newsfirstkannada.com

ಮಾಡೆಲ್​ ಜೊತೆ ಅಭಿಷೇಕ್​ ಶರ್ಮಾ ಲವ್.. ಆತ್ಮಹತ್ಯೆ ಕೇಸ್​ನಲ್ಲಿ ಹೊರ ಬಂದು ಬ್ಯಾಟ್​ ಬೀಸಿದ್ದೇ ರೋಚಕ

Share :

Published May 27, 2024 at 12:47pm

  ಪೋಲಿಸರ ನೋಟಿಸ್​​ನಿಂದ ಅಭಿಷೇಕ್​ಗೆ ಎದುರಾಗಿತ್ತು ಜೈಲಿನ ಭೀತಿ

  ಸಿಕ್ಸರ್ ಕಿಂಗ್ ತಯಾರಿಸಿದ ಯಂಗ್​ ಮಿಷನ್ ಗನ್ ಅಭಿಷೇಕ್ ಶರ್ಮಾ!

  ಕುಸಿದಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದು ಯುವಿ

ಪ್ರತಿ ಐಪಿಎಲ್​ ಸೀಸನ್​ನಲ್ಲಿ ಓರ್ವ ಸ್ಟಾರ್​ ಉದಯಿಸ್ತಾನೆ. ಭವಿಷ್ಯದ ಭರವಸೆ ಮೂಡಿಸ್ತಾನೆ. ಅಂಥಹ ಆಟಗಾರ 2024ರಲ್ಲೂ ಹುಟ್ಟಿಕೊಂಡಿದ್ದಾನೆ. ಆತನೇ ಸಿಕ್ಸರ್​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​ಗಳ ಸೂಪರ್ ಸ್ಟ್ರೈಕರ್​ ಅಭಿಷೇಕ್ ಶರ್ಮಾ. ಈ ಸೀಸನ್​ನಲ್ಲಿ ಈ ಯಂಗ್​ ಬ್ಯಾಟರ್​ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ್ದಾರೆ. ಆ ಪರ್ಫಾಮೆನ್ಸ್​​ನಷ್ಟೇ ರೋಚಕ ಈತನ ಸಕ್ಸಸ್​ ಸ್ಟೋರಿ.

ಅಭಿಷೇಕ್ ಶರ್ಮಾ ಪಕ್ಕಾ ಮಾಸ್.. ದಡಂ ದಶಗುಣಂ ಈತನ ಮೂಲ ಮಂತ್ರ. ಕ್ರೀಸ್​ನಲ್ಲಿ ಇರುವಷ್ಟು ಹೊತ್ತು ಸಿಕ್ಸರ್​ಗಳ ಅಭಿಷೇಕ ಫಿಕ್ಸ್​. ಪಕ್ಕಾ ಎಂಟಟೈನರ್​​. ವಿಶ್ವ ದರ್ಜೆಯ ಬೌಲರ್​ಗಳನ್ನೇ ಚಿಂದಿ ಉಡಾಯಿಸಿರುವ ಯಂಗ್ ಮಿಸೈಲ್​.. ಪ್ರಸಕ್ತ ಐಪಿಎಲ್​ನ ಸೆನ್ಸೇಷನ್. ನಿನ್ನೆ ಫೈನಲ್​​ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ಅದನ್ನ ಹೊರತುಪಡಿಸಿದ್ರೆ ಟೂರ್ನಿಯುದ್ಧಕ್ಕೂ ಅಬ್ಬರಿಸಿ ಬೊಬ್ಬಿರಿದ್ರು. ಆದರೆ ಐಪಿಎಲ್ ಆರಂಭಕ್ಕೂ ಮುನ್ನ ಈತನೇ ಜೀವನವೇ ದಿಕ್ಕು ತಪ್ಪಿತ್ತು.

ಸೂರತ್ ಮಾಡೆಲ್ ಆತ್ಮಹತ್ಯೆ ಕೇಸ್​ನಲ್ಲಿ ಹೆಸರು ತಳಕು!

