newsfirstkannada.com

ಬಾಬಾ ರಾಮ್​ದೇವ್ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡ; ಕೇಂದ್ರ ಸರ್ಕಾರಕ್ಕೂ ಚಾಟಿ..!

Share :

Published April 11, 2024 at 7:38am

    ಕ್ಷಮಾಪಣೆ ತಿರಸ್ಕರಿಸಿ, ತಪ್ಪಿಗೆ ಶಿಕ್ಷೆಯಾಗಬೇಕೆಂದ ನ್ಯಾಯಾಲಯ

    ಉತ್ತರಾಖಂಡ್ ಸರ್ಕಾರದ ವಿರುದ್ಧವೂ ಸುಪ್ರೀಂ ಕೋರ್ಟ್​ ಕಿಡಿ

    ‘ನಿಮಗೆ ಪ್ರಚಾರ ಬೇಕು, ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ’

ಕೊರೊನಾ ಸಮಯದಲ್ಲಿ ಪ್ರಸಾರ ಮಾಡಿದ ಜಾಹೀರಾತುಗಳಿಂದ ಪತಂಜಲಿ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಒಂದಲ್ಲ ಎರಡಲ್ಲ ಹಲವು ಬಾರಿ ಕೋರ್ಟ್​ಗೆ ಹಾಜರಾಗಲು ಹೇಳಿದ್ರೂ ಬರದಿದ್ದಕ್ಕೆ ಬಾಬಾ ರಾಮ್​ದೇವ್ ವಿರುದ್ಧ ಸುಪ್ರೀಂ ಕೋರ್ಟ್​ ಗರಂ ಆಗಿದ್ದು ತರಾಟೆಗೆ ತೆಗೆದುಕೊಂಡಿದೆ.

ಪತಂಜಲಿ.. ಒಂದಿಲ್ಲೊಂದು ವಿವಾದಗಳನ್ನ ತನ್ನ ಸುತ್ತ ಸುತ್ತಿಕೊಂಡೇ ಸದಾ ಸುದ್ದಿಯಲ್ಲಿರುತ್ತೆ. ಸದ್ಯ ತನ್ನ ಜಾಹೀರಾತಿನಿಂದಲೇ ಕೋರ್ಟ್​ ಕಟಕಟೆಯಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಜಾಹೀರಾತು ವಿಚಾರದಲ್ಲಿ ಪತಂಜಲಿ ಸಂಸ್ಥೆಯ ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧ ಸುಪ್ರೀಂ ಕೋರ್ಟ್ ನಿಗಿನಿಗಿಯಾಗಿದೆ. ಪತಂಜಲಿ ಸಂಸ್ಥಾಪಕರು ಮಾಡಿದ ಕ್ಷಮಯಾಚನೆಯನ್ನು ಕೋರ್ಟ್ ತಿರಸ್ಕರಿಸುವುದಾಗಿ ಹೇಳಿದೆ. ಕ್ಷಮೆಯಾಚನೆ ಸಾಲದು, ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಆಗಬೇಕು ಅಂತ ಹೇಳಿದೆ.

ಇದನ್ನೂ ಓದಿ: ಆರ್​ಸಿಬಿಗೆ ಇವತ್ತು ಮುಂಬೈ ಇಂಡಿಯನ್ಸ್​​ ಸವಾಲ್; ಪ್ಲೇಯಿಂಗ್​-11ರಲ್ಲಿ ಭಾರೀ ಬದಲಾವಣೆ?

‘ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ’
ಈ ಪ್ರಕರಣದಲ್ಲಿ ನಾವು ಉದಾರವಾಗಿದ್ದೇವೆ ಎನಿಸುತ್ತಿದೆ. ನಮ್ಮ ಕೋರ್ಟ್ ಆದೇಶಕ್ಕೆ ನೀವೇನು ಬೆಲೆ ಕೊಟ್ಟಿರುವಿರಿ, ನಿಮ್ಮ ಕ್ಷಮೆಯಾಚನೆಗೂ ಅಷ್ಟೇ ಬೆಲೆ ಕೊಡುತ್ತೇವೆ. ನಾಮಕಾವಸ್ತೆಗೆ ಕ್ಷಮೆಯಾಚಿಸಿದಂತಿದೆ. ಏನೋ ತಪ್ಪಿಸಿಕೊಳ್ಳಬೇಕೆಂದು ಇದನ್ನು ಮಾಡಿದಂತಿದೆ. ನಿಮ್ಮ ಅಫಿಡವಿಟ್ ಒಪ್ಪಲು ನಿರಾಕರಿಸುತ್ತೇವೆ. ನಮ್ಮ ಆದೇಶಗಳನ್ನು ಬೇಕಂತಲೇ ಪದೇ ಪದೆ ಉಲ್ಲಂಘನೆ ಮಾಡಿದ್ದೀರಿ ಎಂದು ಭಾವಿಸುತ್ತೇವೆ-ಸುಪ್ರೀಂಕೋರ್ಟ್​

