newsfirstkannada.com

ಮತ್ತೆ ಯಡವಟ್ಟು.. ಕ್ಷಮೆ ಕೇಳಿದ ರಾಮ್‌ದೇವ್‌ಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್; ಹೇಳಿದ್ದೇನು?

Share :

Published April 23, 2024 at 2:46pm

    ತಪ್ಪು ದಾರಿಗೆಳೆಯುವ ಜಾಹೀರಾತು ಬಗ್ಗೆ ಕ್ಷಮೆ ಕೇಳಿದ್ದೇವೆ ಎಂದ ಬಾಬಾ

    ಕ್ಷಮೆಗಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಪತಂಜಲಿ

    ನೀವು ಖರ್ಚು ಮಾಡಿದ ಹಣದ ಬಗ್ಗೆ ಚಿಂತೆ ಇಲ್ಲ ಎಂದು ಸುಪ್ರೀಂ ಗರಂ

ನವದೆಹಲಿ: ಪತಂಜಲಿ ಕಂಪನಿಯಿಂದ ತಪ್ಪು ದಾರಿಗೆಳೆಯುವ ಜಾಹೀರಾತು ನೀಡಿದ್ದ ವಿಚಾರಕ್ಕೆ ಯೋಗಗುರು ಬಾಬಾ ರಾಮ್‌ದೇವ್ ವಿರುದ್ಧ ಸುಪ್ರೀಂಕೋರ್ಟ್ ಮತ್ತೆ ಗರಂ ಆಗಿದೆ. ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಖಡಕ್ ಸೂಚನೆ ನೀಡಿದೆ.

ತಪ್ಪು ದಾರಿಗೆಳೆಯುವ ಜಾಹೀರಾತು ಬಗ್ಗೆ ಕ್ಷಮೆ ಕೇಳಿ ಜಾಹೀರಾತು ನೀಡಿದ್ದೇವೆ. ಇದಕ್ಕಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದು ಪತಂಜಲಿ ಕಂಪನಿ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಈ ವಾದ ಆಲಿಸಿದ ಸುಪ್ರೀಂಕೋರ್ಟ್ ಮೊದಲಿನ ಜಾಹೀರಾತಿನಷ್ಟೇ ವಿಸ್ತಾರದಲ್ಲಿ ಕ್ಷಮೆಯನ್ನು ಕೇಳಿದ್ದೀರಾ ಎಂದು ಪ್ರಶ್ನಿಸಿದೆ. ಅದಕ್ಕೆ ಪತ್ರಿಕೆಗಳಲ್ಲಿ 10 ಲಕ್ಷ ರೂಪಾಯಿ ಖರ್ಚು ಮಾಡಿ ಕ್ಷಮೆ ಕೇಳಿದ್ದೇವೆ ಎಂದ ವಕೀಲರು ಹೇಳಿದರು.

ನೀವು ಖರ್ಚು ಮಾಡಿದ ಹಣದ ಬಗ್ಗೆ ನಮಗೆ ಚಿಂತೆ ಇಲ್ಲ ಎಂದ ಸುಪ್ರೀಂಕೋರ್ಟ್‌, ಕ್ಷಮೆಯನ್ನು ದೊಡ್ಡದಾಗಿ ಪತ್ರಿಕೆಗಳಲ್ಲಿ ಕೇಳಲಾಗಿದೆಯೇ ಎಂದು ಕೇಳಿದೆ. ಆಗ ಬಾಬಾ ರಾಮ್‌ದೇವ್ ಅವರು ಪತ್ರಿಕೆಗಳಲ್ಲಿ ದೊಡ್ಡದಾಗಿ ಕ್ಷಮೆ ಕೇಳುವುದಾಗಿ ಹೇಳಿದರು. ಇದಕ್ಕೆ ಒಂದು ವಾರಗಳ ಕಾಲ ಗಡುವು ನೀಡಿದ ಸುಪ್ರೀಂಕೋರ್ಟ್‌, ವಿಚಾರಣೆಯನ್ನು ಮುಂದೂಡಿದೆ.

ಇದನ್ನೂ ಓದಿ: ಹೆಂಡತಿಗೆ ‘ಪೋಲಿ’ ಮೆಸೇಜ್​ ಮಾಡ್ತಿದ್ದವನ ಕೊಲೆ ಮಾಡಿ ಪೊಲೀಸ್ ಸ್ಟೇಷನ್‌ಗೆ ಬಂದ ಪೂಜಾರಿ; ಆಗಿದ್ದೇನು? 

ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಕ್ಷಮೆಯಾಚನೆಯನ್ನು ಒಪ್ಪಿಕೊಂಡಿಲ್ಲ. ಪತ್ರಿಕೆಗಳಲ್ಲಿ ದೊಡ್ಡದಾಗಿ ಕ್ಷಮೆ ಕೇಳಲು ಸುಪ್ರೀಂಕೋರ್ಟ್ ಸೂಚಿಸಿದ್ದು, ಒಂದು ವಾರಗಳ ಕಾಲ ನ್ಯಾಯಾಂಗ ನಿಂದನೆ ಕೇಸ್ ವಿಚಾರಣೆಯನ್ನು ಮುಂದೂಡಲಾಗಿದೆ. ತಪ್ಪು ದಾರಿಗೆಳೆಯುವ ಜಾಹೀರಾತಿನ ಈ ಕೇಸ್‌ನಲ್ಲಿ ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆಯನ್ನು ಭಾಗಿದಾರ ಮಾಡಿಕೊಳ್ಳೋದು ಅಗತ್ಯ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಯಡವಟ್ಟು.. ಕ್ಷಮೆ ಕೇಳಿದ ರಾಮ್‌ದೇವ್‌ಗೆ ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್; ಹೇಳಿದ್ದೇನು?

https://newsfirstlive.com/wp-content/uploads/2024/04/Ramdev-1.jpg

Load More