು ಸಹ ಹೈದ್ರಾಬಾದ್ ಬಿರಿಯಾನಿಯನ್ನ ಸವಿದು ಸಂತಸಗೊಂಡಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳ ಅಬ್ಬರಕ್ಕೆ ಧೋನಿ ದಾಖಲೆ ಬ್ರೇಕ್.. ಇಲ್ಲಿ ಫ್ಯಾನ್ಸ್ ಕೂಡ ರೆಕಾರ್ಡ್ ಬ್ರೇಕ್ ಮಾಡ್ತಾರೆ..!
ರಮಣ್ದೀಪ್ ಸಿಂಗ್ ಭರ್ಜರಿ ಪ್ರಾಕ್ಟೀಸ್..!
ಕೆಕೆಆರ್ ತಂಡದ ಯಂಗ್ಬ್ಯಾಟರ್ ರಮನ್ದೀಪ್ ಸಿಂಗ್ ಮುಂದಿನ ಐಪಿಎಲ್ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದ ನೆಟ್ಸ್ನಲ್ಲಿ ಬೆವರು ಹರಿಸಿದ್ದು, ದೊಡ್ಡ ಶಾಟ್ಸ್ ಆಡಿ ಗಮನ ಸೆಳೆದಿದ್ದಾರೆ. ಟ್ರೈನಿಂಗ್ ಸೆಷನ್ನಲ್ಲಿ ಸ್ಪಿನ್ನರ್ಗಳನ್ನ ಹೆಚ್ಚು ಟಾರ್ಗೆಟ್ ಮಾಡಿದ್ದು ಕಂಡು ಬಂದಿದೆ. ಕೆಕೆಆರ್ ತಂಡ ಶುಕ್ರವಾರ ನಡೆಯುವ ಪಂದ್ಯದಲ್ಲಿ ಆರ್ಸಿಬಿ ತಂಡವನ್ನ ಎದುರಿಸಲಿದೆ.
ಹೈದ್ರಾಬಾದ್ನಲ್ಲಿ ರೋಹಿತ್ ಶರ್ಮಾ ಕ್ರೇಜ್..!
ಹೈದ್ರಾಬಾದ್ನಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಸನ್ ರೈಸರ್ಸ್ ಎದುರಿನ ಪಂದ್ಯಕ್ಕಾಗಿ ಹೈದ್ರಾಬಾದ್ ಏರ್ಪೋರ್ಟ್ಗೆ ರೋಹಿತ್ ಶರ್ಮಾ ಆಗಮಿಸಿದ್ರು. ಈ ವೇಳೆ ರೋಹಿತ್ ಶಮಾರನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದರು. ಫೋಟೋ ಹಾಗೂ ವಿಡಿಯೋ ಮಾಡಿಕೊಂಡರು. ಇದೇ ವೇಳೆ ಫ್ಯಾನ್ಸ್ಗೆ ರೋಹಿತ್ ಹಾಯ್ ಹೇಳಿ ಖುಷಿ ಪಡಿಸಿದ್ರು.
THE CRAZE OF ROHIT SHARMA 🙇
AT HYDERABAD….💥🔥🔥🔥#RohitSharma𓃵pic.twitter.com/UPOpLxG07O— _Hitman Veera_ 45 𓃵ᵀᴴᴬᴸᴬ (@veeraragavan45) March 26, 2024
ಅಭಿಮಾನಿ ಬಿಡಿಸಿದ ಚಿತ್ರಕ್ಕೆ ಕಮಿನ್ಸ್ ಫಿದಾ!
ಅಭಿಮಾನಿ ಬಿಡಿಸಿದ ಚಿತ್ರಕ್ಕೆ ಸನ್ ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಫಿದಾ ಆಗಿದ್ದಾರೆ. ಸನ್ ರೈಸರ್ಸ್ ಅಭಿಮಾನಿಯೋರ್ವ ನಾಯಕ ಪ್ಯಾಟ್ ಕಮಿನ್ಸ್ರ ಚಿತ್ರವನ್ನ ಅದ್ಬುತವಾಗಿ ಬಿಡಿಸಿದ್ರು. ಇದಕ್ಕೆ ಫುಲ್ ಮಾರ್ಕ್ಸ್ ನೀಡಿದ ಕಮಿನ್ಸ್, ಚಿತ್ರದ ಮೇಲೆ ಹಸ್ತಲಾಘವ ನೀಡಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ವಿಡಿಯೋವನ್ನ ಸನ್ ರೈಸರ್ಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್