ಕೇಂದ್ರ ಸರ್ಕಾರ, ಉತ್ತರಾಖಂಡ್ ಸರ್ಕಾರದ ವಿರುದ್ಧವೂ ಕೋರ್ಟ್​ ಕಿಡಿ
ಬಾಬಾ ರಾಮದೇವ್ ಮತ್ತು ಬಾಲಕೃಷ್ಣ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸುವ ಮುನ್ನ ಮಾಧ್ಯಮಗಳ ಮುಂದೆ ಹೋಗಿ ಮೊದಲು ಕ್ಷಮೆಯಾಚನೆ ವಿಚಾರ ತಿಳಿಸಿದ್ದಕ್ಕೆ ಕೋರ್ಟ್ ಗರಂ ಆಗಿದೆ. ನಿಮಗೆ ಪ್ರಚಾರ ಮಾತ್ರ ಬೇಕು ಎಂದು ಸ್ಪಷ್ಟವಾಗಿ ಕಾಣುತ್ತಿದೆ. ಮನಸ್ಸಿನಿಂದ ನೀವು ಕ್ಷಮೆ ಯಾಚಿಸಿದಂತೆ ಅನಿಸುತ್ತಿಲ್ಲ. ನಮ್ಮ ಆದೇಶಗಳಿಗೆ ಕವಡೆಕಾಸು ಕಿಮ್ಮತ್ತು ಕೊಡದ ನಿಮ್ಮ ಕ್ಷಮೆಯಾಚನೆಗೆ ನಾವ್ಯಾಕೆ ಬೆಲೆ ಕೊಡಬೇಕು ಎಂದು ನ್ಯಾಯಾಲಯ ಕಿಡಿಕಾರಿದೆ. ಮಾತ್ರವಲ್ಲದೆ ಪತಂಜಲಿಯಿಂದ ದಾರಿ ತಪ್ಪಿಸುವಂತಹ ಜಾಹೀರಾತು ಬರುತ್ತಿದ್ರೂ ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ್ ಅಧಿಕಾರಿಗಳು ಯಾಕೆ ಯಾವ ಕ್ರಮ ಕೈಗೊಂಡಿಲ್ಲ ಅಂತ ನ್ಯಾಯಾಲಯ ಕೇಳಿದೆ.

ಇದನ್ನೂ ಓದಿ: ಫ್ಯಾಮಿಲಿ ಎಮರ್ಜೆನ್ಸಿ’ ಎಂದು ಕೆಲಸಕ್ಕೆ ಚಕ್ಕರ್.​. ಸುಂದರಿಗೆ ಫಜೀತಿ ತಂದಿಟ್ಟ ರಾವತ್ ಬಾರಿಸಿದ ಬೌಂಡರಿ..!

ದಯವಿಟ್ಟು ಕ್ಷಮಿಸಿ ಎಂದು ಸುಪ್ರೀಂಕೋರ್ಟ್​ಗೆ ಅಂಗಲಾಚಿದ ಅಧಿಕಾರಿ

ಪತಂಜಲಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳದಿದ್ದಕ್ಕೆ ನ್ಯಾಯಾಲಯ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡಿದೆ. ಇದರಿಂದ ಕಂಗಾಲಾದ ಉತ್ತರಾಖಂಡ್​ ರಾಜ್ಯದ ಆಹಾರ ಮತ್ತು ಔಷಧ ಆಡಳಿತದ ಜಂಟಿ ನಿರ್ದೇಶಕರು ಕೋರ್ಟ್​ಗೆ ಕೈ ಮುಗಿದು ನನ್ನನ್ನು ಕ್ಷಮಿಸಿ ಅಂತ ಅಂಗಲಾಚಿದ್ದಾರೆ. ನಾನು 2023ರಲ್ಲಿ ಬಂದಿದ್ದು, ಇದು ನನಗಿಂತ ಮೊದಲಾಗಿದ್ದು ಅಂತ ಹೇಳಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕ್ಯಾರೇ ಎನ್ನದ ಕೋರ್ಟ್​ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡಿದೆ. ಒಟ್ಟಾರೆ ಕೊರೊನಾ ಟೈಮ್​ನಲ್ಲಿ ಪ್ರಸಾರ ಮಾಡಿದ ಜಾಹೀರಾತುಗಳಿಂದ ಪತಂಜಲಿ ಸಂಕಷ್ಟಕ್ಕೆ ಸಿಲುಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಬಾ ರಾಮ್​ದೇವ್ ವಿರುದ್ಧ ಸುಪ್ರೀಂ ಕೋರ್ಟ್ ಕೆಂಡ; ಕೇಂದ್ರ ಸರ್ಕಾರಕ್ಕೂ ಚಾಟಿ..!

https://newsfirstlive.com/wp-content/uploads/2024/04/BABA-RAM-DEV.jpg

Load More