ಜಸ್ಟ್​​​​​​​​​​​​​​​​​​​​​​​​​​​​​​​​​​​​​​​​​​​​​​​​ ಎರಡೇ 2 ತಿಂಗಳ ಹಿಂದೆ ಅಭಿಷೇಕ್, ಜೀವನ ಅಂದುಕೊಂಡಂತೆ ಇರಲಿಲ್ಲ. ಆಗಷ್ಟೇ ಐಪಿಎಲ್​​​ ಪ್ರಿಪರೇಷನ್​​ನಲ್ಲಿ ಆರಂಭಿಸಿದ್ದ ಅಭಿಷೇಕ್ ಮೇಲೆ ದೊಡ್ಡ ವಿವಾದವೇ ಕೇಳಿ ಬಂದಿತ್ತು. ಸೂರತ್ ಮೂಲದ ಮಾಡೆಲ್ ತನಿಯಾ ಸಿಂಗ್, ಆತ್ಮಹತ್ಯೆಯಲ್ಲಿ ಅಭಿಷೇಕ್ ಹೆಸರು ತಳಕು ಹಾಕಿಕೊಂಡಿತ್ತು. ಇದಕ್ಕೆಲ್ಲ ಕಾರಣವಾಗಿದ್ದು ಆ ಒಂದು ಲಾಸ್ಟ್ ಕಾಲ್​. ಆ ಮಾಡೆಲ್ ಆತ್ಮಹತ್ಯೆಗೂ ಮುನ್ನ ಅಭಿಷೇಕ್​ ಶರ್ಮಾಗೆ ಕಾಲ್ ಮಾಡಿದ್ರು. ಈ ಒಂದು ಕಾಲ್​​ ಇದು ಅಭಿಷೇಕ್ ಪಾಲಿಗೆ ಮುಗ್ಗಲ ಮುಳ್ಳಾಗಿತ್ತು. ಇದಕ್ಕೆ ಪೋಲಿಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೂಡ ನೀಡಿದ್ರು. ಇದ್ರಿಂದಾಗಿ ಸೆರವಾಸದ ಭೀತಿ ಎದುರಾಗಿತ್ತು.

ಕುಗ್ಗಿದ್ದ ಅಭಿಷೇಕ್​ ಐಪಿಎಲ್​ನಲ್ಲಿ ಪುಟಿದೆದ್ದಿದ್ದೇ ರೋಚಕ

ಫ್ಲಾಶ್​ಬ್ಯಾಕ್​ ಕಥೆ ಏನಪ್ಪಾ ಅಂದ್ರೆ, ತನಿಯಾ ಸಿಂಗ್ ಹಾಗೂ ಅಭಿಷೇಕ್ ಶರ್ಮಾ 1 ವರ್ಷಗಳ ಕಾಲ ರಿಲೇಷನ್​ಶಿಪ್​​​ನಲ್ಲಿದ್ರು. ಆದ್ರೆ, 2024ರ ಜನವರಿಯಲ್ಲಿ ಇಬ್ಬರ ನಡುವಿನ ವೈಮನಸ್ಸು, ಬ್ರೇಕ್​ ಆಪ್​ಗೆ ದಾರಿ ಮಾಡಿಕೊಟ್ಟಿತ್ತು. ಆದ್ರೆ, ತನಿಯಾ ಮಾತ್ರ, ಅಭಿಷೇಕ್​​ ಶರ್ಮಾಗೆ ಪದೇ ಪದೇ ಕಾಲ್ ಹಾಗೂ ಮಸೇಜ್ ಮಾಡುತ್ತಲೇ ಇದ್ದರು. ಅಂತರ ಕಾಯ್ದುಕೊಂಡಿದ್ದ ಅಭಿಷೇಕ್, ಐಪಿಎಲ್ ಪ್ರಿಪರೇಷನ್​ನಲ್ಲಿ ತಲ್ಲೀನರಾದ್ರು. ಮನನೊಂದಿದ್ದ ತನಿಯಾ, ಫೆಬ್ರವರಿ 19ರಂದು ಆತ್ಮಹತ್ಯಗೆ ಶರಣಾಗಿದ್ರು. ಆ ನಿರ್ಧಾರ ತೆಗೆದುಕೊಳ್ಳೋಕೂ ಮುನ್ನ ಮತ್ತೆ ಅಭಿಷೇಕ್​ಗೆ ಕರೆ ಮಾಡಿದ್ರು.

ಇದನ್ನೂ ಓದಿ: ಪುಣೆ ಪೋರ್ಶೆ​ ಕಾರು ಆಕ್ಸಿಡೆಂಟ್​​ ಕೇಸ್​ಗೆ ಬಿಗ್​ ಟ್ವಿಸ್ಟ್​.. ಇಬ್ಬರು ವೈದ್ಯರು ಅರೆಸ್ಟ್​; ಯಾಕೆ? 

ಪರಿಣಾಮ ಪ್ರೇಯಸಿಯ ಸೂಸೈಡ್​ ಕೇಸ್​​ನಲ್ಲಿ ಸಿಲುಕಿಕೊಂಡ ಅಭಿಷೇಕ್, ಆಂತರಿಕವಾಗಿ ಕುಗ್ಗಿ ಹೋಗಿದ್ರು. ಈತನ ಕರಿಯರ್​​​​​​​​​ಗೆ ಫುಲ್ ಸ್ಟಾಪ್ ಬಿತ್ತು ಅಂತಾನೇ ಹಲವರು ವ್ಯಾಖ್ಯಾನಿಸಿದ್ರು. ಆದ್ರೆ, ಅಂತಿಮವಾಗಿ ತನಿಖೆಯಲ್ಲಿ ನಿರಪರಾಧಿ ಎಂದು ಸಾಬೀತಾಯ್ತು. ಬಿಗ್​ ರಿಲೀಫ್​ ಸಿಕ್ಕ ಮೇಲೆ ಅಭಿಶೇಕ್​ ಕಂಪ್ಲೀಟ್​ ಬದಲಾದ್ರು.

ಟ್ರಾವಿಸ್ ಅಲ್ಲ.. ಅಭಿಷೇಕ್ ಸಕ್ಸಸ್​ ಗುಟ್ಟು ಯುವರಾಜ್..!

ಐಪಿಎಲ್​​ ಆರಂಭಕ್ಕೂ ಮುನ್ನ ವೈಯಕ್ತಿಕ ಜೀವನದಲ್ಲಿ ಬಿರುಗಾಳಿಯೇ ಎದ್ದಿತ್ತು. ದುರಾದೃಷ್ಟ ಬೆನ್ನುಬಿದ್ದಿತ್ತು. ಆತ್ಮಹತ್ಯೆಯ ಕೇಸ್​​, ಅಭಿಷೇಕ್​ ಕರಿಯರ್​ ಮೇಲೆಯೇ ಕಾರ್ಮೋಡ ಕವಿಯುವಂತೆ ಮಾಡಿತ್ತು. ಯುವ ಆಟಗಾರ ಕುಸಿದು ಹೋಗಿದ್ದ. ಆದ್ರೆ, ಐಪಿಎಲ್​ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ. ಸನ್ ರೈಸರ್ಸ್ ತಂಡದ ಮ್ಯಾಚ್​​​​​​​​​​​​ ವಿನ್ನರ್ ಎನಿಸಿಕೊಂಡ ಅಭಿಷೇಕ್​, ನಯಾ ಸೆನ್ಸೇಷನ್​ ಆಗಿ ಮಾರ್ಪಟ್ಟರು. ಇದಕ್ಕೆಲ್ಲ ಜೊತೆಗಾರ ಕಾರಣ ಟ್ರಾವಿಸ್ ಹೆಡ್ ಎನ್ನಲಾಗ್ತಿದೆ. ಆದ್ರೆ, ಈತನ ಸಿಕ್ಸರ್​ಗಳ ಹಿಂದಿನ ಸಿಕ್ರೇಟ್ ಮಾಜಿ ಆಟಗಾರ ಯುವರಾಜ್ ಸಿಂಗ್.

ಇದನ್ನೂ ಓದಿ: IPL ಫೈನಲ್​ ಮ್ಯಾಚ್​​ನಲ್ಲಿ ಕ್ಯಾಮೆರಾಮ್ಯಾನ್​ ಆಗಿ ಕೆಲಸ ಮಾಡಿದ್ರಾ ನಟ ಸೋನ್ ಸೂದ್​..?

ಬ್ಯಾಟಿಂಗ್​ನಲ್ಲಿ ಕೆಲ ಟೆಕ್ನಿಕಲ್​ ಚೇಂಜ್

ಐಪಿಎಲ್​ನಲ್ಲಿ ಅಭಿಶೇಕ್​ ಶರ್ಮಾ ಧೂಳ್​ ಎಬ್ಬಿಸಲು ಕಾರಣ ಮೆಂಟರ್, ಗುರು ಯುವರಾಜ್ ಸಿಂಗ್​​ ನೀಡಿದ ಸಲಹೆಗಳೇ ಆಗಿವೆ. ಅಭಿಷೇಕ್​​ ಬ್ಯಾಟಿಂಗ್​ ಅನ್ನ ಹತ್ತಿರದಿಂದ ಗಮನಿಸಿದ್ದ ಯುವರಾಜ್, ಬ್ಯಾಟಿಂಗ್​ನಲ್ಲಿ ಕೆಲ ಟೆಕ್ನಿಕಲ್​ ಚೇಂಜ್ ಮಾಡಿದ್ರು. ಜೊತೆಗೆ ಕುಸಿದು ಹೋಗಿದ್ದ ಯುವ ಆಟಗಾರನಲ್ಲಿ ಹೋರಾಟದ ಕಿಚ್ಚು ತುಂಬಿದ್ರು. ಇದು ಮುಷ್ತಾಕ್ ಆಲಿ ಹಾಗೂ ವಿಜಯ್ ಹಜಾರೆಯಲ್ಲಿ ವರ್ಕೌಟ್​ ಆಗಿತ್ತು. ಎಮರ್ಜಿಂಗ್ ಏಷ್ಯಾಕಪ್​​ನಲ್ಲೂ ಅಬ್ಬರಿಸಿದ್ರು. ಇದೀಗ ಪ್ರಸಕ್ತ ಐಪಿಎಲ್​​ನಲ್ಲಿ ಯುವಿ ಪಾಠದ ನೆರವಿನಿಂದ ಘರ್ಜಿಸಿದ್ರು.

ಇದನ್ನೂ ಓದಿ: KKRTC ಬಸ್​- ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಉಸಿರು ಚೆಲ್ಲಿದ ಮೂವರು ಯುವಕರು​

ಅಭಿಷೇಕ್​ ಶರ್ಮಾಗೀಗ 23 ವರ್ಷ. ಈ ಚಿಕ್ಕ ವಯಸ್ಸಿನಲ್ಲಿ, ಜೀವನದಲ್ಲಿ ಎದುರಾದ ದೊಡ್ಡ ಯುದ್ಧವನ್ನ, ಗೆದ್ದು ಬಂದ ಅಭಿಷೇಕ್​ ಶರ್ಮಾ, ಆನ್​ಫೀಲ್ಡ್​ನಲ್ಲೂ ತನ್ನ ಟ್ಯಾಲೆಂಟ್​ ನಿರೂಪಿಸಿದ್ದಾರೆ. ಬಿದ್ದಾಗ ಕುಗ್ಗದೆ ಮುನ್ನುಗ್ಗಿ ಯಶಸ್ಸು ಕಂಡಿರೋ ಈ ಯಂಗ್​ ಬ್ಯಾಟರ್​​ ಕಥೆ ಯುವ ಆಟಗಾರರಿಗೆ ನಿಜಕ್ಕೂ ಸ್ಪೂರ್ತಿಯ ಪಾಠ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮಾಡೆಲ್​ ಜೊತೆ ಅಭಿಷೇಕ್​ ಶರ್ಮಾ ಲವ್.. ಆತ್ಮಹತ್ಯೆ ಕೇಸ್​ನಲ್ಲಿ ಹೊರ ಬಂದು ಬ್ಯಾಟ್​ ಬೀಸಿದ್ದೇ ರೋಚಕ

https://newsfirstlive.com/wp-content/uploads/2024/05/ABHISHEK_SHARMA.jpg

Load More